Headlines

ಗಂಡು ಮನೆ ಕಟ್ಟಿದ್ರೆ ಸಾಧನೆ, ಹೆಣ್ಣು ಕಟ್ಟಿದ್ರೆ ಬೇರೆನೆ- ಮೆಂಟಲ್​ ರೇ*ಪ್​ ಬಗ್ಗೆ ಅನುಶ್ರೀ ಹೇಳಿದ್ದೇನು

ಗಂಡು ಮನೆ ಕಟ್ಟಿದ್ರೆ ಸಾಧನೆ, ಹೆಣ್ಣು ಕಟ್ಟಿದ್ರೆ ಬೇರೆನೆ- ಮೆಂಟಲ್​ ರೇ*ಪ್​ ಬಗ್ಗೆ ಅನುಶ್ರೀ ಹೇಳಿದ್ದೇನು

ಗಂಡು ಮನೆ ಕಟ್ಟಿದ್ರೆ ಸಾಧನೆ, ಹೆಣ್ಣು ಕಟ್ಟಿದ್ರೆ ಬೇರೆನೆ- ಮೆಂಟಲ್​ ರೇ*ಪ್​ ಬಗ್ಗೆ ಅನುಶ್ರೀ ಹೇಳಿದ್ದೇನು

ಆ್ಯಂಕರ್ ಅನುಶ್ರೀ ತಮ್ಮ 20 ವರ್ಷಗಳ ವೃತ್ತಿ ಜೀವನದ ಪಯಣ ಮತ್ತು ಅದರ ಹಿಂದಿನ ನೋವಿನ ಹಾದಿಗಳನ್ನು ಹಂಚಿಕೊಂಡಿದ್ದಾರೆ. ಸಮಾಜದಲ್ಲಿ ಯಶಸ್ವಿ ಮಹಿಳೆಯರು ಎದುರಿಸುವ ಸವಾಲುಗಳು, ಇಲ್ಲಸಲ್ಲದ ಆರೋಪಗಳು ಮತ್ತು ಆನ್‌ಲೈನ್ ಟ್ರೋಲ್‌ಗಳ ಬಗ್ಗೆ ಅವರು ಆರ್.ಜೆ. ಮಯೂರ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಪಟಪಟ ಎಂದು ಮಾತನಾಡುತ್ತಾ, ವೇದಿಕೆಯ ಮೇಲೆ ಆ ಸನ್ನಿವೇಶಕ್ಕೆ ತಕ್ಕಂತೆ ಆ ವಿಷಯವನ್ನು ಹೇಳುತ್ತಾ, ಸದಾ ಎಲ್ಲರನ್ನೂ ನಕ್ಕು ನಗಿಸೋರು ಎಂದರೆ ಅವರು ಆ್ಯಂಕರ್​ ಅನುಶ್ರೀ (Anchor Anushree). ಆ್ಯಂಕರಿಂಗ್​ ಎನ್ನುವ ಕಲೆ ಬೇಕು ಎಂದರೆ ಕರಗತವಾಗುವಂಥದ್ದಲ್ಲ. ಅದರಲ್ಲಿಯೂ ರಿಯಾಲಿಟಿ ಷೋ ಸಕ್ಸಸ್​ ಮಾಡುವಲ್ಲಿ ಆ್ಯಂಕರ್ಸ್​ ಪಾತ್ರ ಬಹು ಮುಖ್ಯವಾಗಿರುತ್ತದೆ. ಅವರಿಗೆ ಹೀಗೆಯೇ ಮಾತನಾಡಬೇಕು ಎಂದು ಮೊದಲೇ ಸ್ಕ್ರಿಪ್ಟ್​ ನೀಡುತ್ತಾರೆಯಾದರೂ, ಎಲ್ಲವೂ ಸ್ಕ್ರಿಪ್ಟ್​ನಿಂದಲೇ ನಡೆಯುವಂಥ ಕಲೆ ಆ್ಯಂಕರಿಂಗ್​ ಅಲ್ಲ. ಆ ಕ್ಷಣದಲ್ಲಿ, ಆ ಪರಿಸ್ಥಿತಿಗೆ ತಕ್ಕಂತೆ ಮಾತನಾಡುವ, ಜನರನ್ನು ನಗಿಸುವ ಕಲೆ ಸುಲಭವೂ ಅಲ್ಲ. ಅದು ಒಲಿದಿರುವುದು ಆ್ಯಂಕರ್​ ಅನುಶ್ರೀ ಅವರಂಥ ಕೆಲವೇ ಕೆಲವು ಆ್ಯಂಕರ್​ಗಳಿಗೆ.

