ಹೆಸರು ಬದಲಿಸಿಕೊಂಡ 'ಅಂತರಪಟ' ನಟಿ ತನ್ವಿ: ದಿಢೀರ್​ ಏಕೀ ನಿರ್ಧಾರ? ನಟಿ ಹೇಳಿದ್ದೇನು?

ಹೆಸರು ಬದಲಿಸಿಕೊಂಡ 'ಅಂತರಪಟ' ನಟಿ ತನ್ವಿ: ದಿಢೀರ್​ ಏಕೀ ನಿರ್ಧಾರ? ನಟಿ ಹೇಳಿದ್ದೇನು?

ಹೆಸರು ಬದಲಿಸಿಕೊಂಡ 'ಅಂತರಪಟ' ನಟಿ ತನ್ವಿ: ದಿಢೀರ್​ ಏಕೀ ನಿರ್ಧಾರ? ನಟಿ ಹೇಳಿದ್ದೇನು?
‘ಅಂತರಪಟ’ ಸೀರಿಯಲ್ ಮೂಲಕ ಖ್ಯಾತಿ ಪಡೆದ ನಟಿ ತನ್ವಿಯಾ ಬಾಲರಾಜ್ ತಮ್ಮ ಹೆಸರನ್ನು ರಾಧ್ಯಾ ರಾಜ್ ಎಂದು ಬದಲಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಹಂಚಿಕೊಂಡ ಅವರು, ವಿಶೇಷ ಕಾರಣಗಳಿಂದ ಈ ನಿರ್ಧಾರ ಕೈಗೊಂಡಿದ್ದು, ತಮ್ಮ ಹೊಸ ಪಯಣಕ್ಕೆ ಎಲ್ಲರ ಬೆಂಬಲ ಕೋರಿದ್ದಾರೆ.
ಕಲರ್ಸ್​ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಅಂತರಪಟ ಸೀರಿಯಲ್​ನ ಆರಾಧನಾ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದು ಬೀಗಿದವರು ನಟಿ ತನ್ವಿಯಾ ಬಾಲರಾಜ್​. ಅವರನ್ನು ತನ್ವಿ ಬಾಲರಾಜ್​ ಎಂದೇ ಹಲವರು ಕರೆಯುವುದು ಉಂಟು. ಈ ಸೀರಿಯಲ್​ನಲ್ಲಿ ಸ್ವಾಭಿಮಾನಿ ಮಗಳ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಹೃದಯ ಗೆದ್ದವರು ನಟಿ ತನ್ವಿಯಾ.

ಇದೀಗ ಅವರು, ತಮ್ಮ ಹೆಸರನ್ನೇ ಬದಲಿಸಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇದೀಗ ಅವರು ತಮ್ಮ ಹೆಸರನ್ನು ರಾಧ್ಯಾ ರಾಜ್​ ಎಂದು ಬದಲಿಸಿಕೊಂಡಿದ್ದು, ಈ ಬಗ್ಗೆ ಪೋಸ್ಟ್​ ಹಾಕುವ ಮೂಲಕ ಇನ್ನು ಮುಂದೆ ತಮ್ಮನ್ನು ರಾಧ್ಯಾ ರಾಜ್​ ಎಂಬ ಹೆಸರಿನಲ್ಲಿ ಕರೆಯುವಂತೆ ಕೋರಿಕೊಂಡಿದ್ದಾರೆ.

ನನ್ನ ಪ್ರೀತಿಯ ಸ್ನೇಹಿತರೇ, ಕುಟುಂಬದವರೇ ಹಾಗೂ ನನ್ನ ಹಿತೈಷಿಗಳೇ…. ಕೃತಜ್ಞತೆ ತುಂಬಿದ ಹೃದಯದೊಂದಿಗೆ, ನನ್ನ ಜೀವನದ ಪಯಣದಲ್ಲಿ ಹೊಸ ಅಧ್ಯಾಯವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನಗೆ ಅಪಾರ ಸಂತೋಷವಾಗಿದೆ. ಹೊಸ ಕನಸುಗಳು ಹಾಗೂ ಆಶಯಗಳೊಂದಿಗೆ ಮುಂದಕ್ಕೆ ಸಾಗುತ್ತಿರುವ ಈ ಸಂದರ್ಭದಲ್ಲಿ,ಕೆಲವು ವಿಶೇಷ ಕಾರಣಗಳಿಂದ ನಾನು ಹೊಸ ಹೆಸರನ್ನು ಸ್ವೀಕರಿಸುವ ನಿರ್ಧಾರ ಕೈಗೊಂಡಿದ್ದೇನೆ ಎಂದು ಪೋಸ್ಟ್​ನಲ್ಲಿ ನಟಿ ತಿಳಿಸಿದ್ದಾರೆ.

ನಿಮ್ಮ ನಿರಂತರ ಬೆಂಬಲ ಮತ್ತು ಪ್ರೋತ್ಸಾಹ ಪ್ರತಿದಿನವೂ ನನಗೆ ಪ್ರೇರಣೆಯಾಗಿವೆ. ಈ ಸುಂದರ ಪಯಣವನ್ನು ನೊಮ್ಮೊಡನೆ ಜೊತೆಯಾಗಿಯೇ ಮುಂದುವರೆಸಲು ನಾನು ಎದುರು ನೋಡುತ್ತಿದ್ದೇನೆ. ಸ ಉಂದರವಾದ ಆರಂಭಗೊಂದಿಗೆ, ನಿಮ್ಮ ಪ್ರೀತಿಯ ರಾಧ್ಯಾ ರಾಜ್​ ಎಂದು ನಟಿ ಹೇಳಿದ್ದಾರೆ.

ಈ ಮೂಲಕ ಹೊಸ ಪಯಣಕ್ಕೆ ತಾವು ಮುನ್ನುಡಿ ಬರೆಯುತ್ತಿರುವುದಾಗಿ ಹೇಳಿದ್ದು, ಹೆಸರು ಕಾರಣದ ಬಗ್ಗೆ ಸ್ಪಷ್ಟ ಕಾರಣವನ್ನು ಅವರು ನೀಡಲಿಲ್ಲ.

ಅಂದಹಾಗೆ, ತನ್ವಿಯಾ ಉರ್ಫ್​ ರಾಧ್ಯಾ ರಾಜ್ ಅವರು ಇದೀಗ ‘ಎನ್ನಾಲೋ ವೆಚ್ಚಿನ ಹೃದಯಂ’ ಎಂಬ ತೆಲುಗು ಕಿರುತೆರೆ ಪ್ರೇಕ್ಷಕರಿಗೂ ಪರಿಚಯವಾಗುತ್ತಿದ್ದಾರೆ. ಈ ಬಗ್ಗೆಯೂ ಈಚೆಗೆ ಅವರು ತಿಳಿಸಿದ್ದರು. ಬ್ಯಾಕ್ ಸ್ಟೇಜ್ ಡಾನ್ಸರ್ ಆಗಿ ಪಯಣ ಆರಂಭಿಸಿರುವ ರಾಧ್ಯಾ, ಹಲವಾರು ರಿಯಾಲಿಟಿ ಶೋ ಗಳಲ್ಲಿ, ಅವಾರ್ಡ್ ಫಂಕ್ಷನ್ ಗಳಲ್ಲಿ ಕಾಣಿಸಿಕೊಂಡವರು. ಬಳಿಕ ಅವರಿಗೆ ಅಂತರಪಟ ಸೀರಿಯಲ್​ನಲ್ಲಿ ಅವಕಾಶ ಸಿಕ್ಕಿತು.

Source link

Leave a Reply

Your email address will not be published. Required fields are marked *