ಅನಿಲ್ ಅಂಬಾನಿಗೆ ಇನ್ನಷ್ಟು ಸಂಕಷ್ಟ; ನಿನ್ನೆ 3,716 ಕೋಟಿ ರೂ ಆಸ್ತಿ ಮುಟ್ಟುಗೋಲು; ಈಗ ಸಿಬಿಐನಿಂದ ಹೊಸ ಕೇಸ್ ದಾಖಲು

ಅನಿಲ್ ಅಂಬಾನಿಗೆ ಇನ್ನಷ್ಟು ಸಂಕಷ್ಟ; ನಿನ್ನೆ 3,716 ಕೋಟಿ ರೂ ಆಸ್ತಿ ಮುಟ್ಟುಗೋಲು; ಈಗ ಸಿಬಿಐನಿಂದ ಹೊಸ ಕೇಸ್ ದಾಖಲು


ನವದೆಹಲಿ, ಫೆಬ್ರುವರಿ 26: ರಿಲಯನ್ಸ್ ಗ್ರೂಪ್ ಮುಖ್ಯಸ್ಥ ಅನಿಲ್ ಅಂಬಾನಿ (ಅನಿಲ್ ಅಂಬಾನಿ) ಅವರ ಸಂಕಷ್ಟ ನಿಲ್ಲುತ್ತಿಲ್ಲ. ಬುಧವಾರ ಅನಿಲ್ ಅಂಬಾನಿ ಅವರ ಮುಂಬೈ ನಿವಾಸವನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿರುವ ಘಟನೆ ಬೆನ್ನಲ್ಲೇ ಇವತ್ತು ಆತನ ವಿರುದ್ಧ ಹೊಸ ಪ್ರಕರಣ ದಾಖಲಾಗಿದೆ. 2013 ರಿಂದ 2017 ರ ಅವಧಿಯಲ್ಲಿ ಬ್ಯಾಂಕ್ ಆಫ್ ಬರೋಡಾಗೆ 2,223.17 ಕೋಟಿ ರೂ ವಂಚನೆ ಆರೋಪದ ಮೇಲೆ ಅನಿಲ್ ಅಂಬಾನಿ ಮತ್ತು ಆರ್‌ಕಾಂ ಕಂಪನಿ ವಿರುದ್ಧ ಹೊಸ ಪ್ರಕರಣ ದಾಖಲಾಗಿದೆ.

ಆದರೆ, ಬ್ಯಾಂಕ್ ಆಫ್ ಬರೋಡಾಗೆ ಆರ್‌ಕಾಂ ವತಿಯಿಂದ ಏನು ವಂಚನೆ ಆಗಿದೆ ಎಂಬ ಮಾಹಿತಿ ಸದ್ಯಕ್ಕೆ ಗೊತ್ತಾಗಿಲ್ಲ. ಬ್ಯಾಂಕ್‌ಗೆ ತರಲಾಗಿದೆ ಎಂದು ಅಂಬಾನಿ, ಆರ್‌ಆರ್‌ಎ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ವಿರುದ್ಧ ಬ್ಯಾಂಕ್‌ನಿಂದಲೇ ಎಫ್‌ಐಆರ್‌ ದೂರು ದಾಖಲಿಸಿದ್ದಾರೆ. ವಂಚನೆ, ಅಪರಾಧ ಸಂಚು ಇತ್ಯಾದಿಗಳಿಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ಬರುತ್ತದೆ. ಇದರ ಆಧಾರದ ಮೇಲೆ ದಾಖಲಾಗಿದೆ.

