ಒಟಿಟಿಯಲ್ಲಿ ಪ್ರತಿ ವಾರ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತಲೇ ಇರುತ್ತವೆ. ಕನ್ನಡಕ್ಕಿಂತ ಪರಭಾಷಾ ಸಿನಿಮಾಗಳು ಒಟಿಟಿಗೆ ಕಾಲಿಡೋದು ಹೆಚ್ಚು. ಈಗ ಒಂದೇ ದಿನ ಕನ್ನಡದ ಎರಡು ಸೂಪರ್ ಹಿಟ್ ಚಿತ್ರಗಳು ಒಟಿಟಿಗೆ ಕಾಲಿಟ್ಟಿವೆ. ಇದು ಪಾಲಿಗೆ ನಿಜಕ್ಕೂ ವಿಶೇಷ. ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಅಥವಾ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಮತ್ತೊಮ್ಮೆ ನೋಡಬೇಕು ಎಂದುಕೊಂಡವರು ಸಿನಿಮಾದ ಮನೆಯಲ್ಲೇ ಕುಳಿತು ನೋಡಬಹುದು.
ಏಳುಮಲೆ
ಕನ್ನಡದಲ್ಲಿ ಇತ್ತೀಚೆಗೆ ರಿಲೀಸ್ ಆಗಿ ಹಿಟ್ ಆದ ಚಿತ್ರಗಳಲ್ಲಿ ‘ಏಳುಮಲೆ’ ಸಿನಿಮಾ ಕೂಡ ಒಂದು. ರಾಣಾ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಪುನೀತ್ ರಂಗಸ್ವಾಮಿ ನಿರ್ದೇಶನವಿದೆ. ಎಲ್ಲಕ್ಕಿಂತ ಮುಖ್ಯವಾಗಿ ತರುಣ್ ಸುಧೀರ್ ಅವರು ತಮ್ಮ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗೆ ಒಳ್ಳೆಯ ವಿಮರ್ಶೆ ಸಿಕ್ಕ ಹೆಚ್ಚಿನ ಜನರನ್ನು ಸಿನಿಮಾ ತಲುಪಿಲ್ಲ ಎಂಬ ಬೇಸರ ಅವರಿಗೆ ಇದೆ. ಸೆಪ್ಟೆಂಬರ್ 5 ರಂದು ಈ ಚಿತ್ರ ಥಿಯೇಟರ್ ನಲ್ಲಿ ಬಿಡುಗಡೆ ಕಂಡಿತ್ತು.
ಇದನ್ನೂ ಓದಿ: ಅಕ್ಟೋಬರ್ 10 ರಿಂದ ‘ಮಿರಾಯ’ ಸಿನಿಮಾ: ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರ
ಇದನ್ನೂ ಓದಿ
ಅಕ್ಟೋಬರ್ 17ಕ್ಕೆ ಸಿನಿಮಾ ಒಟಿಟಿಗೆ ಬಂದಿದೆ. ಚಿತ್ರ ಜೀ5 ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರದಲ್ಲಿ ರಾಣಾಗೆ ಜೊತೆಯಾಗಿ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ. ಒಂದು ರಾತ್ರಿಯಲ್ಲಿ ನಡೆಯೋ ಕಥೆ ಇದಾಗಿದ್ದರೆ, ನೈಜ ಘಟನೆಗಳನ್ನು ಆಧರಿಸಿದೆ. ಜಗಪತಿ ಬಾಬು, ಕಿಶೋರ್ ಮೊದಲಾದವರು ಸಿನಿಮಾದ ಭಾಗವಾಗಿದ್ದಾರೆ.
ಅಂದಿತ್ತು ಕಾಲ
ವಿನಯ್ ರಾಜ್‌ಕುಮಾರ್ ಹಾಗೂ ಅಧಿತಿ ಪ್ರಭುದೇವ ನಟನೆಯ ‘ಅಂದಿತ್ತು ಕಾಲ’ ಆಗಸ್ಟ್ 19 ರಂದು ಥಿಯೇಟರ್‌ನಲ್ಲಿ ರಿಲೀಸ್ ಆಯಿತು. ಈ ಚಿತ್ರ ಕೂಡ ವಿಮರ್ಶೆಯಲ್ಲಿ ಮೆಚ್ಚುಗೆ ಪಡೆಯಿತು. ಈಗ ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಆರಂಭಿಸಿದೆ. ಈ ಚಿತ್ರ ಇಂದು (ಅಕ್ಟೋಬರ್ 17) ಒಟಿಟಿಗೆ ಬಂದಿದೆ. ಕೀರ್ತಿ ಕೃಷ್ಣಪ್ಪ ಈ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರವನ್ನು ಈಗ ಒಟಿಟಿಯಲ್ಲಿ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 11:34 am, ಶುಕ್ರ, 17 ಅಕ್ಟೋಬರ್ 25