Headlines

Amruthadhaare: ಅಪ್ಪ- ಮಗ ಒಂದಾಗುವ ಹೊತ್ತಲ್ಲೇ ಆಕಾಶ್​ ಕಿಡ್​ನ್ಯಾಪ್​? ಮುಂದೇನಾಗತ್ತೆ?

Amruthadhaare: ಅಪ್ಪ- ಮಗ ಒಂದಾಗುವ ಹೊತ್ತಲ್ಲೇ ಆಕಾಶ್​ ಕಿಡ್​ನ್ಯಾಪ್​? ಮುಂದೇನಾಗತ್ತೆ?

Amruthadhaare: ಅಪ್ಪ- ಮಗ ಒಂದಾಗುವ ಹೊತ್ತಲ್ಲೇ ಆಕಾಶ್​ ಕಿಡ್​ನ್ಯಾಪ್​? ಮುಂದೇನಾಗತ್ತೆ?
ಗೌತಮ್ ಮತ್ತು ಆಕಾಶ್ ಒಂದಾಗುವ ಸಮಯ ಹತ್ತಿರವಾಗುತ್ತಿದ್ದಂತೆ, ಭೂಮಿಕಾ ಎಂಎಲ್ಎ ಮಗನ ವಿರುದ್ಧ ತೆಗೆದುಕೊಂಡ ನಿರ್ಧಾರದಿಂದ ಆಕಾಶ್ ಅಪಹರಣಕ್ಕೊಳಗಾಗುವ ಅಪಾಯದಲ್ಲಿದ್ದಾನೆ. ಈ ಸಂಕಷ್ಟದಿಂದ ಗೌತಮ್ ತನ್ನ ಮಗನನ್ನು ಪಾರುಮಾಡಿ, ಭೂಮಿಕಾ ಜೊತೆ ಒಂದಾಗುತ್ತಾನೆಯೇ ಎನ್ನುವುದು ಕಥೆಯ ಪ್ರಮುಖ ತಿರುವು.
ಅಮೃತಧಾರೆ (Amruthadhaare Serial) ನಲ್ಲಿ ಈಗಾಗಲೇ ಗೌತಮ್​ ಮತ್ತು ಆಕಾಶ್​ ಒಂದಾಗುವ ಟೈಮ್​ ಬಂದಿದೆ. ಇಬ್ಬರೂ ಇದಾಗಲೇ ಕ್ಲೋಸ್​ ಆಗಿದ್ದರೂ ಆಕಾಶ್​ಗೆ ಗೌತಮ್​ನೇ ತನ್ನ ಅಪ್ಪ ಎನ್ನುವುದು ಇನ್ನೂ ತಿಳಿದಿಲ್ಲ. ನಿಮ್ಮ ಮಗ ಸಿಕ್ಕನಾ ಎಂದಾಗ ಗೌತಮ್​ ಹೌದು ಸಿಕ್ಕಿದ್ದಾನೆ, ಶಾಲೆ ಮುಗಿಸಿ ಬಾ ಎಲ್ಲಾ ಹೇಳ್ತೇನೆ ಎಂದಿದ್ದಾನೆ.

ಆಕಾಶ್​ ಗೌತಮ್​ ಬಳಿ ಮಾತನಾಡುವುದನ್ನು ಭೂಮಿಕಾ ನೋಡಿದ್ದಾಳೆ. ಅಪ್ಪ-ಮಗನ ಬಾಂಡಿಂಗ್​ ನೋಡಿ ಆಕೆಗೆ ಕಣ್ಣೀರು ಬಂದಿದೆ. ಆದರೆ ಆಕೆಯ ಮುಂದಿನ ನಡೆ ಏನು? ಗೌತಮ್​ ಮತ್ತು ಮಗನನ್ನು ಒಂದು ಮಾಡುತ್ತಾಳೊ ಇಲ್ಲವೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

ಅದೇ ಸಮಯದಲ್ಲಿ ಆಕಾಶ್​ನನ್ನು ಕಿಡ್​ನ್ಯಾಪ್​ ಮಾಡಲು ಅಪಹರಣಕಾರ ಹೊಂಚು ಹಾಕಿ ಕೂತಿದ್ದಾನೆ. ಅದು ಯಾರಿಗೂ ಗೊತ್ತಿಲ್ಲ. ಭೂಮಿಕಾ ಮತ್ತು ಆಕಾಶ್​ ಶಾಲೆಗೆ ಬರುತ್ತಿರುವ ಸಮಯದಲ್ಲಿ, ಶಾಲೆಯ ಬಸ್​ ಹಿಂದೆ ನಿಂತು ಆತ ಹೊಂಚು ಹಾಕುತ್ತಿದ್ದಾನೆ. ಇದರಿಂದ ಆಕಾಶ್​ ಅಪಹರಣ ಆಗುವುದು ಕನ್​ಫರ್ಮ್​ ಆಗಿದೆ.

