Headlines

Annayya Serial: ಪರಶು ಪಾಪ ಕೃತ್ಯ ಮನೆಯವರ ಮುಂದೆ ಬಯಲು… ತಂಗಿನ ಕಾಪಾಡ್ತಾನ ಶಿವಣ್ಣ

Annayya Serial: ಪರಶು ಪಾಪ ಕೃತ್ಯ ಮನೆಯವರ ಮುಂದೆ ಬಯಲು… ತಂಗಿನ ಕಾಪಾಡ್ತಾನ ಶಿವಣ್ಣ

Annayya Serial: ಪರಶು ಪಾಪ ಕೃತ್ಯ ಮನೆಯವರ ಮುಂದೆ ಬಯಲು… ತಂಗಿನ ಕಾಪಾಡ್ತಾನ ಶಿವಣ್ಣ

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಕೊನೆಗೂ ಮನೆಮಂದಿ ಮುಂದೆ ಜೊತೆಗೆ ಮದುವೆಗೆ ಸೇರಿದ ನೆಂಟರಿಷ್ಟರ ಮುಂದೆ ಪರಶುನ ನಿಜ ಮುಖ ಬಯಲಾಗಿದೆ. ಹಾಗಾದರೆ ಶಿವು ಮತ್ತು ಪಾರು ರತ್ನನನ್ನು ಕಾಪಾಡುತ್ತಾರೆಯೇ? ಅಥವಾ ಇದು ಸುಳ್ಳು ಎಂದು ಮದುವೆ ಮುಂದುವರೆಯುತ್ತಾ?

ಅಣ್ಣಯ್ಯ ಧಾರಾವಾಹಿಯಲ್ಲಿ ದಿನಕ್ಕೊಂದು ಟ್ವಿಸ್ಟ್ ಎನ್ನುವಂತೆ ಒಂದೊಂದು ಎಪಿಸೋಡ್ ಪ್ರಸಾರವಾಗುತ್ತಿದೆ. ಒಟ್ಟಲ್ಲಿ ಹೇಳೋದಾದರೆ ಶಿವಣ್ಣನ ಹಿರಿಯ ತಂಗಿ ನಾಗರತ್ನ ಮದುವೆ ಮಾತ್ರ ಫುಲ್ ಇಂಟ್ರೆಸ್ಟಿಂಗ್ ಆಗಿ ಬರುತ್ತಿದೆ. ಯಾವ ಸಂದರ್ಭದಲ್ಲಿ ಏನು ಆಗಲಿದೆ ಎನ್ನುವ ಕುತೂಹಲ ಪ್ರತಿ ಎಪಿಸೋಡ್ ನಲ್ಲೂ ಹೆಚ್ಚುತ್ತಿದೆ.

ಒಂದೆಡೆ ಅಣ್ಣಯ್ಯ ದಾರಾವಾಹಿಯಲ್ಲಿ ಶಿವಣ್ಣನ ಹಿರಿಯ ತಂಗಿ ರತ್ನನ ಮದುವೆ ಸಂಭ್ರಮ ನಡೆಯುತ್ತಿದೆ. ಎಲ್ಲಾ ಅಡೆತಡೆಗಳನ್ನು ಮೀರಿ, ಅರಶಿನ ಶಾಸ್ತ್ರ ಕೂಡ ಮುಗಿದಿದೆ. ಪರಶುನನ್ನು ಅಪ್ಪ ಎಂದು ಕರೆದು ಓಡಿ ಬಂದು ತಬ್ಬಿದ ಮಗು, ತಮಾಷೆಗಾಗಿ ಮಾಡಿದ್ದು ಎಂದು ಕೂಡ ತಿಳಿದಿದೆ. ಆದರೆ ಇದೀಗ ಪರಶುನ ನಿಜ ಮುಖ ಬಯಲಾಗಿದೆ.

