Actor Jr NTR Add: ಖ್ಯಾತ ನಟ ಜ್ಯೂನಿಯರ್ ಎನ್‌ಟಿಆರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಜಾಹೀರಾತಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಆಶ್ಚರ್ಯ ಎಂಬಂತೆ ಕನ್ನಡ ನಟಿ ನಿಶಾ ರವಿಕೃಷ್ಣನ್ ಇದ್ದಾರೆ.

ಕನ್ನಡ ಕಿರುತೆರೆ ನಟಿ ನಿಶಾ ರವಿಕೃಷ್ಣನ್ ಅವರು ಇದೀಗ ಹೊಸದೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ‘ಗಟ್ಟಿಮೇಳ’ ಧಾರಾವಾಹಿಯ ಅಮೂಲ್ಯ ಪಾತ್ರದ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನಿಶಾ ರವಿಕೃಷ್ಣನ್ ಅವರು ರೌಡಿಬೇಬಿ ಎಂದು ಹೇಳಿದ್ದರು.

ಜೀ ಕನ್ನಡ ವಾಹಿನಿಯ ‘ಅಣ್ಣಯ್ಯ’ ಧಾರಾವಾಹಿಯಲ್ಲಿ ನಿಶಾ ರವಿಕೃಷ್ಣನ್ ಅವರು ಪಾರು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಅವರು ಜೂನಿಯರ್ ಎನ್‌ಟಿಆರ್ ಜೊತೆಗೆ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಈ ಹಿಂದೆ ಮೇಘಾ ಶೆಟ್ಟಿ ಅವರು ಮಹೇಶ್ ಬಾಬು ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈಗ ಜ್ಯೂನಿಯರ್ ತಾರಕ್ ಜೊತೆ ನಿಶಾ ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ನಿಶಾ ರವಿಕೃಷ್ಣನ್ ಕೇವಲ ನಟಿಯಷ್ಟೇ ಅಲ್ಲದೆ ಉತ್ತಮ ನೃತ್ಯಗಾರ್ತಿ, ಗಾಯಕಿ ಕೂಡ ಹೌದು. ನಿಶಾ ಅವರು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ಜಾಹೀರಾತಿನ ವಿಡಿಯೋ ವೈರಲ್ ಆಗುತ್ತಿದ್ದು, ವೀಕ್ಷಕರು "ಪಾರು ಮತ್ತು ತಾರಕ್ ಜೋಡಿ ಸೂಪರ್" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಿನಿಮಾ, ಧಾರಾವಾಹಿಗಳ ಜೊತೆಗೆ ಇಂತಹ ವಿಭಿನ್ನ ಪ್ರಯತ್ನಗಳ ಮೂಲಕ ನಿಶಾ ಸದಾ ಸುದ್ದಿಯಲ್ಲಿರುತ್ತಾರೆ.

Source link
RRR Movie ನಟ ಜ್ಯೂನಿಯರ್ ಎನ್‌ಟಿಆರ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕನ್ನಡ ಕಿರುತೆರೆ ನಟಿ ಪ್ರತ್ಯಕ್ಷ, ಯಾರದು?