ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್ ಅಪ್ಪನ ಕಾರ್ಯಕ್ಕಾಗಿ ಮನೆಗೆ ಹಿಂತಿರುಗುತ್ತಾನೆ. ಅಲ್ಲಿ ಸಹೋದರ ಜೈದೇವ್ ಅಪ್ಪನ ಬಗ್ಗೆ ಅಗೌರವದಿಂದ ಮಾತನಾಡಿದ್ದಕ್ಕೆ, ಗೌತಮ್ ಅವನ ಕೆನ್ನೆಗೆ ಬಾರಿಸಿ ಸಿಡಿದೆದ್ದಿದ್ದಾನೆ. ಈ ಘಟನೆಯಿಂದ ಕಥೆ ರೋಚಕ ತಿರುವು ಪಡೆದಿದೆ.
ಅಮೃತಧಾರೆ ಸೀರಿಯಲ್‌ನಲ್ಲಿ ಇದೀಗ ರೋಚಕ ಟ್ವಿಸ್ಟ್ ಸಿಕ್ಕಿದೆ. ವರ್ಷಗಳ ಬಳಿಕ ಗೌತಮ್ ಮತ್ತು ಶಕುಂತಲಾ ಮುಖಾಮುಖಿಯಾಗಿದ್ದಾರೆ. ತನ್ನೆಲ್ಲಾ ಆಸ್ತಿಯನ್ನು ಬಿಟ್ಟು ಬಂದಿರುವ ಗೌತಮ್ಗೆ ಆ ಮನೆಗೆ ಹೋಗುವುದು ಅನಿವಾರ್ಯವಾಗಿ ಹೋಗಿದ್ದ. ಆದರೆ ಅಲ್ಲಿ ಆದದ್ದೇ ಬೇರೆ.

ಅಪ್ಪನ ಕಾರ್ಯ ಇದ್ದುದರಿಂದ, ಭೂಮಿಕಾ ಗೌತಮ್ಗೆ ಈ ಬಗ್ಗೆ ನೆನಪಿಸಿದ್ದಾಳೆ. ಅಪ್ಪನ ಕಾರ್ಯವನ್ನು ಮಿಸ್ ಮಾಡಬಾರದು ಎನ್ನುವ ಕಾರಣಕ್ಕೆ ಗೌತಮ್, ಮನಸ್ಸಿಲ್ಲದಿದ್ದರೂ ಅಪ್ಪನಿಗಾಗಿ ಆ ಮನೆಯ ಮೆಟ್ಟಿಲು ಏರಿದ್ದಾನೆ.

ಅವನು ಬಂದದ್ದು ನೋಡಿ ಶಕುಂತಲಾಗೂ ಶಾಕ್ ಆಗಿದೆ. ಇನ್ನು ಜೈದೇವ್ ಸುಮ್ಮನೇ ಇರ್ತಾನಾ. ಅಪ್ಪನ ಕಾರ್ಯಕ್ಕೆ ಬಂದಿರುವುದಕ್ಕೆ ಸಿಡಿಮಿಡಿಗೊಂಡಿದ್ದಾನೆ. ಗೌತಮ್ಗೆ ಮನೆ ಬಿಟ್ಟು ಹೋಗುವಂತೆ ಹೇಳಿದ್ದಾನೆ.

ಅಪ್ಪನ ಸಮಾಧಿಗೆ ಗೌತಮ್ ಮತ್ತು ಭೂಮಿಕಾ ಪೂಜೆ ಸಲ್ಲಿಸಲು ಹೋದಾಗ, ಅವರು ನಿನ್ನ ಅಪ್ಪ ಅಲ್ಲ, ನನ್ನ ಅಪ್ಪ, ನಿನಗ್ಯಾವ ಹಕ್ಕಿದೆ ಎಂದು ಕೊಬ್ಬಿನಿಂದ ಮಾತನಾಡಿರುವ ಜೈದೇವ, ಪೂಜೆಗೆಂದು ತಂದಿದ್ದ ಹೂವಿನ ಬಟ್ಟಲನ್ನು ಬೀಸಾಡಿದ್ದಾನೆ.

ಅಪ್ಪನ ಬಗ್ಗೆ ಮಾತನಾಡಿದ್ದಕ್ಕೆ ಸಿಟ್ಟು ನೆತ್ತಿಗೇರಿಸಿಕೊಂಡ ಗೌತಮ್, ಚಟಾರ್ ಎಂದು ಗೌತಮ್ನ ಕೆನ್ನೆಗೆ ಬಾರಿಸಿ, ನನ್ನ ಬಗ್ಗೆ ಏನಾದರೂ ಹೇಳು, ಅಪ್ಪನ ಬಗ್ಗೆ ಮಾತನಾಡಿದರೆ ಅಷ್ಟೇ ಎಂದಿದ್ದಾನೆ. ಅಲ್ಲಿದ್ದವರೆಲ್ಲರೂ ಶಾಕ್ ಆಗಿದ್ದಾರೆ.

ಒಂದು ಏಕೆ ಹೊಡೆದೆ, ಇನ್ನೊಂದಿಷ್ಟು ಕೆನ್ನೆಗೆ ಬಿಡಬೇಕಿತ್ತು ಎಂದು ನೆಟ್ಟಿಗರು ಕಮೆಂಟ್ನಲ್ಲಿ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಅಪ್ಪನ ತಿಥಿ ಕಾರ್ಯದಲ್ಲಿ ಸಹೋದರರು ಇಬ್ಬರೂ ಸಿಡಿದೆದ್ದಿದ್ದು, ಈಗ ಸೀರಿಯಲ್ ಇನ್ನಾವ ಟರ್ನ್ ತೆಗೆದುಕೊಳ್ಳುತ್ತದೆಯೋ ನೋಡಬೇಕಿದೆ.

Source link
Amruthadhaare ರೋಚಕ ಟ್ವಿಸ್ಟ್: ವರ್ಷಗಳ ಬಳಿಕ ಗೌತಮ್-ಶಕುಂತಲಾ ಮುಖಾಮುಖಿ; ಆಗಿದ್ದೇ ಬೇರೆ