16

Image Credit : Anchor Anushree instagram
ರೆಸಾರ್ಟ್ನಲ್ಲಿ ಮದುವೆ
ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್ವೊಂದರಲ್ಲಿ ಕುಟುಂಬಸ್ಥರು, ಆತ್ಮೀಯರು, ಚಿತ್ರರಂಗದ ಗಣ್ಯರ ಸಾಕ್ಷಿಯಾಗಿ ಅವರು ಮದುವೆಯಾಗಿದ್ದರು. ಮಂತ್ರ ಮಾಂಗಲ್ಯದ ಮೂಲಕ ಮದುವೆ ಆಗುವ ಆಸೆ ಇತ್ತಾದರೂ ಕೂಡ, ಒಂದಿಷ್ಟು ನಿಯಮಗಳು ಇರೋದಿಕ್ಕೆ ಅವರು ಸಿಂಪಲ್ ಆಗಿ ಮದುವೆಯಾಗಿದ್ದರಂತೆ. ಆದರೆ ಅವರು ಅಂದುಕೊಂಡಿದ್ದಕ್ಕಿಂತ ಸ್ವಲ್ಪ ಗ್ರ್ಯಾಂಡ್ ಆಗಿ ನಡೆದಿದೆ ಎಂದು ಅವರೇ ಹೇಳಿದ್ದರು.
26
Image Credit : Anchor Anushree instagram
ಐಟಿ ಉದ್ಯೋಗಿ ರೋಶನ್
ಅಂದಹಾಗೆ ರೋಶನ್ ಅವರು ಐಟಿ ಉದ್ಯೋಗಿ. ಪುನೀತ ಪರ್ವ ಕಾರ್ಯಕ್ರಮದಲ್ಲಿ ರೋಶನ್ ಹಾಗೂ ಅನುಶ್ರೀ ಭೇಟಿಯಾಗಿತ್ತು. ಅಲ್ಲಿಂದ ಬೆಳೆದ ಸ್ನೇಹ ಪ್ರೀತಿಗೆ ತಿರುಗಿದೆ. ರೋಶನ್ ಅವರು ಕೊಡಗಿನವರು. ಅನುಶ್ರೀ ಮಂಗಳೂರಿನ ಬೆಡಗಿ. ಈ ಪ್ರೀತಿಗೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದು, ಮದುವೆಯಾಗಿದೆ.
36
Image Credit : Anchor Anushree instagram
ನಿರ್ದೇಶಕ ಆರತಕ್ಷತೆಯಲ್ಲಿ ಭಾಗಿ
ರೋಶನ್ ಹಾಗೂ ಅನುಶ್ರೀ ಅವರು ‘777 ಚಾರ್ಲಿ’ ಸಿನಿಮಾ ನಿರ್ದೇಶಕ ಕಿರಣ್ ರಾಜ್ ಮದುವೆ ಆರತಕ್ಷತೆಯಲ್ಲಿ ಭಾಗಿಯಾಗಿದ್ದರು. ಕಿರಣ್ ಹಾಗೂ ಅನುಶ್ರೀ ಅವರು ಒಂದೇ ಊರಿನವರು, ಚಿತ್ರರಂಗದಲ್ಲಿ ಆಕ್ಟಿವ್ ಆಗಿರೋದಿಕ್ಕೆ ಸ್ನೇಹ ಬೆಳೆದಿತ್ತು.
46
Image Credit : Anchor Anushree instagram
ಫೋಟೋ ತೆಗೆಸಿಕೊಂಡ್ರು
ರೋಶನ್ ಹಾಗೂ ಅನುಶ್ರೀ ಜೋಡಿಯು ಈ ಆರತಕ್ಷತೆಯಲ್ಲಿ ಭಾಗಿಯಾಗಿದ್ದು, ಖುಷಿಯಿಂದ ಒಂದಿಷ್ಟು ಸಮಯವನ್ನು ಕಳೆದಿದೆ. ಅಷ್ಟೇ ಅಲ್ಲದೆ ಫೋಟೋ ತೆಗೆಸಿಕೊಂಡಿದೆ. ಈಗ ಅನುಶ್ರೀ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
56
Image Credit : Anchor Anushree instagram
ಅನೇಕರ ಆಸೆ ಈಡೇರಿತು
ರೋಶನ್ ಹಾಗೂ ಅನುಶ್ರೀ ಅವರು ಮದುವೆ ಆಗಿರೋದು ತಡವಾಗಿದೆ. ಈ ಜೋಡಿ ಬದುಕಿಗೆ ಆದಷ್ಟು ಬೇಗ ಹೊಸ ಸದಸ್ಯರ ಆಗಮನವಾಗಲಿ ಎಂದು ನಟಿ ತಾರಾ, ಜ್ಯೋತಿ ಪ್ರೇಮ್ ಹಾರೈಸಿದ್ದರು. ಅಂದಹಾಗೆ ಅನುಶ್ರೀ ಅವರು ಮಾಂಗಲ್ಯ ಧರಿಸಿ, ಹಣೆಗೆ ಬೊಟ್ಟು ಇಟ್ಟು, ಸೀರೆಯಲ್ಲಿ ಶ್ರೀಮತಿಯಾಗಿ ಕಂಗೊಳಿಸಬೇಕು, ಅದನ್ನು ನೋಡಬೇಕು ಎಂದು ಅನೇಕರು ಕನಸು ಕಂಡಿದ್ದರು. ಈ ಫೋಟೋ ನೋಡಿ ಅನೇಕರು ಖುಷಿಪಟ್ಟಿದ್ದು, ಯಾರ ದೃಷ್ಟಿಯೂ ಬೀಳದಿರಲಿ ಎಂದು ಕೂಡ ಕೆಲವರು ಹೇಳುತ್ತಿದ್ದಾರೆ.
66
Image Credit : Anchor Anushree instagram
ನಿರೂಪಣೆಯಲ್ಲಿ ಭಾಗಿ
ಅನುಶ್ರೀ ಅವರು ಎಂದಿನಂತೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಸೇರಿದಂತೆ ಸಿನಿಮಾ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುತ್ತಿದ್ದಾರೆ.
ಅಂದಹಾಗೆ ರೋಶನ್ ಅವರು ಸಖತ್ ಆಗಿ ಅಡುಗೆ ಮಾಡುತ್ತಾರಂತೆ. ಅವರ ಅಡುಗೆಯನ್ನು ತಿನ್ನೋದು ಅನುಶ್ರೀಗೆ ಇಷ್ಟವಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.