ಅದೇನೇ ಇದ್ದರೂ ಇದೀಗ ಗೌತಮ್​ಗೆ ಮಗ ಸಿಕ್ಕನಲ್ಲ ಎನ್ನುವ ಖುಷಿ ಅಷ್ಟೆ. ಭೂಮಿಕಾ ಮನಸ್ಸನ್ನು ಪರಿವರ್ತಿಸಲು ಮಲ್ಲಿ ಕೂಡ ಪ್ರಯತ್ನ ಮಾಡ್ತಿರೋ ಕಾರಣದಿಂದ ಅವಳ ಮನಸ್ಸು ಕೂಡ ಬದಲಾಗಬಹುದು. ಆದರೆ ಇದರ ನಡುವೆಯೇ ಇದೀಗ ಭಾರಿ ಟ್ವಿಸ್ಟ್​ ಸಿಕ್ಕಿದೆ.

ಹೀಗೆ ಮಗನನ್ನು ಕಿಡ್​ನ್ಯಾಪ್ ಮಾಡಲು ಕಾರಣ ಭೂಮಿಕಾ ಎಂಎಲ್​ಎ ಮಗನ ಮೇಲೆ ಆ್ಯಕ್ಷನ್​ ತೆಗೆದುಕೊಂಡಿರೋದು. ಅವನ ಮಗ ಶಾಲೆಯಲ್ಲಿ ಸ್ಮೋಕ್ ಮಾಡುತ್ತಿದ್ದ ಕಾರಣಕ್ಕೆ, ಅಪ್ಪನನ್ನು ಕರೆಸಿ ಬುದ್ಧಿ ಹೇಳಿಸಿದ್ದಳು. ಇದು ಎಂಎಲ್​ಎ ಕೋಪಕ್ಕೆ ಕಾರಣವಾಗಿದೆ. ತನ್ನದಲ್ಲದ ತಪ್ಪಿಗೆ ಭೂಮಿಕಾಳು ಈಗ ಕ್ಷಮೆ ಕೋರಿ ಪತ್ರ ಬರೆದುಕೊಡಬೇಕಿದೆ. ಆದರೆ ಸ್ವಾಭಿಮಾನಿ ಭೂಮಿಕಾ ಹಾಗೆ ಮಾಡಲು ಒಪ್ಪುತ್ತಿಲ್ಲ.

ಬೇರೆ ಟೀಚರ್ಸ್​ ಹೇಳಿದರೂ ಆಕೆ ಅದನ್ನು ಒಪ್ಪಲಿಲ್ಲ. ಇದೇ ಕಾರಣಕ್ಕೆ ಈಗ ಆತನಿಂದ ಭೂಮಿಕಾ ಪ್ರಾಣಕ್ಕೆ ಅಪಾಯ ಇದೆ ಎನ್ನುವುದಂತೂ ಸುಳ್ಳಲ್ಲ. ರಾಜಕಾರಣಿಗಳು ಎಂದರೆ ಅಷ್ಟು ಸುಲಭ ಅಲ್ಲವಲ್ಲ! ಆತ ಇನ್ನೇನು ಮಾಡ್ತಾನೋ ಎನ್ನುವ ಭಯ ವೀಕ್ಷಕರಿಗೆ.

ಈ ಕಾರಣದಿಂದ ಭೂಮಿಕಾ ಜೀವಕ್ಕೆ ಅಪಾಯ ಎನ್ನುವ ಸ್ಥಿತಿ ಇತ್ತು. ಆದರೆ ಈಗ ಬಿಟ್ಟಿರೋ ಪ್ರೊಮೋ ನೋಡಿದರೆ, ಆಕಾಶ್​ನನ್ನು ಕಿಡ್​ನ್ಯಾಪ್​ ಮಾಡುವ ಎಲ್ಲಾ ಸಾಧ್ಯತೆ ಕಾಣಿಸುತ್ತಿದೆ. ಆಕಾಶ್​ನನ್ನು ಗೌತಮ್​ ಕಾಪಾಡ್ತಾನಾ? ಇದರಿಂದ ಭೂಮಿಕಾ ಮತ್ತು ಗೌತಮ್​ ಒಂದಾಗ್ತಾರಾ ಎಂದು ನೋಡಬೇಕಿದೆ.
View this post on Instagram
A post shared by Zee Kannada (@zeekannada)

Source link

Leave a Reply

Your email address will not be published. Required fields are marked *