
ಆನೇಕಲ್, ಮಾರ್ಚ್ 27: ಭಾವನೇ ಬಾಮೈದನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತ ರಂಜಿತ್ ತಾಯಿ ಹೇಳಿಕೆ ನೀಡಿದ್ದು, ಈ ಘಟನೆ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ತಮ್ಮ ಮಗನನ್ನು ಅಳಿಯ ಶ್ರೀನಿವಾಸ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ತಮ್ಮ ಮಗ ಮತ್ತು ಶ್ರೀನಿವಾಸ್‌ನ ತಂಗಿ ಕೋಮಲ್ ಇಬ್ಬರು ಓಡಿಹೋಗಿ ಹೈದರಾಬಾದ್‌ನಲ್ಲಿ ಒಂದು ತಿಂಗಳು ಇದ್ದು, ನಂತರ ವಾಪಸ್ ಬಂದಿದ್ದರು. ರಾತ್ರಿ ಕೊಲೆ ನಡೆದಿದ್ದು, ನವೀನ್ ಮತ್ತು ಶ್ರೀನಿವಾಸ್ ಸೇರಿದಂತೆ ನಾಲ್ವರು ಬಂದು ಮಗನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ತಾಯಿ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.