
‘ಸಂಚಾರಮೆ’ ಹಾಡಿಗೆ ಮಸ್ತಿ:
ವಿಶೇಷವೆಂದರೆ, ಈ ಜೋಡಿ ಆನಂದ್ ದೇವರಕೊಂಡ ಅಭಿನಯದ ಮುಂಬರುವ ‘ಎಪಿಕ್’ (Epic) ಚಿತ್ರದ ‘ಸಂಚಾರಮೆ’ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡು ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿದ್ದರೆ, ಕುಟುಂಬದವರೆಲ್ಲರೂ ಸೇರಿ ಸಂಗೀತಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋಗೆ ಕ್ಯಾಪ್ಷನ್ ನೀಡಿರುವ ಆನಂದ್, “ಇದು ನೋಡಲು ಸ್ವಲ್ಪ ಗೊಂದಲಮಯವಾಗಿ ಕಾಣಿಸಬಹುದು (Chaotic), ಆದರೆ ಆ ಕ್ಷಣದಲ್ಲಿ ನಾವೆಲ್ಲರೂ ತುಂಬಾ ಸಂತೋಷವಾಗಿದ್ದೆವು. ನಮಗೆ ಇಷ್ಟವಾದವರ ಜೊತೆ ಪ್ರಯಾಣ ಮಾಡುವುದು ಮತ್ತು ಕುಣಿಯುವುದಕ್ಕಿಂತ ಹೆಚ್ಚಿನ ಸಂತೋಷ ಇನ್ನೇನಿದೆ?” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.