ಇಂದು ಕೂಡ ಸಮಾಜ ಮುಜುಗರಪಡುವ ಟಾಪಿಕ್‌ ಬಗ್ಗೆ ದನಿಯೆತ್ತಿದ Annayya Serial; ವೀಕ್ಷಕರಿಂದ ಮೆಚ್ಚುಗೆ | Annayya Kannada Serial Menstrual Cycle Period Sanitary Pads Free For Women

ಇಂದು ಕೂಡ ಸಮಾಜ ಮುಜುಗರಪಡುವ ಟಾಪಿಕ್‌ ಬಗ್ಗೆ ದನಿಯೆತ್ತಿದ Annayya Serial; ವೀಕ್ಷಕರಿಂದ ಮೆಚ್ಚುಗೆ | Annayya Kannada Serial Menstrual Cycle Period Sanitary Pads Free For Women


15

 ಹೆಣ್ಣು ಮಕ್ಕಳ ತಿಂಗಳ ನೋವು

Image Credit : zee5

ಹೆಣ್ಣು ಮಕ್ಕಳ ತಿಂಗಳ ನೋವು

ಮಾರಿಗುಡಿ ಶಿವುಗೆ ತಂಗಿಯರು ಅಂದರೆ ತುಂಬ ಇಷ್ಟ, ಹೆಣ್ಣು ಮಕ್ಕಳ ಮೇಲೆ ಅವನಿಗೆ ಅಪಾರ ಗೌರವ ಇದೆ. ಈಗ ಈ ಸೀರಿಯಲ್‌ ತಂಡವು ಹೆಣ್ಣು ಮಕ್ಕಳ ಪರವಾಗಿ ನಿಂತು, ಸಮಾಜದಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ. ಹೆಣ್ಣು ಮಕ್ಕಳ ತಿಂಗಳ ನೋವಿನ ಬಗ್ಗೆ ಬೆಳಕು ಚೆಲ್ಲಲು ಸೀರಿಯಲ್‌ನಲ್ಲಿ ಈ ಬಗ್ಗೆ ಹೇಳಲಾಗಿದೆ.

25

'ಮಡಿಲು' ಎಂಬ ಹೊಸ ಯೋಜನೆ

Image Credit : zee5

‘ಮಡಿಲು’ ಎಂಬ ಹೊಸ ಯೋಜನೆ

ತಿಂಗಳಿಗೊಮ್ಮೆ ಹೆಣ್ಣುಮಕ್ಕಳ ದೇಹದಲ್ಲಾಗುವ ಸಹಜ ಪ್ರಕ್ರಿಯೆ ( ಋತುಸ್ರಾವ ) ಸಮಾಜದಲ್ಲಿ ಇನ್ನೂ ಮುಜುಗರ, ಮಡಿವಂತಿಕೆ, ಮೂಢನಂಬಿಕೆ ಇದೆ ಮುಕ್ತವಾಗಿ ಮಾತನಾಡಿದೆ. ಮಾರಿಗುಡಿ ಎನ್ನುವ ಪುಟ್ಟ ಹಳ್ಳಿಯಲ್ಲಿ ಕಥಾನಾಯಕ ಶಿವು ತನ್ನ ಅಂಗಡಿಯಲ್ಲಿ ಊರ ಹೆಣ್ಣುಮಕ್ಕಳಿಗೆ ಅನುಕೂಲವಾಗುವಂತೆ ‘ಮಡಿಲು’ ಎಂಬ ಹೊಸ ಯೋಜನೆ ಶುರುಮಾಡಿದ್ದಾನೆ.

35

ಋತುಸ್ರಾವದ ಸಂದರ್ಭದಲ್ಲಿ ಏನಾಗುವುದು?

Image Credit : zee5

ಋತುಸ್ರಾವದ ಸಂದರ್ಭದಲ್ಲಿ ಏನಾಗುವುದು?

ಋತುಸ್ರಾವದ ಸಂದರ್ಭದಲ್ಲಿ ಹೆಣ್ಣುಮಕ್ಕಳು ಶುಚಿತ್ವ ಕಾಪಾಡಿಕೊಳ್ಳಬೇಕು, ಮನೆಯಲ್ಲಿರುವ ಗಂಡುಮಕ್ಕಳು ಮುಜುಗರ ಬಿಟ್ಟು ಅವರ ಜತೆ ನಿಲ್ಲಬೇಕು, ಆ ಸಮಯದಲ್ಲಿ ಹೆಣ್ಣಿಗೆ ದೈಹಿಕವಾಗಿ ಒಂದಿಷ್ಟು ನೋವು, ಮಾನಸಿಕವಾಗಿ ಕೂಡ ಏರಿಳಿತ ಇರುವುದು. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಶಿವು ಹೇಳುತ್ತಾನೆ.

45

ಜಾಗೃತಿ ಮೂಢಿಸಬೇಕು

Image Credit : zee kannada

ಜಾಗೃತಿ ಮೂಢಿಸಬೇಕು

ಈ ಸೀರಿಯಲ್‌ ನಾಯಕಿ ಡಾಕ್ಟರ್ ಪಾರು ಜತೆ ಸೇರಿ ಶಿವು ಕೂಡ ದೊಡ್ಡ ಸಂದೇಶ ನೀಡಿದ್ದಾನೆ. ತನ್ನ ಅಂಗಡಿಯಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ನೀಡುವ ವ್ಯವಸ್ಥೆ ಮಾಡಿದ್ದಾನೆ. ಈ ಬಗ್ಗೆ ಎಲ್ಲರೂ ಊರುಗಳಲ್ಲಿ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದ್ದಾನೆ. ಈ ಕುರಿತ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

55

ಟಾಪ್‌ 5 ಸೀರಿಯಲ್

Image Credit : zee5

ಟಾಪ್‌ 5 ಸೀರಿಯಲ್

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಪಾತ್ರದಲ್ಲಿ ವಿಕಾಶ್‌ ಉತ್ತಯ್ಯ, ಪಾರು ಪಾತ್ರದಲ್ಲಿ ನಿಶಾ ರವಿಕೃಷ್ಣನ್‌, ನಾಗೇಂದ್ರ ಶಾ ನಟಿಸುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಟಾಪ್‌ 5 ಧಾರಾವಾಹಿಗಳಲ್ಲಿ ಈ ಸೀರಿಯಲ್‌ ಕೂಡ ಒಂದು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *