Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಮತ್ತೊಮ್ಮೆ ವೀರಭದ್ರನಿಗೆ ಮುಖಭಂಗ ಆಗಿದೆ. ಶಾರದಮ್ಮನಿಗೆ ಹೇಗಾದ್ರು ಮಾಡಿ ಅವಮಾನ ಮಾಡಬೇಕು ಎಂದು ಅಂದುಕೊಂಡಿದ್ದ ವೀರಭದ್ರನ ಎದುರೇ ಶಾರದಮ್ಮನಿಗೆ ಅನಿರೀಕ್ಷಿತ ಸನ್ಮಾನ ಸಿಕ್ಕಿದೆ.

ಅಣ್ಣಯ್ಯ ಧಾರಾವಾಹಿಯಲ್ಲಿ ಸದ್ಯ ಪರಶು ಮತ್ತು ರತ್ನ ಮದುವೆ ತಯಾರಿ ಜೋರಾಗಿಯೇ ನಡೆಯುತ್ತಿದೆ. ಒಂದು ಕಡೆ ವೀರಭದ್ರ ಶಾರದಮ್ಮನಿಗೆ ಅವಮಾನ ಮಾಡಲು ಕಾಯುತ್ತಿದ್ದರೆ, ಮತ್ತೊಂದೆಡೆ ಪಾರು ತನ್ನ ಅತ್ತೆಗೆ ಎಲ್ಲಾ ಕಡೆಯಲ್ಲೂ ಗೌರವ ಸಿಗುವಂತೆ ನೋಡಿಕೊಳ್ಳುತ್ತಿದ್ದಾಳೆ.

ಇದೀಗ ಮದುವೆಗಾಗಿ ಬಟ್ಟೆ ಮತ್ತು ಜ್ಯುವೆಲ್ಲರಿ ಶಾಪಿಂಗ್ ನಡೆಯುತ್ತಿದೆ. ಅಲ್ಲೂ ಸಹ ಶಿವುಗೆ ಅವಮಾನ ಮಾಡಲು ಹೊಂಚು ಹಾಕಿದ್ದ ವೀರಭದ್ರನಿಗೆ ಸೋಲಾಗಿದೆ. ಈಗ ಹೇಗಾದರೂ ಮಾಡಿ ಶಾರದಮ್ಮನಿಗೆ ಮತ್ತೆ ಜೈಲಾಗಬೇಕು ಅಥವಾ ಅವಮಾನ ಆಗಲೇಬೇಕೆಂದು ಪರಶು ಮತ್ತು ಛತ್ರಿ ಜೊತೆ ಸೇರಿ ಪ್ಲ್ಯಾನ್ ಮಾಡಿದ್ದಾನೆ.

ಶಾಪಿಂಗ್ ಗೆ ಬಂದಿದ್ದ ಮಹಿಳೆಯೊಬ್ಬರ ಚಿನ್ನದ ಸರವನ್ನು ಕದ್ದು, ಪರಶು ತನ್ನ ಅತ್ತೆ ಶಾರದಮ್ಮನನ್ನು ಅಪ್ಪಿಕೊಳ್ಳುವಂತೆ ನಟಿಸುತ್ತಾ, ಅದನ್ನು ಅವರಿಗೆ ಗೊತ್ತಾಗದಂತೆ ಅವರ ಬ್ಯಾಗಲ್ಲಿ ಹಾಕಿದ್ದಾನೆ. ಶಾರದಮ್ಮನ ಮೇಲ್ ಆರೋಪ ಬರೋದನ್ನು ನೋಡಿ, ಮಜಾ ತೆಗೆದುಕೊಳ್ಳುವ ಉಪಾಯ ವೀರಭದ್ರನದ್ದಾಗಿತ್ತು. ಆದರೆ ಅದೂ ಉಲ್ಟಾ ಹೊಡೆಯಿತು.

