ಅಮೃತಧಾರೆ ಧಾರಾವಾಹಿಯು ಮುಕ್ತಾಯದ ಹಂತ ತಲುಪಿದೆ. ಗೌತಮ್ ಮತ್ತು ಭೂಮಿಕಾ ಒಂದಾಗಿದ್ದು, ಜೈದೇವ್ನ ಆಟಕ್ಕೆ ಗೌತಮ್ ಅಂತ್ಯ ಹಾಡಿದ್ದಾನೆ. ಬಹುತೇಕ ಎಲ್ಲಾ ಪಾತ್ರಗಳ ಕಥೆ ಒಂದು ತಾರ್ಕಿಕ ಅಂತ್ಯ ಕಂಡಿರುವುದರಿಂದ ಸೀರಿಯಲ್ ಶೀಘ್ರದಲ್ಲೇ ಮುಗಿಯುವ ಸಾಧ್ಯತೆಯಿದೆ.
ಅಮೃತಧಾರೆ ಸೀರಿಯಲ್ (Amruthadhaare Serial) ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಗೌತಮ್ ಮತ್ತು ಭೂಮಿಕಾ ಒಂದಾಗಿ ಆಯ್ತು. ಸೀರಿಯಲ್ನಲ್ಲಿ ಮುಖ್ಯವಾಗಿ ಇರೋದು ಇದೊಂದೇ. ಅದಂತೂ ಮುಗಿದು ಆಗಿದೆ.

ಈಗೇನಿದ್ದರೂ ಜೈದೇವ, ಶಕುಂತಲಾಗೆ ಬುದ್ಧಿ ಕಲಿಸೋದು ಅಷ್ಟೇ. ಈಗ ಅದು ಕೂಡ ಆಗಿ ಹೋಗಿದೆ. ಜೈದೇವ, ಆಕಾಶ್ನನ್ನು ಕಿಡ್ನ್ಯಾಪ್ ಮಾಡಿಸಿಕೊಂಡು ಆಸ್ತಿಗೆ ಸಹಿ ಹಾಕಿಸಿಕೊಂಡದ್ದು ಆಗಿದೆ. ಜೈದೇವನನ್ನು ನೆನೆದು ಆಕಾಶ್ ರಾತ್ರಿಯ ವೇಳೆಯೂ ಗಾಬರಿ ಬಿದ್ದದ್ದನ್ನು ಕಂಡು ಗೌತಮ್ ಕಿಡಿಕಿಡಿಯಾಗಿದ್ದಾನೆ.

ಜೈದೇವ್ ಕಿಡ್ನ್ಯಾಪ್ ಮಾಡಿರೋ ವಿಷ್ಯ ಅವನಿಗೆ ಗೊತ್ತಿರಲಿಲ್ಲ. ಕೊನೆಗೆ ಆಕಾಶ್ ಎಲ್ಲವನ್ನೂ ಹೇಳಿದಾಗ, ಸಿಟ್ಟಿನಿಂದ ಬಂದ ಗೌತಮ್, ಜೈದೇವ್ಗೆ ಬುದ್ಧಿ ಹೇಳಿದ್ದಾನೆ. ನನ್ನ ಇರೋ ಬರೋ ಆಸ್ತಿಯನ್ನೆಲ್ಲಾ ನಿನಗೇ ಕೊಟ್ಟುಬಿಡುತ್ತೇನೆ. ನನ್ನವರಿಗೆ ತೊಂದರೆ ಮಾಡಿದ್ರೆ ಚೆನ್ನಾಗಿರಲ್ಲ ಎಂದು ವಾರ್ನ್ ಮಾಡಿ ಬಂದಿದ್ದಾನೆ.

ಅಲ್ಲಿಗೆ ಜೈದೇವ ಆಸ್ತಿ ಪಡೆದು ಆರಾಮ್ ಇರ್ತಾನೆ, ಇಲ್ಲವೇ ಬುದ್ಧಿ ಬಂದು ಬಾಯಿಮುಚ್ಚಿಕೊಂಡು ಇರ್ತಾನೆ. ಅಲ್ಲಿಗೆ ಅವನ ಕಥೆಯೂ ಮುಗಿಯಿತು. ಇನ್ನೇನೂ ಕಿತಾಪತಿ ಮಾಡುವ ಸ್ಥಿತಿಯಲ್ಲಿ ಅವನು ಸದ್ಯ ಇದ್ದಂತಿಲ್ಲ.

ಅದೇ ಇನ್ನೊಂದೆಡೆ, ಜೈದೇವನೇ ಪುಡಿ ರೌಡಿಯನ್ನು ಮಲ್ಲಿಯ ಹಿಂದೆ ಬಿಟ್ಟು, ಅವರಿಬ್ಬರಲ್ಲಿ ಪ್ರೀತಿ ಮೂಡುವ ಹಾಗೆ ಮಾಡಿದ್ದಾನೆ. ಅಲ್ಲಿಗೆ ಅವರ ಸ್ಟೋರಿನೂ ಮುಗಿಯಿತು, ಮಲ್ಲಿಗೆ ಲೈಫ್ ಸಿಕ್ಕಿತು.

ಉಳಿದವರೆಲ್ಲರೂ ಖುಷಿಯಿಂದ ಇದ್ದಾರೆ. ಎಲ್ಲರೂ ಒಂದಾಗಿದ್ದಾರೆ. ಇನ್ನು ಸ್ಟೋರಿ ಎಳೆಯುವುದರಲ್ಲಿ ಯಾವುದೇ ಅರ್ಥವಿಲ್ಲ. ಆದ್ದರಿಂದ ಅಮೃತಧಾರೆ ಮುಗಿಯುತ್ತದೆ ಎಂದೇ ಹೇಳಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಇದು ಗೊತ್ತಾಗಬೇಕಿದೆ.

Source link
Amruthadhaare Serial ಅಂತ್ಯ? ಜೈದೇವ್ಗೆ ಎಲ್ಲಾ ಆಸ್ತಿ ಕೊಡಲು ಗೌತಮ್ ರೆಡಿ! ಮುಂದೇನು?