ಆನೇಕಲ್, ಡಿಸೆಂಬರ್ 07: ಅಪರಾಧಿಗಳಿಗೆ ದೂರು ನೀಡಲು ಬಂದ ಸಂತ್ರಸ್ತರ ವಿರುದ್ಧವೇ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ ಆನೇಕಲ್ಪೊಲೀಸರ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ಸಂತ್ರಸ್ತೆ ದೂರನ್ನು ದಿಕ್ಕು ತಪ್ಪಿಸಲು ಆನೇಕಲ್ ಪೊಲೀಸ್ ಇನ್ಸ್ ಪೆಕ್ಟರ್ ತಿಪ್ಪೇಸ್ವಾಮಿ ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಣದಾಸೆಗೆ ಆರೋಪಿ ಜೊತೆ ಶಾಮೀಲಾಗಿದ್ದಾರೆ ಸ್ಥಳೀಯರು ಆರೋಪಿಸಿದ್ದರೆ, ನ್ಯಾಯ ದೊರಕಿಸಿಕೊಡಿ ಎಂದು ಸಂತ್ರಸ್ತ ಮಹಿಳೆ ಅಂಗಲಾಚಿ ಬೇಡಿದ್ದಾರೆ.
ಹೊಟ್ಟೆ ನೋವೆಂದು ಸ್ಕಾನಿಂಗ್ ಗೆ ಮಹಿಳೆ ಬಂದಿದ್ದ ವೇಳೆ ರೇಡಿಯಸ್ಟ್ ಜಯಕುಮಾರ್ ವಿರುದ್ಧ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿತ್ತು. ಕೃತ್ಯವೆಸಗಿರುವ ವಿಡಿಯೋ ಸಾಕ್ಷಿ ಕೂಡ ಇದ್ದು, ಠಾಣೆಗೆ ಬಂದ ಆರೋಪಿಯನ್ನು ಬಂಧಿಸದೆ ಪೊಲೀಸರು ಬಿಟ್ಟು ಕಳುಹಿಸಿದ್ದರು. ಬಳಿಕ ಕರವೇ ಮತ್ತು ಸಾರ್ವಜನಿಕರ ಹೋರಾಟ ನಡೆಸಿದ ಪರಿಣಾಮ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಈಗ ಆರೋಪಿ ಪತ್ನಿ ಆರೋಪಿ ಆರೋಪಿ ಸಂತ್ರಸ್ತೆಯ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಬಂದಿದ್ದ ಮಹಿಳೆಯ ಖಾಸಗಿ ಅಂಗಕ್ಕೆ ಕೈಹಾಕಿದ ರೆಡಿಯಾಲಜಿಸ್ಟ್
ಘಟನೆ ನಡೆದು 20 ದಿನಗಳ ನಂತರ ಸುಳ್ಳು ದೂರು ನೀಡಿದ ಆರೋಪವನ್ನು ಆರೋಪಿ ಪತ್ನಿ ಮಾಡಿದ್ದು, ಸಂತ್ರಸ್ತ ಹನಿಟ್ರ್ಯಾಪ್ ಮತ್ತು ಹಣ ವಸೂಲಿ ಮಾಡಲು ಬಂದಿದ್ದಾರೆಂದು ದೂರಲಾಗಿದೆ. ಯಾವುದೇ ಸಂತ್ರಸ್ತರ ವಿರುದ್ಧ ಸಾಕ್ಷ್ಯ ಇಲ್ಲದಿದ್ದರೂ ಪ್ರಕರಣ ದಾಖಲಿಸಿದ್ದಾರೆ. ಬಲಾಢ್ಯರು ಮತ್ತು ಹಣದಾಸೆಗೆ ಆರೋಪಿಗಳ ಜೊತೆಗೆ ಶಾಮೀಲಾಗಿದ್ದಾರೆ. ಹೀಗಾಗಿ ಮೇಲಧಿಕಾರಿಗಳು ಅಪರಾಧ ಪ್ರಕರಣದ ತನಿಖೆ ನಡೆಸಬೇಕು ಮತ್ತು ತನಿಖಾಧಿಕಾರಿಗಾಗಿ ತಿಪ್ಪೆಸ್ವಾಮಿಯನ್ನು ಬದಲಾಯಿಸಲು ಒತ್ತಾಯಿಸಲಾಗಿದೆ. ಜೊತೆಗೆ ಸಂತ್ರಸ್ತರ ವಿರುದ್ಧ ದಾಖಲಾದ ಎಫ್‌ಐಆರ್ ರದ್ದು ಮಾಡಬೇಕೆಂಬ ಆಗ್ರಹವಿದೆ.
ಹೊಟ್ಟೆ ನೋವಿನ ಕಾರಣ ಪತಿಯೊಂದಿಗೆ ಮಹಿಳೆ ಸ್ಕ್ಯಾನಿಂಗ್ ಸೆಂಟರ್‌ಗೆ ಬಂದಿದ್ದರು. ಈ ವೇಳೆ ಸ್ಕ್ಯಾನಿಂಗ್ ನೆಪದಲ್ಲಿ ರೇಡಿಯಾಲಜಿಸ್ಟ್ ಜಯಕುಮಾರ್ ಆಕೆಯ ಖಾಸಗಿ ಅಂಗಗಳಿಗೆ ಕೈ ಹಾಕಿದ್ದಾರೆ. ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಬೆದರಿಕೆ ಹಾಕಿದ್ದು, ಈ ವಿಚಾರ ಹೊರಗೆ ಬಾಯ್ಬಿಡದಂತೆ ಧಮ್ಕಿ ಹಾಕಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಾಯಿಸೋದಾಗಿ ಬೆದರಿಕೆ ಹಾಕಿದ್ದ ಎಂಬ ಆರೋಪ ಆರಂಭದಲ್ಲಿ ಕೇಳಿಬಂದಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.