ಮೈಸೂರು, ಡಿಸೆಂಬರ್ 05: ವಯಸ್ಸು ಏರಿದಾಗ ಮಕ್ಕಳ ಮೇಲೆ ಅವಲಂಬಿತರಾಗದೆ ತಮ್ಮ ಕೂಳನ್ನು ತಾವೇ ಸಂಪಾದಿಸಿಕೊಳ್ಳುವ ಹಿರಿಜೀವಗಳು ನಮ್ಮ ಸುತ್ತಮುತ್ತಲಿನಲ್ಲಿ ಇದ್ದಾರೆ. ಇಳಿ ವಯಸ್ಸಿನಲ್ಲಿ ಕಷ್ಟಪಟ್ಟು ಬಿಡಿಗಾಸು ಸಂಪಾದಿಸುವ ವೃದ್ದರುಹಿರಿಯ ಜನರು) ಯುವಕ ಯುವತಿಯರಿಗೆ ಮಾದರಿ. ಅಜ್ಜಿಯೊಬ್ಬರು ತಮ್ಮ ಕೈಯಾರೆ ರುಚಿ ರುಚಿಯ ತಿಂಡಿಗಳನ್ನು ಮನೆಯಲ್ಲೇ ಮಾಡಿ ಮೈಸೂರಿನ (ಮೈಸೂರು) ಬೀದಿಯಲ್ಲಿ ಮಾರಾಟ ಮಾಡಿ ತಮ್ಮ ಕೂಳನ್ನು ತಾವೇ ಸಂಪಾದಿಸಿಕೊಳ್ಳುತ್ತಿದ್ದಾರೆ. 70ರ ಹರೆಯದಲ್ಲೂ ಗ್ರಾಹಕರು ಹೊಟ್ಟೆಯ ಹಸಿವನ್ನು ತಣಿಸುವ ಈ ಅಜ್ಜಿಯ ವಿಡಿಯೋ ವೈರಲ್ ಆಗಿದೆ. ಕಷ್ಟ ಪಟ್ಟು ದುಡಿಯುವ ವೃದ್ಧೆಯ ಪ್ರಾಮಾಣಿಕ ದುಡಿಮೆಗೆ ನೆಟ್ಟಿಗರು ಕಾಮೆಂಟ್ಗಳನ್ನು ಮಾಡಿದ್ದಾರೆ.
ಇಟಿಂಗ್ ವಿಥ್ ಗುಂಡ (eatingwithgunda) ಹೆಸರಿನ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅಜ್ಜಿಯೊಬ್ಬರ ಬೀದಿ ಬದಿಯಲ್ಲಿ ನಿಂತುಕೊಂಡು ತಾವೇ ತಯಾರಿಸಿ ದೋಸೆ, ಚಟ್ನಿ, ಚಪಾತಿ, ರೈಸ್ ಬಾತ್ ಹೀಗೆ ರುಚಿಕರ ತಿಂಡಿಗಳನ್ನು ಗ್ರಾಹಕರಿಗೆ ಬಡಿಸುತ್ತಿರುವುದನ್ನು ಕಾಣಬಹುದು. ಗ್ರಾಹಕರು ಅಜ್ಜಿಯ ಕೈ ರುಚಿಗೆ ಫಿದಾ ಆಗಿದ್ದು, ಬಾಯಿ ಚಪ್ಪರಿಸಿಕೊಂಡು ತಿಂಡಿಯನ್ನು ತಿನ್ನುವುದನ್ನು ನೀವು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಇದನ್ನೂ ಓದಿ:ಕುಂದದ ಜೀವನೋತ್ಸಾಹ; 76 ರ ಹರೆಯದಲ್ಲೂ ವಾಚ್ ರಿಪೇರಿ ಮಾಡಿ ನೆಮ್ಮದಿ ಜೀವನ ಸಾಗಿಸುತ್ತಿರುವ ವ್ಯಕ್ತಿ
ಈ ವಿಡಿಯೋ 3.1 ಮಿಲಿಯನ್ಗೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಈ ಅಜ್ಜಿಯ ಪ್ರಾಮಾಣಿಕ ಕೆಲಸಕ್ಕೆ ನನ್ನದೊಂದು ಸಲಾಂ. ಇನ್ನು ಇಳಿ ವಯಸ್ಸಿನಲ್ಲಿ ಕಷ್ಟಪಟ್ಟು ದುಡಿಯುವ ವೃದ್ಧೆಯ ಕೆಲಸವನ್ನು ಮೆಚ್ಚಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 12:53 pm, ಶುಕ್ರ, 5 ಡಿಸೆಂಬರ್ 25