Headlines

'ಆಂಟಿ ಲವರ್'​ ಎಂದೇ ಫೇಮಸ್​ ಆಗಿರೋ Amruthadhaare ಸುನಿಗೆ ಹೊಸ ಜೋಡಿ! ಯಾರೀಕೆ?

'ಆಂಟಿ ಲವರ್'​ ಎಂದೇ ಫೇಮಸ್​ ಆಗಿರೋ Amruthadhaare ಸುನಿಗೆ ಹೊಸ ಜೋಡಿ! ಯಾರೀಕೆ?

'ಆಂಟಿ ಲವರ್'​ ಎಂದೇ ಫೇಮಸ್​ ಆಗಿರೋ Amruthadhaare ಸುನಿಗೆ ಹೊಸ ಜೋಡಿ! ಯಾರೀಕೆ?
ಅಮೃತಧಾರೆ ಸೀರಿಯಲ್‌ನಲ್ಲಿ ಮಲ್ಲಿಗಿಂತ ಚಿಕ್ಕವನಾದ ಸುನಿ ಪಾತ್ರಧಾರಿ ಯಶ್ವಂತ್, ನಿಜ ಜೀವನದಲ್ಲೂ ಅನ್ವಿತಾ ಅವರಿಗಿಂತ ಚಿಕ್ಕವರು. ಈ ಕಾರಣಕ್ಕೆ ‘ಆಂಟಿ ಲವರ್’ ಎಂದು ಟ್ರೋಲ್ ಆಗುತ್ತಿರುವ ಯಶ್ವಂತ್, ಇದೀಗ ತಮ್ಮ ಸ್ನೇಹಿತೆಯೊಂದಿಗೆ ಮಾಡಿದ ಹಳೆಯ ರೀಲ್ಸ್‌ನಿಂದಾಗಿ ಮತ್ತೆ ವೈರಲ್ ಆಗಿದ್ದಾರೆ.
ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಸದ್ಯ ಮಲ್ಲಿ ಮತ್ತು ಸಿಂಪಲ್​ ಸುನಿ ಮದ್ವೆ ಮಾತುಕತೆ ನಡೆಯುತ್ತಿದ್ದು, ಇಬ್ಬರ ಎಂಗೇಜ್​ಮೆಂಟ್​ ಆಗಿದೆ.

ಸೀರಿಯಲ್​ನಲ್ಲಿ ಇವರಿಬ್ಬರ ವಯಸ್ಸಲ್ಲಿ ಸುಮಾರು ಐದಾರು ವರ್ಷ ವ್ಯತ್ಯಾಸವಿದೆ. ಅಂದರೆ ಸುನಿಲ್​ ಮಲ್ಲಿಗಿಂತ ಐದಾರು ವರ್ಷ ಚಿಕ್ಕವ. ಆದರೆ ರಿಯಲ್​ ಲೈಫ್​ನಲ್ಲಿ ಕೂಡ ಸುನಿಲ್​ ಪಾತ್ರಧಾರಿ ಯಶ್ವಂತ್​ ಅವರು, ಮಲ್ಲಿ ಪಾತ್ರಧಾರಿ ಅನ್ವಿತಾ ಸಾಗರ್​ ಅವರಿಗಿಂತಲೂ ತುಂಬಾ ಚಿಕ್ಕವರು.

ಸುನಿಲ್​ ಮತ್ತು ಮಲ್ಲಿಯ ಜೋಡಿ ನೋಡಿ ಹಲವರು ಕೆಟ್ಟ ಕಮೆಂಟ್ಸ್​ ಹಾಕುತ್ತಿರುವ ಬಗ್ಗೆ ಇದಾಗಲೇ ಅನ್ವಿತಾ ಮತ್ತು ಯಶ್ವಂತ್​ ನೋವು ತೋಡಿಕೊಂಡಿದ್ದಾರೆ. ನನ್ನನ್ನು ಆಂಟಿ ಲವರ್​ ಎಂದೆಲ್ಲಾ ಕರೆಯುತ್ತಾರೆ ಎಂದು ಯಶ್ವಂತ್​ ಹೇಳಿಕೊಂಡಿದ್ದರು. ಆದರೆ ಆ ಪಾತ್ರ ಹಾಗೆ ಇದೆ. ಸೀರಿಯಲ್​ಗೆ ಅದು ಬೇಕು. ಮೊದಲು ಕಮೆಂಟ್ಸ್​ ನೋಡಿ ಬೇಸರ ಆಗ್ತಿತ್ತು. ಈಗ ರೂಢಿಯಾಗಿ ಹೋಗಿದೆ ಎಂದಿದೆ ಈ ಜೋಡಿ.

ಹೀಗೆ ಆಂಟಿ ಲವರ್​ ಎಂದೇ ಫೇಮಸ್​ ಆಗಿರೋ ಯಶ್ವಂತ್​ ಅವರು ಇದಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಫೇಮಸ್​ ಆದವರು. ಇದರಿಂದಲೇ ಅವರು ಅಮೃತಧಾರೆ ಸೀರಿಯಲ್​ಗೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಯಶುಡಾರ್ಲಿಂಗ್​ ಎನ್ನುವ ಯುಟ್ಯೂಬ್​ ಚಾನೆಲ್​, ಇನ್​ಸ್ಟಾಗ್ರಾಮ್​ ಖಾತೆಯನ್ನೂ ಹೊಂದಿದ್ದಾರೆ.

ಕೆಲವು ವಾರಗಳ ಹಿಂದೆ ಇವರು ಸ್ನೇಹಿತೆಯ ಜೊತೆ ಮಾಡಿರುವ ರೀಲ್ಸ್​ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಅಷ್ಟಕ್ಕೂ ಅಮೃತಧಾರೆಗೆ ಎಂಟ್ರಿ ಕೊಡುವ ಮುನ್ನ ಇವರು ಈ ರೀಲ್ಸ್​ ಮಾಡಿದ್ದರು.

ಕೆಲವರು ನಟನ ಕಾಲೆಳೆಯುತ್ತಿದ್ದ ಹಿನ್ನೆಲೆಯಲ್ಲಿ ಈಕೆ ನನ್ನ ಫ್ರೆಂಡ್​ ಅಷ್ಟೇ ಎನ್ನುವ ರಿಪ್ಲೈ ಕೂಡ ಯಶ್ವಂತ್​ ಮಾಡಿದ್ದಾರೆ. ಆದರೂ ಮಲ್ಲಿಗಿಂತ ನಿಮ್ಮಿಬ್ಬರ ಜೋಡಿ ಸಕತ್​ ಆಗಿದೆ ಎಂದು ಈಗ ಕೆಲವರು ಕಮೆಂಟ್​ ಮಾಡುತ್ತಿರುವ ಕಾರಣ, ಮತ್ತೀಗ ಈ ರೀಲ್ಸ್​ ವೈರಲ್​ ಆಗುತ್ತಿದೆ.

Source link

Leave a Reply

Your email address will not be published. Required fields are marked *