Headlines

ಭಾರತಕ್ಕೂ ಬಂದ ಆಂಥ್ರೋಪಿಕ್; ಬೆಂಗಳೂರಿನಲ್ಲಿ ಅಂಗಡಿ ತೆರೆದ ಎಐ ಕಂಪನಿ

ಭಾರತಕ್ಕೂ ಬಂದ ಆಂಥ್ರೋಪಿಕ್; ಬೆಂಗಳೂರಿನಲ್ಲಿ ಅಂಗಡಿ ತೆರೆದ ಎಐ ಕಂಪನಿ


ಬೆಂಗಳೂರು, ಫೆಬ್ರುವರಿ 16: ಐ ಸೇವೆಗಳನ್ನು ನೀಡುವ ಆಂಥ್ರೋಪಿಕ್ (ಆಂಥ್ರೋಪಿಕ್) ಸಂಸ್ಥೆ ಬೆಂಗಳೂರಿನಲ್ಲಿ ಹೊಸ ಕಚೇರಿ ತೆರೆದಿದೆ. ಇದು ಭಾರತದಲ್ಲಿ ಆಂಥ್ರೋಪಿಕ್ನ ಮೊದಲ ಕಚೇರಿಯಾಗಿದೆ. ಏಷ್ಯಾದಲ್ಲಿ ಅದರ ಎರಡನೇ ಕಚೇರಿಯಾಗಿದೆ. ಅಗಾಧ ಮಾರುಕಟ್ಟೆ, ವಿಫುಲ ಅವಕಾಶಗಳಿರುವ ಈ ಅಮೆರಿಕನ್ ಎಐ ಕಂಪನಿ ಬೆಂಗಳೂರಿನಲ್ಲಿ ಕಚೇರಿ ತೆರೆದಿದೆ.

ಆಂಥ್ರೋಪಿಕ್ನ ಸೂಪರ್ ಹಿಟ್ ಎಐ ಉತ್ಪನ್ನಗಳಲ್ಲಿ ಕ್ಲಾಡ್ ಎಐ ಒಂದು. ಇದು ಜನರೇಟಿವ್ ಎಐ ಮಾಡಲ್ ಆದರೂ ಕೋಡಿಂಗ್ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದಕ್ಕೆ ಖ್ಯಾತಿ ಪಡೆದಿದೆ. ಅದರ ಕ್ಲಾಡ್ ಐ ಸರ್ವಿಸ್‌ಗೆ ಭಾರತವೇ ಎರಡನೇ ಅತಿದೊಡ್ಡ ಮಾರುಕಟ್ಟೆ ಎನಿಸಿದೆ. ಆಯಪ್‌ಗಳನ್ನು ತಯಾರಿಸುವುದು, ಸಿಸ್ಟಂಗಳ ಆಧುನೀಕರಣ, ಪ್ರೊಡಕ್ಷನ್ ಸಾಫ್ಟ್‌ವೇರ್ ಸಾಗಣೆ ಇತ್ಯಾದಿಗಳಿಗೆ ಕ್ಲಾಡ್ ಎಐ ಬಳಕೆ ಭಾರತದಲ್ಲಿ ಹೆಚ್ಚುತ್ತಿದೆ. ಹೀಗಾಗಿ, ಭಾರತದ ಮಾರುಕಟ್ಟೆಯ ಮೇಲೆ ಆಂಥ್ರೋಪಿಕ್ ಹೆಚ್ಚಿನ ಕಣ್ಣು ನೆಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಐದು ವರ್ಷದ ಐಟಿ ಉದ್ಯೋಗಗಳೇ ಇರೋದಿಲ್ಲ; ವಿನೋದ್ ಖೋಸ್ಲಾ ಏನಿಂದ ಭಾರತವೇನು ಮಾಡಬೇಕು?

