Headlines

ಮಹಿಳಾ ದಿನದಂದೇ ಇಷ್ಟೊಂದು ದೌರ್ಜನ್ಯನಾ? Annayya Serial ವಿರುದ್ಧ ಸಿಡಿದೆದ್ದ ವೀಕ್ಷಕರು!

ಮಹಿಳಾ ದಿನದಂದೇ ಇಷ್ಟೊಂದು ದೌರ್ಜನ್ಯನಾ? Annayya Serial ವಿರುದ್ಧ ಸಿಡಿದೆದ್ದ ವೀಕ್ಷಕರು!

ಮಹಿಳಾ ದಿನದಂದೇ ಇಷ್ಟೊಂದು ದೌರ್ಜನ್ಯನಾ? Annayya Serial ವಿರುದ್ಧ ಸಿಡಿದೆದ್ದ ವೀಕ್ಷಕರು!

ಜೀ ಕನ್ನಡದ ‘ಅಣ್ಣಯ್ಯ’ ಸೀರಿಯಲ್‌ನಲ್ಲಿ, ತನ್ನ ತಂಗಿಯರನ್ನೇ ಪ್ರಾಣವಾಗಿರಿಸಿಕೊಂಡಿರುವ ಅಣ್ಣ ಶಿವು. ಆದರೆ, ಮದುವೆಯಾದ ಎಲ್ಲಾ ತಂಗಿಯರಿಗೂ ಮೋಸವಾಗುತ್ತಿದ್ದು, ಇದೀಗ ರತ್ನಾ ಕೂಡ ಕ್ರಿಮಿನಲ್ ಪರಶು ಕೈಸೇರಿದ್ದಾಳೆ.  ಹೆಣ್ಣುಮಕ್ಕಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಣ್ಣ ಎಂದರೆ ತಂದೆಯ ಸಮಾನ ಎನ್ನುವ ಮಾತಿನಂತೆ ನಡೆದುಕೊಳ್ಳುತ್ತಿರುವ ಸೀರಿಯಲ್​ ಜೀ ಕನ್ನಡದ ಅಣ್ಣಯ್ಯ ಸೀರಿಯಲ್​ (Annayya Serial). ತನ್ನ ನಾಲ್ವರೂ ತಂಗಿಯಂದಿರನ್ನು ಅಪ್ಪನಿಗಿಂತಲೂ ಮುದ್ದಾಗಿ ಬೆಳೆಸಿ ಅವರಿಗೆ ಯಾವುದೇ ಕಷ್ಟ ಬರದಂತೆ ನೋಡಿಕೊಳ್ಳುವ ಪಣ ತೊಟ್ಟು, ಅವರ ಹಿತರಕ್ಷಣೆಗೆ ಕಂಕಣಬದ್ಧ ಆಗಿದ್ದಾನೆ ಶಿವು.

ಆದರೆ, ಇಂದಿನ ಪ್ರೊಮೋ ನೋಡಿ ಸೀರಿಯಲ್ ವೀಕ್ಷಕರು ಸಿಡಿದೆದ್ದು ಹೋಗಿದ್ದಾರೆ. ಏಕೆಂದರೆ ಇಲ್ಲಿಯವರೆಗೂ ಅಣ್ಣಯ್ಯ ಮದುವೆ ಮಾಡಿರುವ ಯಾವ ತಂಗಿಯರೂ ಸಂತೋಷ ಕಾಣುತ್ತಿಲ್ಲ. ಎಲ್ಲರೂ ಮೋಸ ಹೋಗಿರುವವರೇ. ಮತ್ತೊಬ್ಬಳನ್ನು ಪ್ರೀತಿಸುವ ಗಂಡ ಗುಂಡಮ್ಮನ ಪತಿ, ರಾಣಿಗೆ ಪೆದ್ದು ಗಂಡ ಆದರೆ ಇದೀಗ ರತ್ನಾಳಿಗೂ ಅನ್ಯಾಯ!

ಪರಶು ಜೊತೆ ರತ್ನಾ ಮದುವೆ ನಡೆಯುತ್ತಿರುವಾಗಲೇ, ವಿಲನ್​ ಪರಶುವಿನ ಜೊತೆ ಇವಳ ಮದುವೆಯನ್ನು ನಿಲ್ಲಿಸಪ್ಪಾ, ಅವನ ಸತ್ಯ ಗೊತ್ತಾಗಲಿ ಎಂದೇ ಎಲ್ಲರೂ ಹೇಳುತ್ತಿದ್ದರು.

ಆದರೆ ಆಗಿದ್ದೇ ಬೇರೆ. ಮದುವೆ ಆಗಿದೆ. ಇಲ್ಲಿಯೂ ಹೆಣ್ಣಿಗೆ ಅನ್ಯಾಯ ಆಗಿದೆ. ರತ್ನಾ ಕ್ರಿಮಿನಲ್​ ಪರಶು ಮನೆ ಸೇರಿದ್ದಾಳೆ. ಅವನ ಜೊತೆ ಕೊನೆಯತನಕ ಇರುವುದಾಗಿ ಹೇಳಿದ್ದಾಳೆ.

ಇದನ್ನು ನೋಡಿ ಸೀರಿಯಲ್ ವಿರುದ್ಧ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಯಾಕೆ ಈ ಸೀರಿಯಲ್​ನಲ್ಲಿ ಎಲ್ಲಾ ಹೆಣ್ಣಿಗೂ ಅನ್ಯಾಯ ಆಗಿರುವ ಹಾಗೆ ತೋರಿಸುತ್ತಿದ್ದೀರಿ, ನಿಮಗೆ ಹೆಣ್ಣಿನ ಮೇಲೆ ಯಾಕಿಷ್ಟು ಕೋಪ ಎಂದು ಪ್ರಶ್ನಿಸುತ್ತಿದ್ದಾರೆ.

ಮುಂದೆ ಇದೇ ಹೆಣ್ಣುಮಕ್ಕಳು ತಮ್ಮ ಗಂಡಂದಿರಿಗೆ ಬುದ್ಧಿ ಕಲಿಸಬಹುದು, ಅವರನ್ನು ಸರಿ ದಾರಿಗೆ ತರಬಹುದು. ಸ್ಟೋರಿ ಹೀಗೆ ಹೋಗಬಹುದು. ಆದರೆ ಅದಕ್ಕಾಗಿ ಅವರು ತಮ್ಮ ಇಡೀ ಬದುಕನ್ನೇ ನರಕ ಮಾಡಿಕೊಳ್ಳಬೇಕಾ ಎನ್ನುವುದು ನೆಟ್ಟಿಗರ ಪ್ರಶ್ನೆ.

Source link

Leave a Reply

Your email address will not be published. Required fields are marked *