Amruthadhare: ಇಲ್ಲಿವರೆಗೂ ಜೈದೇವ್ ಮೇಲಿನ ಹೆದರಿಕೆಯಿಂದ ಆತನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಸುನಿಲ್ ಮುಂದೆ ಭೂಮಿಕಾ ಸತ್ಯದ ಅನಾವರಣ ಮಾಡಿಸಿದ್ದಾಳೆ. ಸತ್ಯ ರಿವೀಲ್ ಆಗುತ್ತಿದ್ದಂತೆ ಜೈದೇವ್ ವಿರುದ್ಧವೇ ತಿರುಗಿ ಬಿದ್ದಿದ್ದಾನೆ ಸುನಿ. ಮುಂದೇನು?

ಅಮೃತಧಾರೆ ಧಾರಾವಾಹಿಯಲ್ಲಿ ಜೈ ದೇವ್ ಮಾತಿಗೆ ಕಟ್ಟು ಬಿದ್ದು, ಮಲ್ಲಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿರುವ ಸುನೀಲ್ ಜೊತೆ ಮನೆಯವರೆಲ್ಲಾ ಸೇರಿ, ಮಲ್ಲಿ ನಿಶ್ಚಿತಾರ್ಥ ಕೂಡ ಮಾಡಿ ಮುಗಿಸಿದ್ದಾರೆ. ಇದೀಗ ಸುನಿ ಮುಂದೆ ಜೈ ದೇವ್ ಮುಚ್ಚಿಟ್ಟ ಸತ್ಯದ ಅನಾವಣ ಆಗಿದೆ.

ನನಗೆ ಮಲ್ಲಿ ಪಾಸ್ಟ್ ಯಾವುದೂ ಬೇಡ, ಯಾರು ಏನು ಹೇಳ್ತಾಳೆ ಅನ್ನೋದು ನನಗೆ ಮುಖ್ಯ ಅಲ್ಲ, ವರ್ತಮಾನ ಮತ್ತು ಭವಿಷ್ಯ ಮುಖ್ಯ ಎಂದಿದ್ದ ಸುನಿಲ್ ಮುಂದೆ ಭೂಮಿಕಾ, ಮಲ್ಲಿಗೆ ಪಾಸ್ಟ್ ಅಲ್ಲಿ ಮೋಸ ಮಾಡಿದವರು ಇದೀಗ ಪ್ರೆಸೆಂಟ್ ನಲ್ಲೂ ಇದ್ದಾರೆ. ಅವರಿಂದ ಯಾವುದೇ ಅಪಾಯ ಉಂಟಾಗವಾರದು ಎಂದು ಸತ್ಯ ಹೇಳ್ತೀನಿ ಎನ್ನುತ್ತಾಳೆ.

ಮಲ್ಲಿ ಮಾಜಿ ಗಂಡ ಬೇರೆ ಯಾರೂ ಅಲ್ಲ, ಗೌತಮ್ ದಿವಾನ್ ಅವರ ಸ್ವಂತ ತಮ್ಮ, ಜೈದೇವ್ ಎಂದು ಭೂಮಿಕಾ ಜೈ ಹೆಸರು ಹೇಳುತ್ತಿದ್ದಂತೆ ಸುನಿಲ್ ಶಾಖ್ ಗೆ ಒಳಗಾಗುತ್ತಾನೆ. ಜೈ ದೇವ್ ಹಾಕಿದ ಬಲೆಯಲ್ಲಿ ತಾನು ಸಂಪೂರ್ಣವಾಗಿ ಸಿಲುಕಿ ಹಾಕಿಕೊಂಡಿರುವ ಅನ್ನೋದನ್ನು ಸುನಿ ಅರಿತುಕೊಳ್ಳುತ್ತಾನೆ.

ವಿಷಯ ತಿಳಿದು ನೇರವಾಗಿ ಜೈದೇವ್ ಮುಂದೆ ಬಂದು ನಿಲ್ಲುವ ಸುನಿ, ಜೆಡಿಗೆ ಆವಾಜ್ ಹಾಕುತ್ತಾನೆ. ಬಾಸ್ ನೀವು ಈ ಥರ ಮಾಡ್ತೀರಿ ಅಂತ ನಾನು ಅಂದುಕೊಂಡಿರಲಿಲ್ಲ. ನಿಮ್ಮ ಸ್ವಂತ ಹೆಂಡ್ತಿ ಮೇಲೆ ನನ್ನ ಛೂ ಬಿಟ್ಟಿದ್ದೀರಾ? ಖಂಡಿತವಾಗಿಯೂ ನಿಮ್ಮ ಹೆಂಡ್ತಿಯನ್ನು ನಾನು ಮದುವೆಯಾಗೋದಿಲ್ಲ ಎನ್ನುತ್ತಾನೆ.

ಸುನಿಲ್ ಮಾತು ಕೇಳಿ ಜೈ ದೇವ್ ಏನು ಮಾಡ್ತಾನೆ? ಮತ್ತೆ ಬ್ಲ್ಯಾಕ್ ಮೇಲೆ ಮಾಡಿ ಸುನಿಲ್ ಕೈಯಲ್ಲಿ ಮಲ್ಲಿಗೆ ತಾಳಿ ಕಟ್ಟಿ ಮತ್ತೆ ನೀಡ್ತಾನ? ಅಥವಾ ಸುನಿಲ್ ಜೀವವನ್ನೇ ತೆಗೆದು ಕಥೆಗೆ ಬೇರೊಂದು ಟ್ವಿಸ್ಟ್ ಕೊಡ್ತಾನ? ಯಾಕಂದ್ರೆ ಇದು ಜೈದೇವ್ ಆತ ಏನು ಮಾಡೋದಕ್ಕೂ ಹೇಸೋದಿಲ್ಲ.

ಇನ್ನು ಸುನಿ ಜೈದೇವ್ ಕಳಿಸಿರುವ ವ್ಯಕ್ತಿ, ಆತ ಮೋಸ ಮಾಡ್ಟಿದ್ದಾರೆ ಅನ್ನೋದು ಗೊತ್ತಾದ್ರೆ, ಗೌತಮ್ ದಿವಾನ್ ಸುಮ್ಮನಿರೋ ಚಾನ್ಸೇ ಇಲ್ಲ. ಸುನಿಲ್ ಗೆ ಗೌತಮ್ ಕೈಯಿಂದ ಪೆಟ್ಟು ಬೀಳಬಹುದು, ಜೊತೆಗೆ ಜೈ ದೇವ್ ಗೆ ಸರಿಯದ ಶಾಕ್ ಟ್ರೀಟ್ಮೆಂಟ್ ಸಿಗಬಹುದು, ಎರಡರಲ್ಲಿ ಒಂದಾಗೋದಂತೂ ಗ್ಯಾರಂಟಿ.

Source link
Amruthadhare: ಸತ್ಯದ ಅನಾವರಣ ಮಾಡಿಸಿದ ಭೂಮಿಕಾ… ಜೈದೇವ್’ಗೆ ಆವಾಜ್ ಹಾಕಿದ ಸುನಿಲ್ !