Headlines

Video: ಚೀನಾದಲ್ಲಿ ಸುಮಾರು 1500 ವರ್ಷಗಳಷ್ಟು ಹಳೆಯ ದೇವಾಲಯಕ್ಕೆ ಬೆಂಕಿ

Video: ಚೀನಾದಲ್ಲಿ ಸುಮಾರು 1500 ವರ್ಷಗಳಷ್ಟು ಹಳೆಯ ದೇವಾಲಯಕ್ಕೆ ಬೆಂಕಿ


ಚೀನಾ, ನವೆಂಬರ್ 13: ಚೀನಾದ ಜಿಯಾಂಗ್ಸು ಪ್ರಾಂತ್ಯದ ಜಾಂಗ್ಜಿಯಾಗ್ಯಾಂಗ್‌ನಲ್ಲಿರುವ 1,500 ವರ್ಷಗಳಷ್ಟು ಹಳೆಯದಾದ ಯೋಂಗ್‌ಕಿಂಗ್ ದೇವಾಲಯದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಶತಮಾನಗಳಷ್ಟು ಹಳೆಯದಾದ ಬೌದ್ಧ ವಾಸ್ತುಶಿಲ್ಪ ಮತ್ತು ಆಧ್ಯಾತ್ಮಿಕ ಮಹತ್ವಕ್ಕೆ ಹೆಸರುವಾಸಿಯಾದ ಈ ಪ್ರಾಚೀನ ದೇವಾಲಯದ, ಸಂಕೀರ್ಣದೊಳಗಿನ ಬಹುಮಹಡಿ ಮಂಟಪಗಳು ಸುತ್ತುಹೋಗಿವೆ.

ಸ್ಥಳೀಯ ಅಧಿಕಾರಿಗಳ ಪ್ರಕಾರ, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು, ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ದಳ ಮತ್ತು ತುರ್ತು ತಂಡಗಳಿಗೆ ಸ್ಥಳಕ್ಕೆ ಧಾವಿಸಿವೆ. ಬೆಂಕಿಯ ಕಾರಣವನ್ನು ಪ್ರಸ್ತುತ ತನಿಖೆ ನಡೆಸಲಾಗುತ್ತಿದೆ, ದೋಷಪೂರಿತ ವೈರಿಂಗ್, ಧೂಪದ್ರವ್ಯ ಬಳಕೆ ಏನು ಕಾರಣ ಎಂದು ತನಿಖೆ ನಡೆಸಲಾಗುತ್ತಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *