
‘ಅಮೃತಧಾರೆ’ ಧಾರಾವಾಹಿಯು ಕಳೆದ ಕೆಲವು ಸಮಯದಿಂದ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದರೂ ತಪ್ಪಾಗಲಾರದು. ಆದರೆ, ಈಗ ಧಾರಾವಾಹಿಯಲ್ಲಿ ಮಹತ್ವದ ಬದಲಾವಣೆ ಮಾಡುವ ಸಮಯ ಬಂದಿದೆ. ಈ ಧಾರಾವಾಹಿಯಲ್ಲಿ ಇಷ್ಟು ದಿನ ಗೌತಮ್ ಉದ್ಯಮ ಮಾಡೋದಾಗಿ ಹೇಳುತ್ತಿದ್ದನು ಮತ್ತು ಅದನ್ನು ಪ್ರಾರಂಭಿಸಲಿಲ್ಲ. ಆದರೆ, ಈಗ ಉದ್ಯಮ ಮಾಡಲು ಆತನು ಸಿದ್ಧನಾಗಿದ್ದಾನೆ. ಎದುರಾಳಿ ಜೊತೆಯೇ ಕೈ ಜೋಡಿಸಿದ್ದಾನೆ.
ಕುಟುಂಬದವರೇ ಮಾಡಿದ ಮೋಸದ ಕಾರಣದಿಂದ ಗೌತಮ್ ಸಾಕಷ್ಟು ಬೇಸರ ಮಾಡಿಕೊಂಡಿದ್ದ. ಆತ ಆಸ್ತಿಯನ್ನು ಮಲ ತಮ್ಮನಿಗೆ ಬರೆದುಕೊಟ್ಟಿದ್ದ. ಆದರೂ ಆತನ ದಾಹ ತೀರಿರಲಿಲ್ಲ. ಕೊನೆಯದಾಗಿ ಗೌತಮ್ ಉಳಿಸಿಕೊಂಡಿದ್ದ ತಂದೆಯ ಸಮಾಧಿಯನ್ನು ಕೂಡ ಮೋಸದಿಂದ ಕೂಡಿದ್ದರು. ಇದು ಧಾರಾವಾಹಿಗೆ ಮಹತ್ವದ ತಿರುವು ನೀಡಿದೆ ಎಂದು ಹೇಳಬಹುದು.
ಈ ಮೊದಲಿನಿಂದಲೂ ಉದ್ಯಮ ಮಾಡುವುದಾಗಿ ಗೌತಮ್ ಹೇಳುತ್ತಲೇ ಬರುತ್ತಿದ್ದನು ಮತ್ತು ಉದ್ಯಮ ಆರಂಭಿಸಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಆತ ಬಿಸ್ನೆಸ್ ಶುರು ಮಾಡಿದ್ದಾನೆ. ಬ್ರೋಕರ್ ಆಯಪ್ ಒಂದನ್ನು ಆರಂಭಿಸಿದ್ದಾನೆ. ಇದು ಸದ್ಯದ ಆರಂಭ ಆದರೆ, ಇದನ್ನು ದೊಡ್ಡದಾಗಿ ಬೆಳೆಸುವ ಆಲೋಚನೆ ಆತನಿಗೆ ಇದೆ.
Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ
ಹೇಳಿಕೇಳಿ ಗೌತಮ್ ದೊಡ್ಡ ಉದ್ಯಮಿ. ಉದ್ಯಮ ಮಾಡೋದು ಅವನ ರಕ್ತದಲ್ಲೇ ಇದೆ. ಈ ಕಾರಣದಿಂದ ಯಾವುದೇ ಅಂಜಿಕೆ ಇಲ್ಲದೆ ಉದ್ಯಮ ಆರಂಭಿಸಿದೆ. ದೀವಾನ್ ಗ್ರೂಪ್ ನ ಎದುರಾಳಿ ಎನಿಸಿಕೊಂಡಿರುವ ಸಂಸ್ಥೆ ಜೊತೆ ಗೌತಮ್ ಕೈ ಜೋಡಿಸಿರುವುದು ವಿಶೇಷ.
ಇದನ್ನೂ ಓದಿ: ‘ಅಮೃತಧಾರೆ’:ಕಳೆದುಕೊಂಡಿದ್ದಕ್ಕಿಂತ 10 ಪಟ್ಟು ಹೆಚ್ಚು ಗಳಿಸ್ತೀನಿ; ಗೌತಮ್ ಚಾಲೆಂಜ್
ಈ ಎಲ್ಲಾ ಬೆಳವಣಿಗೆಯಿಂದ ಜಯದೇವ್ ಗೆ ಭಯ ಶುರುವಾಗಿದೆ. ಇದು ಆರಂಭ ಮಾತ್ರವೇ ಆಗಿದೆ ಎಂದು ಆತ ಭಯ ಬಿದ್ದಿದ್ದ. ಆದರೆ, ಗೌತಮ್ ಏನೇ ಮಾಡಿದರೂ ಅದರಲ್ಲಿ ಯಶಸ್ಸು ಕಾಣುತ್ತಾನೆ ಆತ ಸರಿಯಾಗಿ ಬಲ್ಲನು. ಹೀಗಾಗಿ, ಈಗಲೇ ಆತನಿಗೆ ಭಯ ಶುರುವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.