ಇದನ್ನೂ ಓದಿ: ಕಾಂಟೆಂಟ್ ಕ್ರಿಯೇಟರ್ಸ್‌ಗೆ ಸರಿಯಾಗಿ ಆದಾಯ ಹಂಚಿಕೆ ಮಾಡಿ: ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಸಚಿವ ವೈಷ್ಣವ್ ಸೂಚನೆ

ಅನಿಲ್ ಅಂಬಾನಿಯ ಮುಂಬೈ ನಿವಾಸ ಮುಟ್ಟುಗೋಲು

ರಿಲಯನ್ಸ್ ಕಮ್ಯೂನಿಕೇಶನ್ (ಆರ್ಕಾಂ) ವಿರುದ್ಧದ ವಂಚನೆ ಪ್ರಕರಣ ಸಂಬಂಧ ಅನಿಲ್ ಅಂಬಾನಿ ಅವರ ಪಾಲಿ ಹಿಲ್ ಮನೆ ಜಾರಿ ನಿರ್ದೇಶನಾಲಯ ಫೆ. 25, ಬುಧವಾರದಂದು ಮುಟ್ಟುಗೋಲು ಹಾಕಿಕೊಂಡಿದೆ. ಮುಂಬೈನ ಪಾಲಿ ಹಿಲ್‌ನಲ್ಲಿರುವ ಅಂಬಾನಿಯ ಈ ಮನೆಯ ಮೌಲ್ಯ 3,716.83 ಕೋಟಿ ರೂ.

ಕೆಲವು ದಿನಗಳ ಹಿಂದೆ ಮುಂಬೈನಲ್ಲೇ ಇರುವ ಅಂಬಾನಿಯ 473.17 ಕೋಟಿ ರೂಪಾಯಿ ಮೌಲ್ಯದ ಇನ್ನೊಂದು ಪ್ರಾಪರ್ಟಿಯನ್ನೂ ಇಡಿ ಅಟ್ಯಾಚ್ ಮಾಡಿತ್ತು. ಇದರೊಂದಿಗೆ ಮುಟ್ಟುಗೋಲು ಹಾಕಿಕೊಳ್ಳಲಾಗದ ರಿಲಯನ್ಸ್ ಗ್ರೂಪ್ ಹಾಗೂ ಅನಿಲ್ ಅಂಬಾನಿಯವರ ಒಟ್ಟು ಆಸ್ತಿ ಮೌಲ್ಯ 15,700 ಕೋಟಿ ರೂ.

ಇದನ್ನೂ ಓದಿ: ಕಾಶ್ಮೀರದ ಬಜೆಟ್ ನಿಮ್ಮ ಐಎಂಎಫ್ ಸಾಲಕ್ಕಿಂತ ಎರಡು ಪಟ್ಟು ದೊಡ್ಡದು: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತರಾಟೆಗೆ

ಅನಿಲ್ ಅಂಬಾನಿ ಅವರ ರಿಲಯನ್ಸ್ ಗ್ರೂಪ್ನ ಆರ್ಕಾಂ ಮತ್ತು ಇತರ ಕಂಪನಿಗಳು ಹಲವು ವರ್ಷಗಳ ಬ್ಯಾಂಕುಗಳಿಂದ ಸಾಕಷ್ಟು ಸಾಲಗಳನ್ನು ತೆಗೆದುಕೊಂಡಿವೆ. ಇದರಲ್ಲಿ 40,185 ಕೋಟಿ ರೂ ಸಾಲ ಬಾಕಿ ಉಳಿದಿದೆ. ಸಾಲ ಪಡೆದು ಅಕ್ರಮ ಹಣ ವರ್ಗಾವಣೆ ಮಾಡಿರುವುದು ಇತ್ಯಾದಿ ಹಲವು ಆರೋಪಗಳು ಅಂಬಾನಿ ಹಾಗೂ ಅವರ ಕಂಪನಿಗಳ ಮೇಲಿದೆ. ರಿಲಯನ್ಸ್ ಕಮ್ಯೂನಿಕೇಶನ್ ಸಂಸ್ಥೆ ಸಾಲ ತೀರಿಸಲು ಕಾಲಾವಕಾಶ ಕೋರಿದೆ. ಈ ಮಧ್ಯೆ ಪ್ರಕರಣಗಳ ಮೇಲಿನ ಪ್ರಕರಣಗಳು ಅಂಬಾನಿಯನ್ನು ಸುತ್ತುವರಿಯುತ್ತಿವೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *