Headlines

ಈ ಪುಟಾಣಿಯೇ ನಿಮ್ಮನೆಗೆ ಪ್ರತಿದಿನ ಬರ್ತಿರೋ ‘ಅಣ್ಣಯ್ಯ’ ಪಾರು! ಆ್ಯಂಕರಿಂಗ್​ ನೋಡಿ ಫ್ಯಾನ್ಸ್​ ಫಿದಾ…

ಈ ಪುಟಾಣಿಯೇ ನಿಮ್ಮನೆಗೆ ಪ್ರತಿದಿನ ಬರ್ತಿರೋ ‘ಅಣ್ಣಯ್ಯ’ ಪಾರು! ಆ್ಯಂಕರಿಂಗ್​ ನೋಡಿ ಫ್ಯಾನ್ಸ್​ ಫಿದಾ…

ಈ ಪುಟಾಣಿಯೇ ನಿಮ್ಮನೆಗೆ ಪ್ರತಿದಿನ ಬರ್ತಿರೋ ‘ಅಣ್ಣಯ್ಯ’ ಪಾರು! ಆ್ಯಂಕರಿಂಗ್​ ನೋಡಿ ಫ್ಯಾನ್ಸ್​ ಫಿದಾ…
ಜೀ ಕನ್ನಡದ ಅಣ್ಣಯ್ಯ ಧಾರಾವಾಹಿಯ ನಾಯಕಿ ಪಾರು ಪಾತ್ರಧಾರಿ ನಿಶಾ ರವಿಕೃಷ್ಣನ್ ಅವರ ಬಾಲನಟಿಯಿಂದ ನಾಯಕಿ ಪಯಣದ ವಿವರಗಳು. ಚಿಂಟು ಟಿವಿಯಲ್ಲಿ ಆ್ಯಂಕರ್ ಆಗಿದ್ದ ನಿಶಾ ಈಗ ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ಬ್ಯುಸಿ.
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಣ್ಣಯ್ಯ ಸೀರಿಯಲ್​ ವಿಶೇಷ ಕಥೆಯನ್ನು ಹೊಂದಿದೆ. ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ವಿಭಿನ್ನ ಕಥೆ ಇದಾಗಿದೆ. ಬೇರೊಬ್ಬರನ್ನು ಪ್ರೀತಿಸುವ ನಾಯಕಿಯನ್ನು ಅನಿವಾರ್ಯ ಕಾರಣಗಳಿಂದ ಮದುವೆಯಾಗುವ ನಾಯಕ ಈ ಅಣ್ಣಯ್ಯ. ಪತ್ನಿಗೆ ಆಕೆಯ ಲವರ್​ ಜೊತೆ ಸೇರಿಸುವುದು ಇವನ ಉದ್ದೇಶವಾಗಿತ್ತು. ಆದರೆ ಈಗ ಎಲ್ಲವೂ ಬದಲಾಗಿ ಪತಿ-ಪತ್ನಿ ಲವ್​ ಮಾಡಲು ಶುರು ಮಾಡಿದ್ದಾರೆ.

ಪತಿಗೆ ಆಗುತ್ತಿರುವ ಅನ್ಯಾಯವನ್ನು ಸರಿ ಮಾಡುತ್ತಲೇ ಮನೆಯವರ ವಿಶ್ವಾಸ ಗಳಿಸುತ್ತಿದ್ದಾಳೆ ನಾಯಕಿ ಪಾರು. ಪಾರುವಾಗಿ ನಟಿಸ್ತಿರೋ ನಟಿಯ ಹೆಸರು ನಿಶಾ ರವಿಕೃಷ್ಣನ್​. ಗಟ್ಟಿಮೇಳದಲ್ಲಿ ರೌಡಿ ಬೇಬಿ ಎಂದೇ ಫೇಮಸ್​ ಆಗಿದ್ದ ನಿಶಾ, ಇಲ್ಲಿ ತಮ್ಮ ಅಪ್ಪನ ವಿರುದ್ಧವೇ ತಿರುಗಿ ಬಿದ್ದಿದ್ದು, ಕುಟುಂಬದ ರಕ್ಷಣೆಯಲ್ಲಿ ತೊಡಗಿರೋ ನಾಯಕಿ.

ಆದರೆ ಕೆಲವೇ ವರ್ಷಗಳ ಹಿಂದೆ ನಿಶಾ ರವಿಕೃಷ್ಣನ್​ ಅವರು ಚಿಂಟು ಟಿವಿಯಲ್ಲಿ ಆ್ಯಂಕರಿಂಗ್​ ಮಾಡುತ್ತಿದ್ದರು. ಈ ಪುಟಾಣಿಯ ಆ್ಯಂಕರಿಂಗ್​ಗೆ ಮನಸೋತರಿದ್ದರು ಪುಟಾಣಿಗಳು ಸೇರಿದಂತೆ ಹಿರಿಯರು. ಮಕ್ಕಳಿಗಾಗಿಯೇ ಇದ್ದ ಈ ಷೋನಲ್ಲಿ ಮಕ್ಕಳಿಗಾಗಿ ಇವರು ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಇದೀಗ ಅವರೇ ಕೆಲವೇ ವರ್ಷಗಳಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ.

ಇನ್ನು ನಟಿಯ ರಿಯಲ್​ ಲೈಫ್​ ಕುರಿತು ಹೇಳುವುದಾದರೆ, ಇವರಿನ್ನೂ ಸಿಂಗಲ್​. ಈ ಕುರಿತು ನಟಿಯೇ ಹೇಳಿಕೊಂಡಿದ್ದಾರೆ. ಸೀರಿಯಲ್​ಗಳಲ್ಲಿ ಎಂಟು ಮದ್ವೆಯಾಗಿದೆ. ಅವುಗಳಲ್ಲಿ ಆಡಂಬರದ ಮದುವೆಗಳೇ ಜಾಸ್ತಿ ಇದ್ದವು. ಆದರೆ ರಿಯಲ್​ ಲೈಫ್​ನಲ್ಲಿ ಸಿಂಪಲ್​ ಆಗಿ ಮದುವೆಯಾಗುವ ಆಸೆ ಇದೆ ಎಂದಿದ್ದಾರೆ ನಿಶಾ.

ಚಟಪಟ ಎಂದು ಕನ್ನಡ ಮಾತನಾಡುವ ನಿಶಾ ರವಿಕೃಷ್ಣನ್ ಅವರು ಮೂಲತಃ ಮಲಯಾಳಿ. ಆದರೆ ಮಿಂಚುತ್ತಿರುವುದು ಕನ್ನಡ ಮತ್ತು ತೆಲಗು ಬಣ್ಣದ ಲೋಕದಲ್ಲಿ. ನಿಶಾ ಮಿಲನ್ ಎಂದು ಕೂಡ ಫೇಮಸ್​ ಆಗಿದ್ದಾರೆ ನಟಿ. 2018ರಲ್ಲಿ ಸ್ಟಾರ್ ಸುವರ್ಣದಲ್ಲಿ ತೆರೆ ಕಂಡ ‘ಸರ್ವಮಂಗಲ ಮಾಂಗಲ್ಯೆ’ ಸೀರಿಯಲ್​ ಮೂಲಕ ಕನ್ನಡಕ್ಕೆ ಪರಿಚಿತರಾದರು. 2019ರಲ್ಲಿ ಅವರಿಗೆ ‘ಗಟ್ಟಿಮೇಳ’ ಸೀರಿಯಲ್​ನ ಅಮೂಲ್ಯ ಪಾತ್ರ ಅವರಿಗೆ ಬ್ರೇಕ್​ ಕೊಟ್ಟಿತು. ರೌಡಿ ಬೇಬಿ ಎಂದೇ ಈಗಲೂ ಎಲ್ಲರೂ ಅವರನ್ನು ಕರೆಯುತ್ತಾರೆ.

ಐದು ವರ್ಷ ಈ ಸೀರಿಯಲ್​ ತೆರೆ ಕಂಡಿದೆ. ಈ ಬಳಿಕ ನಿಶಾ ತೆಲುಗು ಸೀರಿಯಲ್​ನಲ್ಲಿ ಕಾಣಿಸಿಕೊಂಡರು. ಕನ್ನಡದ ಅಣ್ಣಯ್ಯದಲ್ಲಿ ಪಾರು ಆಗಿ ಹಾಗೂ ತೆಲಗುಇನ ಅಮ್ಮಯ್ಯಿಗಾರು ಸೀರಿಯಲ್​ನಲ್ಲಿಯೂ ನಟಿಸುತ್ತಿದ್ದಾರೆ. ನಿಶಾ ಅವರು ಹುಟ್ಟಿದ್ದು ಬೆಂಗಳೂರೇ. ಆದರೆ, ಮೂಲತಃ ಕೇರಳದವರು.

‘ಅಣ್ಣಯ್ಯ’ ಧಾರಾವಾಹಿ ಶೂಟಿಂಗ್​ ಸೆಟ್​ನಲ್ಲಿ ಮಾತಿಗೆ ಸಿಕ್ಕಿರುವ ನಟಿ ಮತ್ತು ಅವರ ತಂಡ ಅಣ್ಣಯ್ಯ ಸೀರಿಯಲ್ ಕುರಿತು ಹಲವು ತಮಾಷೆಯ ಮಾತುಗಳನ್ನಾಡಿದ್ದು, ಅವುಗಳನ್ನು ಈ ವಿಡಿಯೋದಲ್ಲಿ ನೋಡಬಹುದು.

ಅಂದಹಾಗೆ ನಟಿ ವಿವಿಧ ಸೀರಿಯಲ್​ಗಳಲ್ಲಿ ಇದಾಗಲೇ ಎಂಟಕ್ಕೂ ಅಧಿಕ ಬಾರಿ ಮದುವೆಯಾಗಿದ್ದಾರೆ. ಹಿಂದೊಮ್ಮೆ ಇದೇ ತಮಾಷೆಯನ್ನು ಮಾಡಿದ್ದರು ನಿಶಾ. ರಿಯಲ್​ ಲೈಫ್​ನಲ್ಲಿ ಸಿಂಗಲ್ಲು. ಆದ್ರೆ ಇದಾಗಲೇ 8ಕ್ಕೂ ಅಧಿಕ ಬಾರಿ ಮದುವೆಯಾಗಿದ್ದೇನೆ ಎಂದಿದ್ದರು.
View this post on Instagram
A post shared by Kannada TV Express (@kannada_tv_express)

Source link

Leave a Reply

Your email address will not be published. Required fields are marked *