Headlines

ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ಭಾರತದ ಶ್ರೀಮಂತ ಕುಟುಂಬದ ಕುಡಿ: ಯಾರೀಕೆ?

ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ಭಾರತದ ಶ್ರೀಮಂತ ಕುಟುಂಬದ ಕುಡಿ: ಯಾರೀಕೆ?


ಸಿನಿಮಾ (ಸಿನಿಮಾ) ನಿರ್ಮಾಣ ಎಂಬುದು ಬಹಳ ರಿಸ್ಕಿ ಉದ್ಯಮ. ಇಲ್ಲಿ ಸಣ್ಣ-ಪುಟ್ಟ ಜೇಬಿನವರು ಉಳಿಯುವುದು, ಬೆಳೆಯುವುದು ಬಹಳ ಕಷ್ಟ. ಈಗಂತೂ ಸಿನಿಮಾಗಳ ಸರಾಸರಿ ಬಜೆಟ್ 500 ಕೋಟಿ ದಾಟಿರುವ ಸಂದರ್ಭದಲ್ಲಿ ಎಲ್ಲ ನಿರ್ಮಾಪಕರು ಸಿನಿಮಾಗಳನ್ನು ಮಾಡಿ ಗೆಲ್ಲಲು ಸಾಧ್ಯವಾಗುತ್ತಿಲ್ಲ. ಜೊತೆಗೆ, ಮುಂಚೆ ಎಲ್ಲ ಸಿನಿಮಾ ನಿರ್ಮಾಣ ಎಂಬುದು ವ್ಯವಹಾರದ ಜೊತೆಗೆ ಕಲಾಸಕ್ತಿ ಸಹ ಆಗಿರುತ್ತದೆ. ಆದರೆ ಈಗ ಕಾರ್ಪೊರೇಟ್ ವ್ಯವಹಾರವಾಗಿದೆ, ಕೆಲವು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ವ್ಯವಸ್ಥಿತವಾಗಿ ಉದ್ಯಮವಾಗಿ ಸಿನಿಮಾ ನಿರ್ಮಾಣವನ್ನು ನಡೆಸುತ್ತಿವೆ. ಅಂಥಹ ಹಲವು ಸಂಸ್ಥೆಗಳು ಭಾರತದಲ್ಲಿ ಸಕ್ರಿಯವಾಗಿವೆ, ಇದೀಗ ಭಾರತದ ಅತಿ ದೊಡ್ಡ ಸಮೂಹ ಸಂಸ್ಥೆ ಮತ್ತು ಶ್ರೀಮಂತ ಕುಟುಂಬಗಳಲ್ಲಿ ಒಂದೆನಿಸಿಕೊಂಡಿರುವ ಬಿರ್ಲಾ ಕುಟುಂಬವೂ ಸಹ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ.

ಅಂಬಾನಿ, ಟಾಟಾ, ಜಿಂದಾಲ್, ಅದಾನಿ ಗ್ರೂಪ್‌ಗಳ ರೀತಿಯೇ ಬಿರ್ಲಾ ಗ್ರೂಪ್ ಭಾರತದ ಅತ್ಯಂತ ಶ್ರೀಮಂತ ಮತ್ತು ಜನಪ್ರಿಯ ಸಮೂಹ ಸಂಸ್ಥೆ. ಫ್ಯಾಷನ್, ಕನ್ಸ್ಟ್ರಕ್ಷನ್, ಐಟಿ, ಫಾರ್ಮಸಿ, ಆಯಿಲ್ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಉದ್ಯಮಗಳನ್ನು ಹೊಂದಿರುವ ಆದಿತ್ಯ ಬಿರ್ಲಾ ಸಂಸ್ಥೆ ಇದೀಗ ಮನೋರಂಜನಾ ಕ್ಷೇತ್ರಕ್ಕೂ ಕಾಲಿರಿಸಿದೆ. ಈ ಮೊದಲು ಮತ್ತೊಂದು ಸಂಸ್ಥೆಯ ಅಡಿಯಲ್ಲಿ ತೀರ ಸಣ್ಣ-ಪುಟ್ಟ ಎಂಟರ್ಟೈನ್ ಮೆಂಟ್ ಪ್ರಾಜೆಕ್ಟ್ಗಳನ್ನು ನಾಮ್ ಕೆ ವಾಸ್ತೆ ಮಾಡಿದ್ದ ಬಿರ್ಲಾ ಸಂಸ್ಥೆ ಇದೀಗ ತನ್ನ ಹೆಸರಿನೊಂದಿಗೆ ಸಿನಿಮಾ ರಂಗಕ್ಕೆ ಇಳಿದಿದೆ.

