ಅಂಜನಾದ್ರಿಯಲ್ಲಿ ಹನುಮ ಮಾಲೆ ವಿಸರ್ಜನೆಗೂ ಕಾರ್ಖಾನೆಗಳ ಸಹಯೋಗ? ಭುಗಿಲೆದ್ದ ಆಕ್ರೋಶ

ಅಂಜನಾದ್ರಿಯಲ್ಲಿ ಹನುಮ ಮಾಲೆ ವಿಸರ್ಜನೆಗೂ ಕಾರ್ಖಾನೆಗಳ ಸಹಯೋಗ? ಭುಗಿಲೆದ್ದ ಆಕ್ರೋಶ


ಕೊಪ್ಪಳ, ಡಿಸೆಂಬರ್ 01: ಅಂಜನಾದ್ರಿ (ಅಂಜನಾದ್ರಿ) ಹನುಮ ಹುಟ್ಟಿದ ನಾಡು ಎಂದು ಹೆಸರಾದ ಸ್ಥಳ. ಅಲ್ಲಿ ಇದೇ ಡಿಸೆಂಬರ್ 2 ಮತ್ತು 3 ರಂದು ಹನುಮ ಮಾಲೆ ವಿಸರ್ಜನೆ (ಹನುಮಾನ್ ಮಾಲಾ ವಿಸರ್ಜನ) ಕಾರ್ಯಕ್ರಮವಿದೆ. ಎತ್ತು ಹನುಮ ಹುಟ್ಟಿದ ಸ್ಥಳ ಮಧುವಣಗಿತ್ತಿಯಂತೆ ಶ್ರಂಗಾರಕ್ಕೆ ಹೋಗಿದೆ. ಹನುಮ ಹುಟ್ಟಿದ ಸ್ಥಳಕ್ಕೆ ಸಾವಿರಾರು ಭಕ್ತರು ಹರಿದು ಬರ್ತಾರೆ. ಪ್ರತಿ ಹನುಮ ಮಾಲೆ ವಿಸರ್ಜನೆಗೆ ಸಕಲ ಸಿದ್ದತೆಯನ್ನ ಮಾಡಿಕೊಂಡಿದೆ. ಮತ್ತೊಂದು ಕಡೆ ಸಂಸದ ರಾಜಶೇಖರ ಹಿಟ್ನಾಳ, ಅಧ್ಯಕ್ಷ ಅಥ್ಲೆಟಿಕ್ ಅಸೋಶಿಯನ್ ಸಂಸ್ಥೆ ಕೂಡ ಕೈಜೋಡಿಸಿದೆ. ಆದರೆ ಅದು ಸಹಾಯ ಮಾಡಿದ್ದು, ಕಾರ್ಖಾನೆಗಳಿಂದ. ಇದೀಗ ಅದು ವಿವಾದಕ್ಕೆ ಕಾರಣವಾಗಿದೆ. ಏಕೆಂದರೆ ಅಲ್ಲಿ ಕಳೆದ 39 ದಿನಗಳಿಂದ ಕಾರ್ಖಾನೆಗಳ ವಿರುದ್ಧ ಹೋರಾಟ ನಡೆಯುತ್ತಿದೆ.

ಅಂಜನಾದ್ರಿ ಹನುಮ ಹುಟ್ಟಿದ ಸ್ಥಳ ಎಂದು ಹೆಸರಾದ ಪ್ರದೇಶ. ಇದೇ ಡಿಸೆಂಬರ್ 3 ರಂದು ಹನುಮ ಮಾಲೆ ವಿಸರ್ಜನೆ ಕಾರ್ಯಕ್ರಮ. ಎಳಸು ಹನುಮ ಮಾಲೆ ಹಿನ್ನಲೆಯಲ್ಲಿ ಅಂಜನಾದ್ರಿಯಲ್ಲಿನ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಇಂದಿನಿಂದಲೇ ಅಂಜನಾದ್ರಿಗೆ ಹನುಮ ಭಕ್ತರು ಹರಿದು ಬರ್ತಾರೆ. ಅಂಜನಾದ್ರಿಗೆ ಸುಮಾರು ಒಂದು ಲಕ್ಷ ಭಕ್ತರು ಹರಿದು ಬರುವ ಸಾಧ್ಯತೆ ಇದೆ. ಅಲ್ಲಿಗೆ ಬರುವ ಭಕ್ತರಿಗೆ ವಸತಿ, ಶೌಚಾಲಯ, ಎಲ್ಲವನ್ನು ಸಿದ್ದತೆ ಮಾಡಿಕೊಂಡಿದೆ. ಆದ್ಯವಲ್ಲದೆ ಜಿಲ್ಲಾ ಅಥ್ಲೆಟಿಕ್ ಅಸೋಶಿಯನ್ ಕೂಡ ಕೈ ಜೋಡಿಸಿದೆ.

ಇದನ್ನೂ ಓದಿ: ಕೊಪ್ಪಳ: ದೀಪಾವಳಿ ಹಬ್ಬದ ಪ್ರಯುಕ್ತ ಅಂಜನಾದ್ರಿಯಲ್ಲಿ ಹನುಮನಿಗೆ ವಿಶೇಷ ಪೂಜೆ; ವಿಡಿಯೋ ನೋಡಿ

ಅಂಜನಾದ್ರಿಗೆ ಪಾದಯಾತ್ರೆ ಮೂಲಕ ಬರುವ ಭಕ್ತರಿಗೆ ಸುಮಾರು ಎಂಟು ಕಡೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಆದರೆ ಅಥ್ಲೆಟಿಕ್ ಅಸೋಶಿಯನ್ ಕಾರ್ಖಾನೆಗಳು ಪಡದುಕೊಂಡಿದ್ದು ಇದೀಗ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಥ್ಲೆಟಿಕ್ ಅಸೋಶಿಯೇಶನ್ ಕಿರ್ಲೋಸ್ಕರ್, ಮುಕುಂದ ಸುಮಿ, ಅಲ್ಟ್ರಾಟೆಕ್. ಹೊಸ ಪೇಟೆ ಸ್ಟಿಲ್ ಸೇರಿದೆ. ಆದರೆ ಕೊಪ್ಪಳದಲ್ಲಿ ಕಾರ್ಖಾನೆಗಳನ್ನು ವಿರೋಧಿಸಿ ಕೊಪ್ಪಳದಲ್ಲಿ ಕಳೆದ 39 ದಿನಗಳಿಂದ ಹೋರಾಟ ನಡೆಯುತ್ತಿದೆ. ಜಿಲ್ಲಾ ಬಚಾವೋ ಆಂದೋಲನ ಸಮಿತಿ ಕೊಪ್ಪಳ ನಗರಸಭೆ ಮುಂಭಾಗ ಹೋರಾಟ ನಡೆಯುತ್ತಿದೆ. ಬಲ್ಡೋಟಾ ಸೇರಿ ಕಿರ್ಲೋಸ್ಕರ್ ಹಾಗೂ ಮುಕುಂದ ಸುಮಿ ವಿಸ್ತರಣೆಗೆ ವಿರೋಧವಿದೆ. ಹೀಗಿದ್ದರೂ ಸಂಸದರು ಧಾರ್ಮಿಕ ಕಾರ್ಯಕ್ರಮಕ್ಕೆ ಕಾರ್ಖಾನೆಗಳು ಎಸ್‌ಎಸ್‌ಆರ್ ಅನುದಾನವನ್ನು ಬಳಸಿಕೊಳ್ಳುತ್ತಿರುವುದು ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಖುದ್ದು ಸಂಸದರೇ ಕಾರ್ಖಾನೆಗಳ ಊಟ ಎಂದು ಒಪ್ಪಿಕೊಂಡರು, ಆದರೆ ನಾವು ಬಲ್ಡೋಟಾ ಕಾರ್ಖಾನೆಯ ಹಣವನ್ನು ಸಂಗ್ರಹಿಸಲಿಲ್ಲ. ಕಾರ್ಖಾನೆಗಳ ಸಿಎಸ್ ಆರ್ ಅನುದಾನ ಇರೋದೆ ಸಾಮಾಜಿಕ ಕಾರ್ಯಕ್ರಮ ಅನ್ನೋ ಮೂಲಕ ಕಾರ್ಖಾನೆಗಳ ಪರ ಸಂಸದರು ಬ್ಯಾಟ್ ಬೀಸಿದ್ದಾರೆ.

ಇನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಹನುಮ ಹುಟ್ಟಿದ ಸ್ದಳ ಎಂದು ಹೆಸರಾಗಿದೆ. ಹನುಮ ಹುಟ್ಟಿರೋದಕ್ಕೆ ಕೆಲ ಕುರುಹಗಳು ಲಭ್ಯವಿವೆ. ಹನುಮ ಮಾಲೆ ಆರಂಭಿಸಿದ್ದು ಕೆಲ ಭಕ್ತರಿಂದ. ಈಗ ಅಲ್ಲಿ ಭಕ್ತರನ್ನು ತಲುಪಿದೆ. ಕೇವಲ 13 ಜನರಿಂದ ಆರಂಭವಾದ ಹುನಮಮಾಲೆ ವ್ರತವನ್ನ ಇಂದು ಲಕ್ಷ ಲಕ್ಷ ಮಂದಿ ಆಚರಣೆ ಮಾಡುತ್ತಾರೆ. ಕಟ್ಟು ನಿಟ್ಟಿನ ವ್ರತ ಮಾಡೋದರ ಮೂಲಕ ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಬಂದು ಮಾಲೆಯನ್ನ ವಿಸರ್ಜನೆ ಮಾಡುತ್ತಾರೆ.

2000 ಪೊಲೀಸರ ನಿಯೋಜನೆ

ಕೆಲವು 45 ದಿನ, ಒಂದು ತಿಂಗಳು, ಹಲವಾರು 15 ದಿನ, 9 ದಿನ, 3 ದಿನ ಮಾಲೆ ಧರಿಸುವ ಪ್ರತೀತಿ ಇದೆ. ರಾಜ್ಯದ ಮೂಲೆ ಮೂಲೆಯಲ್ಲಿ ಹನುಮ ಭಕ್ತರು ವ್ರತವನ್ನು ಆಚರಣೆ ಮಾಡುತ್ತಾರೆ. ಡಿಸೆಂಬರ್ 3 ರಂದು ಹನುಮಮಾಲಾಧಾರಿಗಳು, ಸಾಗರೋಪಾದಿಯಲ್ಲಿ ಆಗಮಿಸುವ ಕಾರಣಕ್ಕೆ ಭೇಟಿ ನೀಡಿ ಸಕಲ ಸಿದ್ದತೆಯನ್ನ ಮಾಡಿಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಸಿದ್ದತೆ ಮಾಡಿಕೊಂಡಿದ್ದಾರೆ. ಕೊಪ್ಪಳದಿಂದ ಅಂಜನಾದ್ರಿಯವರೆಗೂ ಸುಮಾರು 2000 ಪೊಲೀಸರ ನಿಯೋಜನೆಗಾಗಿ ಪೊಲೀಸರು ತಯಾರಿಸಿದ್ದಾರೆ.

ಇದನ್ನೂ ಓದಿ: 101 ಕೆಜಿ ಜೋಳದ ಮೂಟೆ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಯುವಕ: ವಿಡಿಯೋ ನೋಡಿ

ಒಟ್ಟಾರೆ ಹನುಮ ವಿಸರ್ಜನೆ ಕಾರ್ಯಕ್ರಮ ಇದೀಗ ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಕಾರ್ಖಾನೆಗಳನ್ನು ಸೇರಿಸಿದ್ದು ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಸಂಸದ ರಾಜಶೇಖರ ಹಿಟ್ನಾಳ ನಡೆ ಇದೀಗ ಪ್ರಶ್ನೆ ಮಾಡಿದ್ದಾರೆ. ಭಕ್ತರ ಅನಕೂಲಕ್ಕೆ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ​​ಮಾಡುತ್ತಿರುವುದು ಒಳ್ಳೆಯದೇ ಆದರೆ ಅದಕ್ಕೆ ಕಾರ್ಖಾನೆಗಳ ಹಣ ಏಕೆ ಅನ್ನೋದು ಜನರ ಪ್ರಶ್ನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *