Headlines

ಇವ್ರ ಎದುರು ಡೈಲಾಗೇ ಮರೆತುಹೋಗತ್ತೆ ಎಂದ ಸುನಿ: ಅಕ್ಕ-ತಮ್ಮ, ಆಂಟಿ ಲವರ್​ ಕಮೆಂಟ್ಸ್​ಗೆ ಹೇಳಿದ್ದೇನು?

ಇವ್ರ ಎದುರು ಡೈಲಾಗೇ ಮರೆತುಹೋಗತ್ತೆ ಎಂದ ಸುನಿ: ಅಕ್ಕ-ತಮ್ಮ, ಆಂಟಿ ಲವರ್​ ಕಮೆಂಟ್ಸ್​ಗೆ ಹೇಳಿದ್ದೇನು?

ಇವ್ರ ಎದುರು ಡೈಲಾಗೇ ಮರೆತುಹೋಗತ್ತೆ ಎಂದ ಸುನಿ: ಅಕ್ಕ-ತಮ್ಮ, ಆಂಟಿ ಲವರ್​ ಕಮೆಂಟ್ಸ್​ಗೆ ಹೇಳಿದ್ದೇನು?
ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಮತ್ತು ಸುನಿ ನಿಶ್ಚಿತಾರ್ಥ ನಡೆದಿದೆ. ಆದರೆ ಮಲ್ಲಿ, ಜೈದೇವ್ ಪತ್ನಿ ಎಂಬ ಸತ್ಯ ಸುನಿಗೆ ತಿಳಿದು ಆಘಾತವಾಗಿದೆ. ಇದರ ನಡುವೆ, ತಮ್ಮಿಬ್ಬರ ವಯಸ್ಸಿನ ಅಂತರದ ಬಗ್ಗೆ ಟ್ರೋಲ್ ಮಾಡುವವರಿಗೆ ನಟರಾದ ಯಶು ಮತ್ತು ಅನ್ವಿತಾ ಸಾಗರ್ ಪ್ರತಿಕ್ರಿಯಿಸಿದ್ದಾರೆ.
ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಸದ್ಯ ಮಲ್ಲಿ ಮತ್ತು ಸಿಂಪಲ್​ ಸುನಿ ಮದುವೆಯ ಸಂಭ್ರಮ. ಎಂಗೇಜ್​ಮೆಂಟ್​ ಆಗಿದೆ. ಆದರೆ, ಇದೇ ವೇಳೆ ಮಲ್ಲಿ ಜೈದೇವನ ಪತ್ನಿ ಎನ್ನುವ ಸತ್ಯ ಭೂಮಿಕಾಳಿಂದ ತಿಳಿದು ಸುನಿಗೆ ನೆಲವೇ ಕುಸಿದ ಅನುಭವವಾಗಿದೆ.

ಅದೇ ಇನ್ನೊಂದೆಡೆ, ಎಂಗೇಜ್​ಮೆಂಟ್​ಗೆ ಬಂದ ಪಾರ್ಥನಿಗೆ ಸುನಿ, ಜೈದೇವ್​ ಕೈಕೆಳಗೆ ಕೆಲಸ ಮಾಡುವವನು ಎಂದು ತಿಳಿದ ಕಾರಣ ಬಂಡವಾಳ ಬಯಲಾಗುತ್ತೆ ಎಂದು ಹೆದರಿದ್ದ. ಆದರೆ ಜೈದೇವ್​ ಪಾರ್ಥನನ್ನು ಏನೋ ನೆಪ ಹೇಳಿ ಕರೆಸಿಕೊಂಡಿರುವುದಿಂದ ಪಾರ್ಥ ಮತ್ತು ಸುನಿ ಮುಖಾಮುಖಿಯಾಗಿಲ್ಲ.

ಜೈದೇವ ಹೇಳುವ ಮುನ್ನವೇ ಮಲ್ಲಿಯನ್ನು ಸುನಿ ಇಷ್ಟಪಡುತ್ತಿದ್ದರೂ, ಇದೀಗ ಮೋಸದ ಜಾಲದಲ್ಲಿ ಆಕೆಯನ್ನು ಸಿಲುಕಿಸುವ ಹಿನ್ನೆಲೆಯಲ್ಲಿ ಎಂಗೇಜ್​ಮೆಂಟ್​ ಆಗಿದ್ದಾನೆ. ಆದರೆ ವಿಷ್ಯ ತಿಳಿದು ಆತ ಮೋಸ ಮಾಡಲಾರ ಎನ್ನುವ ನಂಬಿಕೆ ವೀಕ್ಷಕದ್ದು.

ಇದರ ನಡುವೆಯೇ, ಇವರಿಬ್ಬರ ಲವ್​ಸ್ಟೋರಿ ನೋಡಿ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ. ಅಕ್ಕ-ತಮ್ಮನ ರೀತಿ ಇದ್ದಾರೆ. ಸುನಿ ಆಂಟಿ ಲವರ್​ ಎಂದೆಲ್ಲಾ ಹೇಳುತ್ತಿರುವ ಬಗ್ಗೆ ಇದೀಗ ಸುನಿ ಪಾತ್ರಧಾರಿ ಯಶು ಅವರು ತಮ್ಮ ಯುಟ್ಯೂಬ್​ ಚಾನೆಲ್​ನಲ್ಲಿ ಇದರ ಬಗ್ಗೆ ಹೇಳಿದ್ದಾರೆ. ಪಾತ್ರ ಆ ರೀತಿ ಮಾಡಿದ್ದಾರೆ ಅಷ್ಟೇ. ಮಲ್ಲಿ ಅವರೇನು ದೊಡ್ಡವರ ಹಾಗೆ ಕಾಣಿಸುವುದಿಲ್ಲ. ತುಂಬಾ ಕ್ಯೂಟ್​ ಆಗಿದ್ದಾರೆ. ಅವರು ಎದುರು ಬಂದಾಗ ನಾನು ಡೈಲಾಗನ್ನೇ ಮರೆತುಬಿಡುತ್ತೇನೆ ಎಂದಿದ್ದಾರೆ.

ಅದಕ್ಕೆ ಮಲ್ಲಿ ಪಾತ್ರಧಾರಿ ಅನ್ವಿತಾ ಸಾಗರ್​ (Malli role Anvita Sagar) ಅವರು ಸೀರಿಯಲ್​ನಲ್ಲಿ ನಮ್ಮಿಬ್ಬರ ವಯಸ್ಸು ಸುಮಾರು ಐದು ವರ್ಷ ವ್ಯತ್ಯಾಸವಿದೆ. ಹಾಗೆ ನೋಡಿದರೆ ನಾನು ಸೀರಿಯಲ್​ನಲ್ಲಿ 27-28 ವರ್ಷದವಳು. ಇದೇನು ಆಂಟಿ ಅನ್ನೋ ವಯಸ್ಸಲ್ಲ. ಆದರೆ ಮೊದಲೇ ಮದುವೆಯಾಗಿರುವ ಕಾರಣ ಮತ್ತು ನಾನು ತೂಕ ಹೆಚ್ಚಿಸಿಕೊಂಡಿರೋ ಕಾರಣ, ಆಂಟಿ ರೀತಿ ಕಾಣಿಸುತ್ತೇನೆ ಎಂದಿದ್ದಾರೆ.

ಕಮೆಂಟ್ಸ್​ ನೋಡಿದಾಗ ನನಗೂ ಆರಂಭದಲ್ಲಿ ತುಂಬಾ ನೋವಾಗ್ತಿತ್ತು. ಈಗ ರೂಢಿಯಾಗಿದೆ. ನಮ್ಮ ಪಾತ್ರವನ್ನು ನಾವು ನಿಭಾಯಿಸುತ್ತಿದ್ದೇವೆ ಅಷ್ಟೇ. ಏನೂ ಮಾಡಲು ಆಗಲ್ಲ ಎಂದಿದ್ದಾರೆ.

Source link

Leave a Reply

Your email address will not be published. Required fields are marked *