Headlines

Amruthadhaare: ಭೂಮಿಕಾ ಪತ್ತೇದಾರಿಕೆ ಶುರು! ಕೊನೆಗೂ ಮಲ್ಲಿಗೆ ಕೂಡಿಬಂತು ಕಂಕಣ ಭಾಗ್ಯ?

Amruthadhaare: ಭೂಮಿಕಾ ಪತ್ತೇದಾರಿಕೆ ಶುರು! ಕೊನೆಗೂ ಮಲ್ಲಿಗೆ ಕೂಡಿಬಂತು ಕಂಕಣ ಭಾಗ್ಯ?

Amruthadhaare: ಭೂಮಿಕಾ ಪತ್ತೇದಾರಿಕೆ ಶುರು! ಕೊನೆಗೂ ಮಲ್ಲಿಗೆ ಕೂಡಿಬಂತು ಕಂಕಣ ಭಾಗ್ಯ?

ಅಮೃತಧಾರೆ ಧಾರಾವಾಹಿಯಲ್ಲಿ, ಜೈದೇವನಿಂದ ಕಳುಹಿಸಲ್ಪಟ್ಟ ಸುನಿಲ್‌ನ ಪ್ರೀತಿಯಲ್ಲಿ ಮಲ್ಲಿ ಸಿಲುಕಿದ್ದಾಳೆ. ಮಲ್ಲಿಯ ಬದಲಾದ ನಡವಳಿಕೆಯನ್ನು ಗಮನಿಸಿದ ಭೂಮಿಕಾ, ಸತ್ಯವನ್ನು ಪತ್ತೆಹಚ್ಚಲು ಮುಂದಾಗಿದ್ದಾಳೆ. ಈ ಹೊಸ ಪ್ರೇಮಕಥೆ ಮಲ್ಲಿಯ ಮರುಮದುವೆಗೆ ದಾರಿ ಮಾಡಿಕೊಡಬಹುದೇ ಎಂಬ ಕುತೂಹಲ ಮೂಡಿದೆ.

ಅಮೃತಧಾರೆ ಸೀರಿಯಲ್​ನಲ್ಲಿ (Amruthadhaare Serial) ಮಲ್ಲಿ ಕೊನೆಗೂ ಮಿನಿ ರೌಡಿ ಸುನಿಲ್​ ಮೋಹದ ಪಾಶದಲ್ಲಿ ಸಿಲುಕಿದ್ದಾಳೆ. ಜೈದೇವ ಅವನನ್ನು ಮೋಸ ಮಾಡಲು ಕಳಿಸಿದ್ದರೂ, ಸುನಿಲ್​ ರಿಯಲ್ಲಾಗಿಯೂ ಮಲ್ಲಿಯನ್ನು ಲವ್​ ಮಾಡ್ತಿದ್ದಾನೆ.

ಮಲ್ಲಿಗೆ ಇದಾಗಲೇ ಮದುವೆಯಾಗಿರುವುದು ಸುನಿಲ್​ಗೆ ಗೊತ್ತಿದೆ. ಆಕೆ ತನಗಿಂತ ದೊಡ್ಡವಳು ಎನ್ನುವುದೂ ಗೊತ್ತು. ಹಾಗಿದ್ದರೂ ಅವನು ರಿಯಲ್​ ಆಗಿ ಲವ್​ ಮಾಡ್ತಿದ್ದಾನೋ ಅಥ್ವಾ ಜೈದೇವ ಹೇಳಿದಂತೆ ಕೇಳ್ತಿದ್ದಾನೋ ಎನ್ನುವ ಅನುಮಾನವೂ ಇದೆ.

ಅದೇ ಇನ್ನೊಂದೆಡೆ, ಮಲ್ಲಿಯಲ್ಲಿ ಆಗ್ತಿರೋ ಬದಲಾವಣೆಗಳನ್ನು ಇದಾಗಲೇ ಭೂಮಿಕಾ ಸೂಕ್ಷ್ಮವಾಗಿ ನೋಡುತ್ತಿದ್ದಾಳೆ. ಫೋನ್​ ಬಂದಾಗ ಮಲ್ಲಿ ಕೊಡುವ ರಿಯಾಕ್ಷನ್​ ನೋಡಿ ಅವಳಿಗೆ ಡೌಟ್​ ಬಂದಿತ್ತು.

ಇದೀಗ ಮಲ್ಲಿ ಊಟದ ಬ್ಯಾಗ್​ ಬಿಟ್ಟು ಹೋದಳು ಎನ್ನುವ ಕಾರಣಕ್ಕೆ ಕಾಲೇಜ್​ಗೆ ಕೊಡಲು ಬಂದಾಗ, ಆಕೆ ತುಂಬಾ ಕ್ಲಾಸ್​ ಬಂಕ್​ ಮಾಡ್ತಿರೋದು ತಿಳಿದಿದೆ. ಸುನಿಲ್​ ಎನ್ನುವ ಹುಡುಗನ ಜೊತೆ ಆಕೆ ಕಾಣಿಸಿಕೊಳ್ತಿರೋ ಬಗ್ಗೆ ಎಲ್ಲರೂ ಮಾತನಾಡಿಕೊಳ್ತಿದ್ದಾರೆ ಎನ್ನುವುದು ತಿಳಿದಿದೆ.

ಇದೀಗ ಮಲ್ಲಿ ಆ ಹುಡುಗನನ್ನು ಮೀಟ್​ ಆಗಲು ಬಸ್​ ಸ್ಟಾಪ್​ ಬಳಿ ಹೋಗಿರುವ ವಿಷ್ಯ ತಿಳಿಯುತ್ತಲೇ ಭೂಮಿಕಾ ಪತ್ತೆದಾರಿಕೆ ಶುರು ಮಾಡಿದ್ದಾಳೆ.

ಅಲ್ಲಿ ಮಲ್ಲಿ ಮತ್ತು ಸುನಿಲ್​ ಮಾತನಾಡುತ್ತಿದ್ದಾರೆ. ಭೂಮಿಕಾಗೂ ಮಲ್ಲಿಗೆ ಇನ್ನೊಂದು ಲೈಫ್​ ಕೊಡಬೇಕು ಎನ್ನುವ ಆಸೆ ಇದೆ. ಗೌತಮ್​ ಕೂಡ ಮರು ಮದುವೆಯ ಬಗ್ಗೆ ಮಾತನಾಡಿದವನೇ. ಆದರೆ ಮಲ್ಲಿಯೇ ಇದಕ್ಕೆ ಒಪ್ಪುತ್ತಿರಲಿಲ್ಲ. ಇದೀಗ ಮಲ್ಲಿ ಲವ್​ನಲ್ಲಿ ಬಿದ್ದಿರೋ ವಿಷಯ ಕೇಳಿದ್ರೆ ಖಂಡಿತವಾಗಿಯೂ ಇಬ್ಬರ ಮದುವೆ ಮಾಡಿಸುತ್ತಾರೆ.ಅಲ್ಲಿಗೆ ಮಲ್ಲಿಗೆ ಕಂಕಣ ಭಾಗ್ಯ ಕೂಡಿ ಬಂದಂತೇ ಸರಿ.

Source link

Leave a Reply

Your email address will not be published. Required fields are marked *