18ನೇ ವಯಸ್ಸಿನಲ್ಲಿಯೇ ಆ್ಯಂಕರಿಂಗ್​ ಕ್ಷೇತ್ರಕ್ಕೆ ಬಂದಿರೋ ಅನುಶ್ರೀ ಅವರ ಈ ಪಯಣಕ್ಕೆ ಇದೀಗ 20 ವರ್ಷಗಳ ಸಂಭ್ರಮ. ಯಾವುದೇ ಕ್ಷೇತ್ರದ ಸೆಲೆಬ್ರಿಟಿಯ ಹಿನ್ನೆಲೆ, ಬಾಲ್ಯ ತೆಗೆದುಕೊಂಡಾಗ, ಅದರಲ್ಲಿ ನೋವಿನ ಹಾದಿಗಳೇ ತುಂಬಿರುತ್ತದೆ. ಅದೇ ರೀತಿ ಅನುಶ್ರೀ ಅವರೂ ಇಂದು ಈ ಮಟ್ಟಕ್ಕೆ ಬೆಳೆಯಬೇಕು ಎಂದರೆ, ಅದರ ಹಿಂದೆ ನೋವಿನ ಹಾದಿಗಳಿವೆ, ಮುಳ್ಳಿನ ಮೇಲೆ ನಡೆದ ದಿನಗಳಿವೆ. ಆದರೆ, ಹೆಣ್ಣೊಬ್ಬಳು ಬೆಳೆದು ನಿಂತರೆ, ಆಕೆ ನಗುನಗುತ್ತಾ ಇದ್ದರೆ ಅದಕ್ಕೆ ಬೇರೆಯದ್ದೇ ಹೆಸರು ನೀಡುವ ದೊಡ್ಡ ವರ್ಗವೇ ಇದೆ. ಇದೇ ಮೆಂಟಲ್​ ರೇ*ಪ್

ಜೀವನದಲ್ಲಿ ಎಷ್ಟೊಂದು ಕಷ್ಟಗಳನ್ನು ಅನುಭವಿಸಿ, ಮೇಲಕ್ಕೆ ಬಂದ ಹೆಣ್ಣುಮಗಳೊಬ್ಬಳಿಗೆ ಜನರು ಇಲ್ಲಸಲ್ಲದ ಪಟ್ಟ ಕಟ್ಟಿದಾಗ, ಕೆಟ್ಟ ಕೆಟ್ಟ ಕಮೆಂಟ್ಸ್​ಗಳಿಂದ ಮಾತನಾಡಿದಾಗ, ವೇದಿಕೆಯ ಮೇಲೆ ನಗುನಗುತ್ತಾ ಎಲ್ಲರನ್ನೂ ನಗಿಸುತ್ತಾ ಇರುವ ಹಿಂದಿನ ನೋವನ್ನು ತಿಳಿಯದೇ ಆಕೆಯ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದಾಗ ಅದೆಂಥ ನೋವು ಆಗುತ್ತದೆ ಎನ್ನುವ ಬಗ್ಗೆ ಆ್ಯಂಕರ್​ ಅನುಶ್ರೀ ಅವರು ಆರ್​ಜೆ ಮಯೂರ ಅವರ ಚಾನೆಲ್​ನಲ್ಲಿ ಮಾತನಾಡಿದ್ದಾರೆ.

ಮಯೂರ ಅವರು ಒಂದು ಕೋಟಿ ಮನೆ ತೆಗೆದುಕೊಂಡರೆ ಅದು ಸಾಧನೆ, ಅದೇ ಅನುಶ್ರೀ ಒಂದು ಕೋಟಿ ಮನೆ ತೆಗೆದುಕೊಂಡ್ರೆ ಗೊತ್ತಾಯ್ತು ಬಿಡಿ… ಅದು ಬೇರೆನೇ ಎಂದು ಮಾತನಾಡುತ್ತಾರೆ. ಇದು ಅನುಶ್ರೀ ಒಬ್ಬಳ ಮಾತಲ್ಲ, ಹೆಚ್ಚಿನ ಹೆಣ್ಣುಮಕ್ಕಳಿಗೆ ಆಗ್ತಿರೋದು ಇದನ್ನೇ. ಆಕೆಯನ್ನು ಸಮಾಜ ಯಾವ ರೀತಿ ನೋಡುತ್ತದೆ ಎನ್ನುವ ಬಗ್ಗೆ ಈ ಸಂದರ್ಶನದಲ್ಲಿ ಅನುಶ್ರಿ ಮಾತನಾಡಿದ್ದಾರೆ.

ಅಪ್ಪ ಬಿಟ್ಟು ಹೋದಾಗ, ಚಿಕ್ಕ ವಯಸ್ಸಿನಲ್ಲಿಯೇ ಮನೆಯ ಜವಾಬ್ದಾರಿಯನ್ನು ಹೆಗಲ ಮೇಲೆ ಹಾಕಿಕೊಂಡು ಎಲ್ಲವನ್ನೂ ನಿಭಾಯಿಸಿಕೊಂಡು ಬಂದವರು ಅನುಶ್ರೀ. ಮನೆಗೆ ಆಸರೆಯಾಗಬೇಕಾದ ಕಾಲದಲ್ಲಿ ದೂರವಾಗಿ, 25 ವರ್ಷಗಳ ಬಂದು, ಅದೂ ನೇರವಾಗಿ ಮನೆಗೆ ಬರದೇ ಬೇರೆಯವರ ಬಳಿ ನಾನು ಅನುಶ್ರೀ ಅವರ ತಂದೆ ಎಂದು ಹೇಳಿಕೊಂಡಾಗ ಅದನ್ನು ಅನುಶ್ರೀ ಒಪ್ಪಿರಲಿಲ್ಲ. ತಂದೆಯ ಕರ್ತವ್ಯದ ಬಗ್ಗೆ ಮಾತನಾಡದೇ ಆಗಲೂ ಅನುಶ್ರೀ ಅವರತ್ತನೇ ಬೊಟ್ಟು ಮಾಡಿ ತೋರಿಸಿದ್ದರು ಕೆಲವು ಅತೃಪ್ತ ಆತ್ಮಗಳು. ಅದರ ಬಗ್ಗೆಯೂ ಅನುಶ್ರೀ ಮಾತನಾಡಿದ್ದಾರೆ.

ಕಿತ್ತು ತಿನ್ನುವಷ್ಟು ಮಾತುಗಳನ್ನು ಆಡ್ತಾರೆ, ಸೈಕೋಪಾಥ್​ಗಳ ರೀತಿಯಲ್ಲಿ ಕಮೆಂಟ್ಸ್​ ಮಾಡ್ತಾರೆ. ಕೆಟ್ಟ ಕೆಟ್ಟ ಕಮೆಂಟ್ಸ್​ ಹಾಕಿದ್ದಾರೆ. ಕರೆದುಕೊಂಡು ಹೋಗಿ ಅವಳಿಗೆ ಖಾರದ ಪುಡಿ ಹಾಕಿ ಅನ್ನೋ ಕಮೆಂಟ್ಸ್​ ಬಂದಿವೆ. ಕಷ್ಟದಲ್ಲಿ ಇದ್ದ ಸಂದರ್ಭಗಳಲ್ಲಿ ಒಬ್ಬರೂ ಬಂದು ಕೇಳಲಿಲ್ಲ. ಆದರೆ ಈಗ ಇಲ್ಲಸಲ್ಲದ ಕಮೆಂಟ್ಸ್​ ಬರುತ್ತವೆ ಎಂದು ಅನುಶ್ರೀ ಹೇಳಿದ್ದಾರೆ. ಇದರ ಜೊತೆಗೆ ತಮ್ಮ ಜೀವನದ ಹಲವಾರು ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *