Amruthadhaare ರೋಚಕ ಟ್ವಿಸ್ಟ್​: ಮಗ ಆಕಾಶ್​ ಹೇಳಿದ ಆ ಒಂದು ಸತ್ಯಕ್ಕೆ ಕುಸಿದು ಹೋದ ಭೂಮಿಕಾ! ಬಡಿದ ಬರಸಿಡಿಲು

Amruthadhaare ರೋಚಕ ಟ್ವಿಸ್ಟ್​: ಮಗ ಆಕಾಶ್​ ಹೇಳಿದ ಆ ಒಂದು ಸತ್ಯಕ್ಕೆ ಕುಸಿದು ಹೋದ ಭೂಮಿಕಾ! ಬಡಿದ ಬರಸಿಡಿಲು

Amruthadhaare ರೋಚಕ ಟ್ವಿಸ್ಟ್​: ಮಗ ಆಕಾಶ್​ ಹೇಳಿದ ಆ ಒಂದು ಸತ್ಯಕ್ಕೆ ಕುಸಿದು ಹೋದ ಭೂಮಿಕಾ! ಬಡಿದ ಬರಸಿಡಿಲು

ಜೈದೇವನಿಂದ ತಪ್ಪಿಸಿಕೊಳ್ಳಲು ದೇಶ ಬಿಡಲು ನಿರ್ಧರಿಸಿದ ಭೂಮಿಕಾಗೆ,   ಆಕಾಶ್ ಒಂದು ಸತ್ಯ ಹೇಳಿ ಶಾಕ್​ ಕೊಟ್ಟಿದ್ದಾನೆ. ಅದನ್ನು ಅರಗಿಸಿಕೊಳ್ಳಲಾಗದೇ ಬರಸಿಡಿಲು ಬಡಿದಂತೆ ನಿಂತಿದ್ದಾಳೆ ಭೂಮಿಕಾ. ಆ ಸತ್ಯವೇನು?

ಅಮೃತಧಾರೆ (Amruthadhaare Serial) ಸದ್ಯ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಪಡೆಯುತ್ತಿದೆ. ಜೈದೇವ ಆಕಾಶ್​ನನ್ನು ಕಿಡ್​ನ್ಯಾಪ್​ಮಾಡಿಕೊಂಡು ಹೋಗಿದ್ದ. ಆಕಾಶ್​ ಜೀವಕ್ಕೆ ಜೈದೇವನಿಂದ ಅಪಾಯ ಇರುವುದಾಗಿ ಮನಗಂಡ ಭೂಮಿಕಾ ದೇಶವನ್ನೇ ಬಿಟ್ಟುಹೋಗುವ ಪ್ಲ್ಯಾನ್​ ಮಾಡಿದ್ದಾಳೆ.

ತಾನು ಇಲ್ಲಿಯೇ ಇದ್ದರೆ ಅಪ್ಪ ಗೌತಮ್​ ಜೀವಕ್ಕೂ ಅಪಾಯ ಇದೆ ಎನ್ನುವುದನ್ನು ಮನಗಂಡಿರುವ ಆಕಾಶ್​ ಕೂಡ ಮನೆ ಖಾಲಿ ಮಾಡಲು ಒಪ್ಪಿಗೆ ಸೂಚಿಸಿದ್ದಾನೆ. ಜೈದೇವನ ಈ ಸತ್ಯವನ್ನು ಗೌತಮ್​ ಎದುರು ಯಾರೂ ಬಾಯಿ ಬಿಟ್ಟಿಲ್ಲ. ಆದರೆ ದಿಢೀರ್​ ಎಂದು ಭೂಮಿಕಾ ಮಾಡಿರುವ ಈ ನಿರ್ಧಾರದಿಂದ ಗೌತಮ್​ ಶಾಕ್​ ಆಗಿದ್ದಾನೆ.

ಆಕಾಶ್​ ಮತ್ತು ಮಿಂಚು ಕೂಡ ಒಬ್ಬರನ್ನೊಬ್ಬರು ಬಿಟ್ಟಿರಲು ಆಗದಿದ್ದರೂ ಭಾರವಾದ ಮನಸ್ಸಿನಿಂದ ವಿದಾಯ ಹೇಳಿದ್ದಾರೆ. ಮನೆ ಬಿಟ್ಟು ಹೋಗುವ ಸಂದರ್ಭದಲ್ಲಿ, ಎಲ್ಲರೂ ಒಟ್ಟಿಗೇ ಮಾಡಿಸಿರುವ ಫೋಟೋಶೂಟ್​ ಆಲ್ಬಂ ಅನ್ನು ಆಕಾಶ್​ ಗೌತಮ್​ ಮನೆಯ ಎದುರು ಇಟ್ಟು ಹೋಗಿದ್ದಾನೆ.

ಭೂಮಿಕಾ, ಇದೇನು ಮಾಡಿದೆ ಎಂದು ಕೇಳಿದಾಗ ಆಕಾಶ್​ ಹೇಳಿದ ಸತ್ಯದಿಂದ ಭೂಮಿಕಾ ಮಾತ್ರವಲ್ಲದೇ ಮಲ್ಲಿ ಕೂಡ ಶಾಕ್​ ಆಗಿದ್ದಾರೆ.

ಅಷ್ಟಕ್ಕೂ ಆಕಾಶ್​, ನಿಮ್ಮ ಮತ್ತು ಪಪ್ಪನ ಫೋಟೋ ಇಟ್ಟುಬಂದೆ ಎಂದಿದ್ದಾನೆ. ಆಗ ಭೂಮಿಕಾ ಪಪ್ಪನಾ ಎಂದು ಪ್ರಶ್ನಿಸಿದಾಗ, ಆಕಾಶ್​, ಹೌದು ಮಮ್ಮಿ ಗೌತಮ್​ ಅವರು ನನ್ನ ಪಪ್ಪ ಎನ್ನುವುದು ನನಗೆ ಮೊದಲೇ ಗೊತ್ತಿತ್ತು ಎಂದಾಗ ಭೂಮಿಗೆ ಭೂಮಿ ಕುಸಿದ ಅನುಭವವಾಗಿದೆ.

ಇಂಥ ರೋಚಕ ಟ್ವಿಸ್ಟ್​ ನಡುವೆಯೇ ಮನೆಬಿಟ್ಟು ಹೊರಟು ನಿಂತಿದ್ದಾಳೆ ಭೂಮಿಕಾ. ಆದರೆ ಶಕುನಿ ಮಾಮಾನಿಂದಾಗಿ ಭೂಮಿಕಾ ಮಗಳು ಕೂಡ ಬದುಕಿರುವ ಸತ್ಯ ತಿಳಿದಿದ್ದರಿಂದ ಅವಳು ಮಿಂಚುನೇ ಎಂದುಕೊಂಡು ಭೂಮಿಕಾ ವಾಪಸ್​ ಬಂದಿದ್ದಾಳೆ. ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ.

Source link

Leave a Reply

Your email address will not be published. Required fields are marked *