ಚಿನ್ನ ಕಳೆದುಕೊಂಡ ಹೆಂಗಸು ಈ ಕೆಲಸವನ್ನು ಶಾರದಮ್ಮನೇ ಮಾಡಿರಬೇಕೆಂದು ದೂರುತ್ತಾಳೆ, ಜೊತೆಗೆ ಪೊಲೀಸ್ ಬರಬೇಕೆಂದು ಕೇಳುತ್ತಾಳೆ. ಆದರೆ ಅಲ್ಲಿಗೆ ಬರುವ ಶಾಪ್ ಮಾಲೀಕರು, ಶಾರದಮ್ಮನನ್ನು ನೋಡಿ, ಹಳೆಯ ನೆನಪುಗಳನ್ನು ಮತ್ತೆ ನೆನಪಿಸುತ್ತಾ, ಶಾರದಮ್ಮನ ಕಾಲಿಗೆ ಬೀಳುತ್ತಾರೆ. ಇದನ್ನು ನೋಡಿ ವೀರಭದ್ರ ಸಮೇತ ಮನೆಮಂದಿಗೆ ಅಚ್ಚರಿಯಾಗುತ್ತದೆ.

ಶಾರದಮ್ಮ ಹಿಂದೆ ಆ ಮಾಲಿಕರಿಗೆ ಯಾವ ರೀತಿ ಸಹಾಯ ಮಾಡಿದ್ದರು ಅನ್ನೋದು ಗೊತ್ತಿಲ್ಲ. ವಿಡಿಯೋ ನೋಡಿದರೆ, ಅವರಿಗೆ ಹೆರಿಗೆ ಮಾಡಿಸಿ, ಮಗುವನ್ನು ಉಳಿಸಿದಂತೆ ಕಾಣುತ್ತದೆ. ಈ ಸತ್ಯ ಗೊತ್ತಾದರೆ ಶಿವುಗೂ ಕೂಡ ಅಮ್ಮನ ಮೇಲಿನ ಕೋಪ ಕೊಂಚ ಮಟ್ಟಿಗೆ ಕಡಿಮೆಯಾಗಬಹುದೇನೋ.

ಅಣ್ಣಯ್ಯ ಧಾರಾವಾಹಿ ಅಣ್ಣ ಶಿವು ಮತ್ತು ನಾಲ್ಕು ಜನ ತಂಗಿಯರಾದ ರತ್ನ, ರಾಣಿ, ರಶ್ಮಿ ಮತ್ತು ರಮ್ಯಾ ಕಥೆ. ಜೊತೆಗೆ ಶಿವು-ಪಾರು ಪ್ರೇಮ ಕಥೆ. ತಾನು ತಂಗಿಯರಿಗೆ ಒಳ್ಳೆಯ ಹುಡುಗರನ್ನೇ ಹುಡುಕಿ ಮದುವೆ ಮಾಡಿದ್ದೇನೆ ಎಂದುಕೊಂಡು ಶಿವು ಮೂರು ಜನ ತಂಗಿಯರ ಬಾಳಿಗೆ ಮುಳ್ಳಾಗಿದ್ದಾನೆ. ಮುಂದೊಂದು ದಿನ ಇದು ಗೊತ್ತಾದರೆ ಶಿವು ಪರಿಸ್ಥಿತಿ ಏನಾಗಲಿದೆ? ಅಮ್ಮನ ಸತ್ಯ, ಮಾವ ವೀರಭದ್ರ ಮಾಡಿದ ಮೋಸ ಇದೆಲ್ಲವೂ ಇನ್ನಷ್ಟೇ ಶಿವುಗೆ ತಿಳಿಯಬೇಕಿದೆ.

Source link
Annayya Serial: ವೀರಭದ್ರನ ಸಂಚು ತಲೆಕೆಳಗಾಯ್ತು… ಅವಮಾನದ ಬದಲು ಶಾರದಮ್ಮನಿಗೆ ಸಿಕ್ತು ಸನ್ಮಾನ