‘ಬೆಂಗಳೂರು ಕಚೇರಿಯನ್ನು ಇವತ್ತು ಅಧಿಕೃತವಾಗಿ ತೆರೆದಿದ್ದೇವೆ. ಉದ್ದಿಮೆ, ಶಿಕ್ಷಣ ಮತ್ತು ಕೃಷಿ ವಿಭಾಗಗಳಲ್ಲಿ ಜೊತೆಗಾರಿಕೆಗಳನ್ನು ಹೊಂದಿದ್ದೇವೆ. ಭಾರತದ ಎಲ್ಲಾ ಸೆಕ್ಟರ್‌ಗಳಲ್ಲಿ ಐ ಸೇವೆ ಮಾಡಲು ಬದ್ಧರಾಗಿದ್ದೇವೆ. ಹೆಚ್ಚು ಜನರು ಮತ್ತು ಉದ್ದಿಮೆಗಳಿಗೆ ಎಐ ಲಾಭಗಳನ್ನು ಕೊಡಲು ಭಾರತ ಒಳ್ಳೆಯ ಅವಕಾಶವನ್ನು ನೀಡುತ್ತದೆ. ಭಾರತದಲ್ಲಿ ಅಸಾಧಾರಣ ತಾಂತ್ರಿಕ ಪ್ರತಿಭೆ, ಅಗಾಧ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಇದೆ. ತಂತ್ರಜ್ಞಾನದ ಮೂಲಕ ಜನರ ಜೀವನ ಸುಧಾರಿಸುವ ಕಾರ್ಯದಲ್ಲಿ ಯಶಸ್ವಿಯಾಗಿದೆ. ಈ ಐವು ತಂತ್ರಜ್ಞಾನ ಜನರಿಗೆ ಅನುಕೂಲವಾಗಲು ಇಂತಹ ವಾತಾವರಣವೇ ಬೇಕಿರುವುದು’ ಎಂದು ಆಂಥ್ರೋಪಿಕ್ ಭಾರತದ ವಿಭಾಗದ ಎಂಡಿ ಇರಿನಾ ಘೋಸ್ ಹೇಳುತ್ತಾರೆ.

ಭಾರತದಲ್ಲಿ ಕನ್ನಡ, ಹಿಂದಿ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಐ ಮಾಡಲ್ ಅಳವಡಿಸುವ ಕಡೆಗೂ ಆಂಥ್ರೋಪಿಕ್ ಗಮನ ಹರಿಸುತ್ತಿದೆ, ಈ ಆಧುನಿಕ ವಿವಿಧ ಕಂಪನಿಗಳಿಗೆ ಸಹಭಾಗಿತ್ವ ಸಾಧಿಸಿದೆ. ಈಗಿರುವ ಐ ಮಾದರಿಗಳು ಇಂಗ್ಲಿಷ್ನಲ್ಲಿ ಉತ್ತಮ ಸೇವೆ ಒದಗಿಸುತ್ತವೆ. ಆದರೆ, ಹಿಂದಿ, ಬಂಗಾಳಿ, ಮರಾಠಿ, ಕನ್ನಡ, ತೆಲುಗು, ತಮಿಳು, ಪಂಜಾಬಿ, ಗುಜರಾತಿ, ಮಲಯಾಳಂ, ಉರ್ದು ಭಾಷೆಗಳಲ್ಲಿ ಸಾಕಷ್ಟು ಟ್ರೈನಿಂಗ್ ಮಾಡಿ, ಈ ಅಂತರವನ್ನು ಕಡಿಮೆ ಮಾಡಲು ಆರು ತಿಂಗಳ ಹಿಂದೆಯೇ ಆಂಥ್ರೊಪಿಕ್ ಪ್ರಯತ್ನ ಪ್ರಾರಂಭವಾಯಿತು. ಇದು ತಕ್ಕಮಟ್ಟಿಗೆ ಯಶಸ್ವಿಯಾಗಿದೆ ಎಂದು ಈ ಸಂಸ್ಥೆ ಹೇಳಿಕೊಂಡಿದೆ.

ಇದನ್ನೂ ಓದಿ: AI ಇಂಪ್ಯಾಕ್ಟ್ ಶೃಂಗಸಭೆ: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್

ಆಂತ್ರೋಪಿಕ್ ಕಂಪನಿ ಇತ್ತೀಚೆಗಷ್ಟೇ 30 ಬಿಲಿಯನ್ ಡಾಲರ್‌ನಷ್ಟು ಫಂಡಿಂಗ್ ಪಡೆದಿದೆ. ಇದರ ಮೌಲ್ಯ ಈಗ 380 ಬಿಲಿಯನ್ ಡಾಲರ್ ಎಂದು ಮೌಲ್ಯೀಕರಿಸಲಾಗಿದೆ. ಬಹಳಷ್ಟು ಕೆಲಸಗಳನ್ನು ಐಟಿ ಸರ್ವಿಸ್‌ಗಳು ತ್ವರಿತವಾಗಿ ಮಾಡಬಲ್ಲವು. ಹೀಗಾಗಿ, ಐಟಿ ಸರ್ವಿಸ್ ಕ್ಷೇತ್ರದಲ್ಲಿ ಆಂಥ್ರೊಪಿಕ್ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *