ಊಟದ ವಿಚಾರಕ್ಕೆ ಗಲಾಟೆ: ಯುವಕನ ಬಡಿದು ಕೊಂದ ಕಿರಾತಕರು; ಆರೋಪಿಗಳು ಅರೆಸ್ಟ್​​

ಊಟದ ವಿಚಾರಕ್ಕೆ ಗಲಾಟೆ: ಯುವಕನ ಬಡಿದು ಕೊಂದ ಕಿರಾತಕರು; ಆರೋಪಿಗಳು ಅರೆಸ್ಟ್​​


ಊಟದ ವಿಚಾರಕ್ಕೆ ಗಲಾಟೆ: ಯುವಕನ ಬಡಿದು ಕೊಂದ ಕಿರಾತಕರು; ಆರೋಪಿಗಳ ಬಂಧನ

ಆನೇಕಲ್, ಮಾರ್ಚ್ 15: ಬೆಂಗಳೂರು ಬನ್ನೇರುಘಟ್ಟ ಮಾರ್ಚ್ 8 ರಂದು ನಡೆದಿದ್ದ ಯುವಕನೊಬ್ಬನ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೆಂಪನಾಯಕನಹಳ್ಳಿ ನಿವಾಸಿ ತಿಲಕ್(23) ಅಲಿಯಾಸ್ ಗುಡ್ಡೆ ಎಂಬಾತನ ತಲೆ ಮೇಲೆ ಇಟ್ಟಿಗೆ ಹಾಕಿ, ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಕೆಂಪನಾಯಕನಹಳ್ಳಿ ವಾಸಿ ಅಜಯ್ ಕುಮಾರ್(25), ರವಿಚಂದ್ರ ನಾಯಕ್ ಅಲಿಯಾಸ್ ಪಾಯಿಸನ್ ರವಿ (24), ಸಂಜಯ್ ಅಲಿಯಾಸ್ ನಾಯಿಬಾಬಾ(26) ಮತ್ತು ಮೊಹಮ್ಮದ್ ರಜಾಕ್(24) ಎಂಬವರನ್ನು ಬಂಧಿಸಿದ್ದಾರೆ. ಮತ್ತಿನಲ್ಲಿ ಗಲಾಟೆ ಮಾಡಿ ಆರೋಪಿಗಳು ತಿಲಕನ ಕೊಂಡಿರೋದಾಗಿ ಆರೋಪಿಗಳು.

ಬನ್ನೇರುಘಟ್ಟ ಗೊಲ್ಲಹಳ್ಳಿ ಗುಟ್ಟೆ ಮೈದಾನದಲ್ಲಿ ಕೊಲೆ ನಡೆದಿದ್ದು, ಪ್ರಮುಖ ಆರೋಪಿ ಅಜಯ್ 30ಕ್ಕೂ ಅಧಿಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಾರೆ. ಖಾಕಿಯಿಂದ ತಪ್ಪಿಸಿಕೊಳ್ಳಲು ಹೆಚ್ಚಾಗಿ ಕಾಡಿನಲ್ಲಿ ವಾಸಿಸುತ್ತಿದ್ದ ಕೃತ್ಯ ನಡೆದ ದಿನ ಊಟ ತರಲು ಈತ ತಿಲಕ್ ಗೆ ಹೇಳಿದ್ದ. ಆದರೆ ತಿಲಕ್ ಪ್ರೇಯಸಿ ಭೇಟಿಗಾಗಿ ತೆರಳಿದ್ದು, ಆಕ್ರೋಶಗೊಂಡ ಅಜಯ್ ತಿಲಕ್ ಬರದಂತೆ ಆವಾಜ್ ಹಾಕಿದ್ದಾನೆ. ತನಗಿಂತ ಹುಡುಗಿ ಹೆಚ್ಚಾ ಎಂದು ಪ್ರಶ್ನಿಸಿದ ಹಿನ್ನೆಲೆ ವಾಗ್ವಾದ ನಡೆದಿದೆ. ಹೀಗಾಗಿ ತನ್ನ ವಿರುದ್ಧವೇ ಮಾತನಾಡುತ್ತೀಯ ಎಂದು ರೊಚ್ಚಿಗೆದ್ದು ತಿಲಕ್ ಮೇಲೆ ದಾಳಿ ನಡೆಸಿ ತನಿಖೆ ವೇಳೆ ಬಯಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *