Headlines

Annayya Serial ಜಿಮ್​ ಸೀನನಿಂದ ಹಲ್ಲೆ: ಮಗನ ವಿರುದ್ಧ ಅಪ್ಪನ ದೂರು- ಪೊಲೀಸರಿಂದ ಅರೆಸ್ಟ್​

Annayya Serial ಜಿಮ್​ ಸೀನನಿಂದ ಹಲ್ಲೆ: ಮಗನ ವಿರುದ್ಧ ಅಪ್ಪನ ದೂರು- ಪೊಲೀಸರಿಂದ ಅರೆಸ್ಟ್​

Annayya Serial ಜಿಮ್​ ಸೀನನಿಂದ ಹಲ್ಲೆ: ಮಗನ ವಿರುದ್ಧ ಅಪ್ಪನ ದೂರು- ಪೊಲೀಸರಿಂದ ಅರೆಸ್ಟ್​

’ಅಣ್ಣಯ್ಯ’ ಧಾರಾವಾಹಿ ಜಿಮ್ ಸೀನ ತನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ಅನ್ಯಾಯವನ್ನು ಸಹಿಸದ ಸೀನನ ತಂದೆ ಸ್ವಂತ ಮಗನ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಸೊಸೆಯನ್ನು ಮಗಳಂತೆ ಕಾಣಬೇಕು ಎಂದಿದ್ದಾನೆ ಅಪ್ಪ. ಆಗಿದ್ದೇನು ನೋಡಿ.

ಅಣ್ಣಯ್ಯ ಸೀರಿಯಲ್​ನಲ್ಲಿ ಗುಂಡಮ್ಮನ ಮೇಲೆ ಜಿಮ್​ ಸೀನ ಹಲ್ಲೆ ಮಾಡಿದ್ದಾನೆ. ಇಷ್ಟವಿಲ್ಲದ ಮದುವೆ ಜೊತೆಗೆ ಪ್ರೇಮಿಯೊಬ್ಬಳ ಪ್ರೇಮಪಾಶದಲ್ಲಿ ಸಿಲುಕಿರೋ ಸೀನಾ ಇದೀಗ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ.

ತನ್ನ ಸೊಸೆಗೆ ಆಗಿರುವ ಅನ್ಯಾಯವನ್ನು ನೋಡಲಾಗದೇ ಖುದ್ದು ಅಪ್ಪ ಮಾದಪ್ಪನೇ ಈಗ ಮಗನನ್ನು ಅರೆಸ್ಟ್​ ಮಾಡಿಸಿದ್ದಾನೆ. ಮಗನ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದಾನೆ.

ಪೊಲೀಸರು ಬಂದು ಜಿಮ್​ ಸೀನನನ್ನು ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ. ಸ್ವಂತ ಮಗ ಆದರೆ ಏನಾಯ್ತು? ಹೆಣ್ಣನ್ನು ಗೌರವಿಸಬೇಕು. ಹೆಣ್ಣು ಹೆತ್ತು ಗಂಡನ ಮನೆಗೆ ಕಳುಹಿಸಿರುವ ಪೋಷಕರಿಗೆ ನಾವು ಕಾವಲಾಗಿರಬೇಕು ಎಂದಿದ್ದಾನೆ ಮಾದಪ್ಪ.

ಅತ್ತೆ- ಮಾವನಾದವರು ಸೊಸೆಗೆ ಅಪ್ಪ-ಅಮ್ಮ ಆಗಿರಬೇಕು. ಆಕೆ ನಮಗೆ ಮಗಳಾಗಬೇಕು ಎಂದಿರುವ ಮಾದಪ್ಪನ ಮಾತಿಗೆ ವೀಕ್ಷಕರು ಭಾರಿ ಮೆಚ್ಚುಗೆ ಸೂಸಿದ್ದಾರೆ.

ಈ ಘಟನೆಯ ಬಗ್ಗೆ ಸೀರಿಯಲ್​ನ ಮಾರಿಗುಡಿ ವಾಣಿಯಲ್ಲಿ ಪ್ರಕಟ ಆಗಿರೋ ಈ ಸುದ್ದಿಯನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿಕೊಂಡಿದೆ.

ಸೊಸೆ ಮೇಲೆ ಹಲ್ಲೆ, ಸ್ವಂತ ಮಗನ ಮೇಲೆ ದೂರು ನೀಡಿದ ತಂದೆ. ಮಾರಿಗುಡಿ ಮಾದಪ್ಪನ ಮಾದರಿ ನಿರ್ಧಾರ, ಜಿಮ್​ ಸೀನನ ಬಂಧನ ಎಂದು ಹೆಡ್ಡಿಂಗ್​ ಕೊಡಲಾಗಿದೆ.

Source link

Leave a Reply

Your email address will not be published. Required fields are marked *