’ಅಣ್ಣಯ್ಯ’ ಸೀರಿಯಲ್ ಖ್ಯಾತಿಯ ನಟಿ ಪ್ರತೀಕ್ಷಾ ಶ್ರೀನಾಥ್, ಇಂದಿನ ಹೆಣ್ಣುಮಕ್ಕಳು ತಮ್ಮ ಭಾವಿ ಗಂಡನಿಂದ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದರ ಬಗ್ಗೆ ಮಾತನಾಡಿದ್ದಾರೆ. ಸಮಾನತೆಯ ವಿಷಯದಲ್ಲಿ ಗಂಡನ ಆರ್ಥಿಕ ಸ್ಥಿತಿಯ ಬಗ್ಗೆ ಮಾತ್ರ ಹೆಚ್ಚು ಬೇಡಿಕೆ ಇಡುವುದನ್ನು ವಿವರಿಸಿದ್ದಾರೆ.

ಅಣ್ಣಯ್ಯ ಸೀರಿಯಲ್ (Annayya Serial) ಗುಂಡಮ್ಮ ಖ್ಯಾತಿಯ ನಟಿ ಪ್ರತೀಕ್ಷಾ ಶ್ರೀನಾಥ್ ಅವರು ಇಂದಿನ ಹೆಣ್ಣುಮಕ್ಕಳ ಬಗ್ಗೆ ಅತ್ಯಂತ ಸುಂದರವಾಗಿರುವ ಮಾತೊಂದನ್ನು ಹೇಳಿದ್ದಾರೆ. ಈಗಿನ ಕಾಲದ ಹುಡುಗಿಯರು ಹೇಗೆ ತಮ್ಮ ಭಾವಿ ಗಂಡನ ಆಯ್ಕೆಯಲ್ಲಿ ಅತಿ ದುರಾಸೆಯ ವರ್ತನೆಯನ್ನು ತೋರುತ್ತಿದ್ದಾರೆ ಎನ್ನುವ ಬಗ್ಗೆ ಮಾತನಾಡುತ್ತಾ, ಹೆಣ್ಣುಮಕ್ಕಳ ಸ್ವಾತಂತ್ರ್ಯದ ಬಗ್ಗೆಯೂ ವಿವರಣೆ ನೀಡಿದ್ದಾರೆ.

ಹೆಣ್ಣುಮಕ್ಕಳನ್ನು ಇಂದು ಇಂಡಿಪೆಂಡೆಂಟ್ ಆಗಿಯೇ ಬೆಳೆಸುತ್ತಾರೆ. ಆದರೆ, ಅವರು ಸ್ವತಂತ್ರ ಆಗಿ ಬೆಳೆಯುವು ಭರದಲ್ಲಿ, ತಮಗೆ ಯಾವುದಕ್ಕೆ ಸ್ವಾತಂತ್ರ್ಯ ಬೇಕೋ ಅದಕ್ಕಾಗಿ ಮಾತ್ರ ಬಳಸಿಕೊಳ್ಳಲು ಶುರು ಮಾಡುತ್ತಾರೆ ಎಂದು fdfs_kannada ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಇಂದಿನ ಹೆಚ್ಚಿನ ಹೆಣ್ಣುಮಕ್ಕಳು ಅಪ್ಪ-ಅಮ್ಮ ಕೊಡುವ ಸ್ವಾತಂತ್ರ್ಯವನ್ನು ಬೇರೆ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ನಾನು ಇಷ್ಟು ಹೊತ್ತಿಗೆ ಮನೆಗೆ ಬರುತ್ತೇನೆ ಏನಾಗುತ್ತದೆ ಎಂದು ಕೇಳ್ತಾರೆ. ಸರಿ ಅದನ್ನು ಒಪ್ಪಿಕೊಳ್ಳೋಣ. ಆದರೆ ಬೇರೆ ವಿಷಯದಲ್ಲಿ ಅವರು ಹಾಗಿರುವುದಿಲ್ಲ ಎಂದು ಮದುವೆಯ ಬಗ್ಗೆ ಮಾತನಾಡಿದ್ದಾರೆ.

ಹುಡುಗಿಯರಿಗೆ ಈಗ ಡಿಮಾಂಡ್ ಹೆಚ್ಚಾಗಿಬಿಟ್ಟಿದೆ. ಗಂಡನಾಗುವವನಿಂದ ಎಕ್ಸ್ಪೆಕ್ಟೇಷನ್ ವಿಪರೀತ ಆಗಿಬಿಟ್ಟಿದೆ ಎಂದು ಇಂದಿನ ಬಹುತೇಕ ಯುವತಿಯರ ಸ್ವಭಾವದ ಬಗ್ಗೆ ನಟಿ ಮಾತನಾಡಿದ್ದಾರೆ.

ನೀನು ಗಂಡನಿಂದ ಬೆಂಜ್ ಕಾರನ್ನು ಎಕ್ಸ್ಪೆಕ್ಟ್ ಮಾಡುತ್ತಿ ಎಂದಾದರೆ, ನಿನ್ನ ಬಳಿ BMW ಕಾರು ಇದ್ಯಾ ಎಂದು ನೋಡಿಕೊಳ್ಳಿ. ಉಳಿದದ್ದೆಕ್ಕೆಲ್ಲಾ ಸಮಾನತೆ ಬೇಕು ಎನ್ನುವವರು ಇಂಥ ವಿಷ್ಯ ಬಂದಾಗ ಗಂಡನ ಬಳಿ ಏನೆಲ್ಲಾ ಇರಬೇಕು ಎನ್ನುವ ಬಗ್ಗೆ ದೊಡ್ಡ ಡಿಮಾಂಡ್ ಇಡುತ್ತಾರೆ ಎಂದಿದ್ದಾರೆ.

ಇದೇ ಮಾತನ್ನು ಸೀರಿಯಲ್ ಜಿಮ್ ಸೀನ ಅರ್ಥಾತ್ ನಟ ಸುಶ್ಮಿತ್ ಜೈನ್ ಅವರೂ ಒಪ್ಪಿಕೊಂಡಿದ್ದಾರೆ. ನಮ್ಮ ಅಮ್ಮನ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲ. ಆದ್ದರಿಂದ ಸಂಸಾರ ಸುಂದರವಾಗಿ ನಡೆದುಕೊಂಡು ಹೋಗಿತ್ತು. ಆದರೆ ಈಗಿನ ಹೆಚ್ಚಿನ ಹುಡುಗಿಯರಿಗೆ ಡಿಮಾಂಡ್ ಸಿಕ್ಕಾಪಟ್ಟೆ ಆಗಿಬಿಟ್ಟಿದೆ ಎಂದು ಬೇಸರದಿಂದ ನುಡಿದಿದ್ದಾರೆ.

Source link
ಹುಡುಗಿರಾ, ನಿಮ್ ಬಳಿ BMW ಇದ್ರೆ ಮಾತ್ರ ಅವನ ಬಳಿ Benz ಕೇಳಿ: Annayya Serial ಗುಂಡಮ್ಮ ಕಿಡಿ