ನಗರದ ಚರಂಡಿ, ನೀರು ಸರಬರಾಜು ಸರಿಪಡಿಸಲು ಸರ್ಕಾರಕ್ಕೆ 21ಕೆಜಿ ಚಿನ್ನ ದೇಣಿಗೆ ನೀಡಿದ ಅನಾಮಿಕ, ಈತ ನೀಡಿದ ಚಿನ್ನದ ಮೌಲ್ಯ ಬರೋಬ್ಬರಿ 30 ಕೋಟಿ ರೂಪಾಯಿ. ಕೇವಲ ಒಂದೇ ಒಂದು ಮನವಿ ಮಾಡಿ ಹೆಸರು ಹೇಳದೆ ಈ ದೇಣಿಗೆ ನೀಡಲಾಗಿದೆ.

ಹಣ , ಚಿನ್ನ ದೇಣಿಗೆ ನೀಡುವುದು ಭಾರತದಲ್ಲಿ ಹೊಸದೇನಲ್ಲ. ಸಂಘ ಸಂಸ್ಥೆಗಳಿಗೆ, ದೇವಸ್ಥಾನಗಳಿಗೆ ಸೇರಿದಂತೆ ಹಲವೆಡೆ ದೇಣಿಗೆ ನೀಡಲಾಗುತ್ತದೆ. ಇನ್ನು ಕೊರೋನಾ ಸೇರಿದಂತೆ ಕೆಲ ವಿಶೇಷ ಸಂದರ್ಭಗಳಲ್ಲಿ ಸರ್ಕಾರಕ್ಕೂ ದೇಣಿಗೆ ನೀಡಿದ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬ ಬರೋಬ್ಬರಿ 21 ಕೆಜಿ ಚಿನ್ನವನ್ನು ಸರ್ಕಾರಕ್ಕೆ ದೇಣಿಗೆ ನೀಡಿದ್ದಾನೆ. ಇದರ ಮೌಲ್ಯ ಬರೋಬ್ಬರಿ 30 ಕೋಟಿ ರೂಪಾಯಿ ಈತನ ಬೇಡಿಕೆ ಒಂದೆ, ಜೊತೆಗೆ ಯಾವುದೇ ಷರತ್ತುಗಳು ಇಲ್ಲ. ಈತ ಹೇಳಿದ್ದ ದಯವಿಟ್ಟು ಈ 21 ಕೆಜಿ ಚನ್ನವನ್ನು ಬಳಸಿಕೊಂಡು ಚರಂಡಿ ಬ್ಲಾಕ್ ಹಾಗೂ ನೀರು ಸರಬರಾಜು ವ್ಯವಸ್ಥೆ ಸರಿ ಮಾಡಿ.

ಚಿನ್ನದ ಬೆಲೆ ದುಬಾರಿಯಾಗಿರುವ ಸರ್ಕಾರ ಮಾಡಬೇಕಿದ್ದ ಕೆಲಸ್ಕೆ ದೇಣಿಗೆ ನೀಡಿದ ಪುಣ್ಯಾತ್ಮ ಯಾರು ಎಂದು ಅಚ್ಚರಿಗೊಂಡಿದ್ದೀರಾ? ಈ ಘಟನೆ ನಡೆದಿರುವುದು ಭಾರತದಲ್ಲಿ ಅಲ್ಲ, ಜಪಾನ್‌ನಲ್ಲಿ. ಓಸಾಕ ನಗರದ ಬ್ಲಾಕ್ ಆಗಿರುವ ಚರಂಡಿ ವ್ಯವಸ್ಥೆ, ನಗರದಲ್ಲಿನ ನೀರು ಸರಬರಾಜು ವ್ಯವಸ್ಥೆ ಸರಿಪಡಿಸಲು ಈತ 30 ಕೋಟಿ ರೂಪಾಯಿ ಮೌಲ್ಯದ ಚಿನ್ನ ದೇಣಿಗೆಯಾಗಿ ನೀಡಿದ್ದಾನೆ.

ಓಸಾಕ ಮೇಯರ್ ಕಚೇರಿಗೆ ಅನಾಮಿಕ ವ್ಯಕ್ತಿ 21 ಕೆಜಿ ಚಿನ್ನ ಕಳುಹಿಸಿದ್ದಾನೆ. ಇದರ ಜೊತೆಗೆ ಒಂದು ಪತ್ರವನ್ನು ಇಟ್ಟಿದ್ದಾನೆ. ಈ ಪತ್ರದಲ್ಲಿ 21ಕೆಜಿ ಚಿನ್ನ ಕಳುಹಿಸಲಾಗಿದೆ. ಈ ಚಿನ್ನದಲ್ಲಿ ಓಸಾಕ ಚರಂಡಿ ವ್ಯವಸ್ಥೆ ಹಾಗೂ ನೀರು ಸರಬರಾಜು ವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ಈತ ಯಾರು, ಹೆಸರು ವಿಳಾಸ ಬಹಿರಂಗಪಡಿಸಲು ಇಚ್ಚಿಸಿಲ್ಲ.

ಈ ಘಟನೆ ಕುರಿತು ಓಸಾಕ ಮೇಯರ್ ಹಿಡೆಯುಕಿ ಯೋಕೋಯಮ ಪ್ರತಿಕ್ರಿಯಿಸಿದ್ದಾರೆ. ಚಿನ್ನ ಹಾಗೂ ಪತ್ರ ನೋಡಿ ಭಾವುಕನಾದೆ. ಈ ರೀತಿ ಇರುತ್ತಾರಾ ಎಂದು ಒಂದು ಬಾರಿ ಯೋಚಿಸಿದೆ. ನಗರದ ನೀರು ಸರಬರಾಜು ಹಾಗೂ ಚರಂಡಿ ವ್ಯವಸ್ಥೆಗಳ ಕುರಿತು ಸತತವಾಗಿ ದೂರು ಕೇಳಿಬರುತ್ತಿತ್ತು. ಮುನ್ಸಿಪಲ್ ಕೌನ್ಸಿಲ್ ಈ ಕುರಿತು ಒಂದೊಂದು ಸಮಸ್ಯೆಗಳನ್ನು ಸರಪಡಿಸುತ್ತಾ ಬಂದಿತ್ತು. ಇದರ ನಡುವೆ ಈ ವಿಶೇಷ ಮನವಿ ಬಂದಿದೆ ಎಂದಿದ್ದಾರೆ.

ಚಿನ್ನವನ್ನು ಹಣವನ್ನಾಗಿ ಪರಿವರ್ತಿಸಿರು ಮೇಯರ್ ಕಚೇರಿ ಸಿಬ್ಬಂದಿಗಳು ಸಂಪೂರ್ಣ ಹಣದಲ್ಲಿ ಓಸಾಕ ನಗರದ ಚರಂಡಿ ಹಾಗೂ ನೀರು ಸರಬರಾಜು ವ್ಯವಸ್ಥೆ ಸರಿಪಡಿಸಲು ಆದೇಶ ನೀಡಲಾಗಿದೆ. ಇತ್ತ ಕಾಮಗಾರಿಗಳು ಆರಂಭಗೊಂಡಿದೆ. ಇಡೀ ನಗರದ ವ್ಯವಸ್ಥೆ ಸಂಪೂರ್ಣವಾಗಿ ಸರಿಪಡಿಸಲು ಆದೇಶ ನೀಡಲಾಗಿದೆ.

ಭಾರತದಲ್ಲಿ ಚಿನ್ನ ದೇಣಿಗೆ ನೀಡಿದ ಉದಾಹರಣೆ ದೇವಸ್ಥಾಗಳಲ್ಲಿ ಇದೆ. ಹಲವು ಉದ್ಯಮಿಗಳು, ಶ್ರೀಮಂತರು ಚಿನ್ನದ ಕಿರೀಟ, ಆಭರಣ, ಹೊದಿಕೆ ಸೇರಿದಂತೆ ಹಲವು ದೇಣಿಗೆ ನೀಡಿದ್ದಾರೆ. ಆದರೆ ಓಸಾಕ ನಗರದಲ್ಲಿ ನಡೆದ ರೀತಿಯಲ್ಲೇ ಭಾರತದಲ್ಲಿ 2022ರಲ್ಲಿ ಕಾಶಿ ವಿಶ್ವನಾಥನ ದೇಗುಲಕ್ಕೆ ಅನಾಮಿಕ ಚಿನ್ನದ ದೇಣಿಗೆ ನೀಡಿದ್ದ. ಬರೋಬ್ಬರಿ 60 ಕೆಜಿ ಚಿನ್ನವನ್ನು ದೇಣಿಗೆಯಾಗಿ ನೀಡಲಾಗಿತ್ತು.

ಅನಾಮಿಕನಿಂದ 60 ಕೆಜಿ ಚಿನ್ನ ದೇಣಿಗೆ

Source link
ನಗರದ ಚರಂಡಿ, ನೀರು ಸರಬರಾಜು ಸರಿಪಡಿಸಲು ಸರ್ಕಾರಕ್ಕೆ 21ಕೆಜಿ ಚಿನ್ನ ದೇಣಿಗೆ ನೀಡಿದ ಅನಾಮಿಕ