ಇದನ್ನೂ ಓದಿ:ಸಿನಿಮಾ ನಿರ್ಮಾಣ ತ್ಯಜಿಸಿದ ವೆಟ್ರಿಮಾರನ್, ಕಾರಣ ಏನು?

ಆದಿತ್ಯ ಬಿರ್ಲಾ ಗ್ರೂಪ್ ಹಾಲಿ ಚೇರ್ ಮ್ಯಾನ್ ಆಗಿರುವ ಕುಮಾರ ಮಂಗಲಂ ಬಿರ್ಲಾ ಅವರ ಪುತ್ರಿ, ಉದ್ಯಮಿ ಅನನ್ಯ ಬಿರ್ಲಾ ಅವರು ಬಿರ್ಲಾ ಸ್ಟುಡಿಯೋಸ್ ಆರಂಭಿಸಿದ್ದು, ಸಿನಿಮಾ ನಿರ್ಮಾಣ, ವಿತರಣೆಗೆ ಇಳಿದಿದ್ದಾರೆ. ಅನನ್ಯಾ ಬಿರ್ಲಾ ಅವರು ಈ ಹಿಂದೆ ಬಿರ್ಲಾದ ಫ್ಯಾಷನ್ ಸೇರಿದಂತೆ ಇನ್ನೂ ಕೆಲವು ಉದ್ಯಮಗಳನ್ನು ನಿರ್ವಹಿಸಿದ ಅನುಭವ ಉಳ್ಳವರಾಗಿದ್ದರೆ, ಇದೀಗ ಬಿರ್ಲಾ ಸ್ಟುಡಿಯೋಸ್‌ನ ಜವಾಬ್ದಾರಿಯನ್ನು ವಹಿಸಲಾಗಿದೆ.

ಸ್ಟುಡಿಯೋ ಬಗ್ಗೆ ಹೊರಡಿಸಿದ ಪ್ರಕಟಣೆಯಲ್ಲಿ ಹೇಳುವಂತೆ, ‘ಬಿರ್ಲಾ ಸ್ಟುಡಿಯೋಸ್ ಒಂದು ಉನ್ನತ ಧ್ವನಿ, ಕಮರ್ಷಿಯಲ್ ಸಿನಿಮಾಗಳನ್ನು ನಿರ್ಮಿಸುವ ಗಮನಹರಿಸುವ ಚಲನಚಿತ್ರ ಸ್ಟುಡಿಯೋ ಆಗಿದೆ. ಕರಕುಶಲತೆ ಮತ್ತು ದೀರ್ಘಕಾಲದ ಪ್ರಸ್ತುತತೆಗೆ ಆದ್ಯತೆ ನೀಡುವ, ಬಹು ಸಮಯ ಕೊಡಬಹುದಾದ ಕಥೆಗಳು ಸ್ಟುಡಿಯೋದ ಆಯ್ಕೆ ಆಗಿರುತ್ತದೆ. ಬಿರ್ಲಾ ಸ್ಟುಡಿಯೋಸ್ ಗಟ್ಟಿ ಕತೆಗಳನ್ನು ಹೊಂದಿರುವ ವಾಣಿಜ್ಯ ಚಲನಚಿತ್ರಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಅತ್ಯುತ್ತಮ ಪ್ರತಿಭೆ, ಉದಯೋನ್ಮುಖ ಪ್ರತಿಭಾವಂತರು ಮತ್ತು ದಿಟ್ಟ ವಿಚಾರಗಳಿಗೆ ಬೆಂಬಲವಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 3:58 pm, ಗುರುವಾರ, 5 ಫೆಬ್ರವರಿ 26



Source link

Leave a Reply

Your email address will not be published. Required fields are marked *