ಇದೀಗ ಮತ್ತೊಮ್ಮೆ ಎಲ್ಲರ ಮುಂದೆ ಪರಶು ನಿಜವಾದ ಮುಖ, ಆತ ಮಾಡಿದ ಪಾಪ ಕೃತ್ಯ ಬಯಲಾಗಿದೆ. ಅದು ಕೂಡ ಸಾಕ್ಷಿ ಸಮೇತ ಎಲ್ಲವೂ ತಿಳಿದು ಬಂದಿದೆ. ಮದುವೆಯ ಸಂಭ್ರಮದಲ್ಲಿ ಎಲ್ಲ ಕುಣಿದಾಡಿ, ನಲಿದಾಡುತ್ತಿರುವಾಗ ಸ್ಕ್ರೀನ್ ನಲ್ಲಿ ಮದುವೆಯ ವಿಡಿಯೋಗಳು ಪ್ರಸಾರವಾಗುತ್ತೆ.

ಟಿವಿಯಲ್ಲಿ ಮದುವೆಯ ಅರಶಿನ ಶಾಸ್ತ್ರ ಸೇರಿ ಒಂದೊಂದು ಫೋಟೊ ವಿಡಿಯೋಗಳು ಪ್ರಸಾರವಾಗುತ್ತವೆ. ಅದರ ಜೊತೆಗೆ ಪರಶು ಫೋನಲ್ಲಿ, ಅವಳನ್ನು ಬಿಡ್ಬೇಡಿ, ಎಲ್ಲಿದ್ರೂ ಕರ್ಕೊಂಡು ಬಾರ್ಲ ಎಂದು ಅವಾಜ್ ಹಾಕುತ್ತಿರುವ ವಿಡಿಯೋ ಪ್ರಸಾರ ಆಗುತ್ತೆ. ಅಷ್ಟರಲ್ಲೇ ಪೊಲೀಸ್ ಮತ್ತು ಹುಡುಗಿಯ ಆಗಮನ ಆಗುತ್ತದೆ. ಮನೆಯವರ ಮುಖದಲ್ಲೆಲ್ಲಾ ಆತಂಕ ಮನೆ ಮಾಡಿದೆ, ಹಾಗಿದೆ ಮುಂದೇನಾಗುತ್ತೆ?

ಶಿವು ಇಷ್ಟು ದಿನ ಕನಸು ಕಟ್ಟಿಕೊಂಡಿದ್ದ ಹಿರಿಯ ತಂಗಿಯ ಮದುವೆ ಮುರಿದು ಬೀಳುತ್ತಾ? ಮದುವೆಯಾದರೆ ಎಲ್ಲವೂ ಚೆನ್ನಾಗಿರುತ್ತೆ ಎಂದು ಪಾರು ಅಂದುಕೊಂಡಿದ್ದೆಲ್ಲಾ ಸುಳ್ಳಾಗುತ್ತಾ, ಅಣ್ಣನ ಮೇಲಿಟ್ಟ ನಂಬಿಕೆ ಸುಳ್ಳಾಗುತ್ತಾ? ಏನಾಗುತ್ತೆ ಧಾರಾವಾಹಿಯಲ್ಲಿ.

ಪ್ರೊಮೋ ನೋಡಿದ ಜನರು ಮಾತ್ರ ಇದು ಸೋಮೇಗೌಡನ ಕಿತಾಪತಿ,ಇದೆಲ್ಲಾ ನಾಟಕ ಅನ್ನೋದು ರಿವೀಲ್ ಆಗುತ್ತದೆ. ಖಂಡಿತವಾಗಿಯೂ ಮದುವೆ ಆಗಿಯೇ ಆಗುತ್ತದೆ. ಇಬ್ಬರು ತಂಗಿಯರಂತೆ ರತ್ನ ಜೀವನ ಕೂಡ ಹಾಳಾಗೋದು ಖಂಡಿತವಾಗಿಯೂ ಸತ್ಯ ಎನ್ನುತ್ತಿದ್ದಾರೆ ಜನ.

Source link

Leave a Reply

Your email address will not be published. Required fields are marked *