Headlines

ಆಂಥ್ರೋಪಿಕ್​ನಿಂದ ಉಚಿತ ಎಐ ಕೋರ್ಸ್​ಗಳು; ಕ್ಲಾಡ್ ಟ್ರೈನಿಂಗ್ ಮತ್ತು ಸರ್ಟಿಫಿಕೇಟ್ ಸಿಗುತ್ತೆ; ಪಡೆಯುವುದು ಹೇಗೆ?

ಆಂಥ್ರೋಪಿಕ್​ನಿಂದ ಉಚಿತ ಎಐ ಕೋರ್ಸ್​ಗಳು; ಕ್ಲಾಡ್ ಟ್ರೈನಿಂಗ್ ಮತ್ತು ಸರ್ಟಿಫಿಕೇಟ್ ಸಿಗುತ್ತೆ; ಪಡೆಯುವುದು ಹೇಗೆ?


ಬೆಂಗಳೂರು, ಮಾರ್ಚ್ 5: ಆಂಥ್ರೋಪಿಕ್ (ಆಂಥ್ರೋಪಿಕ್) ಕಂಪನಿಯ ಐ ಟೆಕ್ನಾಲಜಿ ಶಕ್ತ ಉತ್ಪನ್ನಗಳು ದೈನಂದಿನ ಕೆಲಸಗಳನ್ನು ಸಲೀಸಾಗಿ ಮಾಡಲು ಬಹಳ ಸಹಾಯ ಮಾಡುತ್ತದೆ. ಅದರ ಕ್ಲಾಡ್ನಂತಹ ಎಐ ಟೂಲ್ಗಳು ಹೆಚ್ಚೆಚ್ಚು ಕೆಲಸಗಳನ್ನು ಆಟೋಮೇಟ್ ಮಾಡಬಲ್ಲವು. ಆದರೆ, ಈ ಟೂಲ್‌ಗಳನ್ನು ಹೇಗೆ ಬಳಸಬೇಕು ಎಂದು ಸರಿಯಾಗಿ ತಿಳಿದಿರಬೇಕು. ಸಾಫ್ಟ್ವೇರ್ಗಳು ಬಹಳಷ್ಟು ಕೆಲಸಗಳನ್ನು ಆಟೋಮೇಟ್ ಮಾಡಿದೆವು. ಆದರೆ, ಸಾಫ್ಟ್ವೇರ್ ಅನ್ನು ಹೇಗೆ ಬಳಸಬೇಕೆಂದು ತಿಳಿದಿರಬೇಕು. ಜೊತೆಗೆ, ಎಐ ಟೂಲ್ಗಳ ಬಳಕೆಯ ಬಗ್ಗೆ ಅರಿವು ಅಗತ್ಯ.

ಇದನ್ನು ಮನಗಂಡೇ ಆಂಥ್ರೋಪಿಕ್ ಸಂಸ್ಥೆ ಅಕಾಡೆಮಿ ತೆರೆದಿದೆ. ಆಂಥ್ರೋಪಿಕ್ ಅಕಾಡೆಮಿಯಲ್ಲಿ ಆನ್‌ಲೈನ್‌ನಲ್ಲಿ ಉಚಿತವಾಗಿ ಎಐ ಕೋರ್ಸ್‌ಗಳನ್ನು ಆಫರ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು, ವೃತ್ತಿಪರರು, ಡೆವಲಪರ್‌ಗಳು ಹೀಗೆ ಎಲ್ಲಾ ವರ್ಗದ ಜನರಿಗೆ ವಿನ್ಯಾಸ ಮಾಡಲಾದ ಕೋರ್ಸ್‌ಗಳಿವೆ. ಕ್ಲಾಡ್ ಎಐ ಮಾಡಲ್ಗಳನ್ನು ಕಲಿಸುವುದನ್ನು ಬಳಸುವುದನ್ನು ಈ ಕೋರ್ಸ್‌ಗಳಲ್ಲಿ ಆಯ್ಕೆ ಮಾಡಲಾಗುತ್ತದೆ.

ಆಂಥ್ರೋಪಿಕ್ ಸಂಸ್ಥೆ ಹಲವು ಕೋರ್ಸ್‌ಗಳನ್ನು ಆರಂಭಿಸಿದೆ. ಸ್ಕಿಲ್ಜಾರ್ ಪ್ಲಾಟ್‌ಫಾರ್ಮ್‌ನಲ್ಲಿ ಇವು ಉಚಿತವಾಗಿ ಲಭ್ಯವಿವೆ. ಕೊರ್ಸೆರಾ ಮೂಲಕ ಇನ್ನಷ್ಟು ಪ್ರೀಮಿಯಂ ಕಾಂಟೆಂಟ್ ಲಭ್ಯವಿರುತ್ತದೆ. ಕೋರ್ಸ್ ಕಲಿತು ಮುಗಿಸಿದರೆ ಸರ್ಟಿಫಿಕೇಶನ್ ಕೂಡಬೇಕು.

ಇದನ್ನೂ ಓದಿ: ಶೇ. 60ರ ಗಡಿ ದಾಟಲಿದೆ ಡಿಎ, ಡಿಆರ್; ಜನವರಿಯ ತುಟ್ಟಿಭತ್ಯೆ ಎಷ್ಟು ಏರಬಹುದು?

ಎಐನಲ್ಲಿ ಏನೂ ಗೊತ್ತಿಲ್ಲದ ಬಿಗನರ್ಸ್‌ನಿಂದ ಹಿಡಿದು, ಐಐಎಪ್‌ಗಳನ್ನು ತಯಾರಿಸುವ ವೃತ್ತಿಪರರಿಗೆ ಎಲ್ಲರಿಗೂ ಸೂಕ್ತವಾಗುವ ಎಐ ಸ್ಕಿಲ್‌ಗಳನ್ನು ಈ ಕೋರ್ಸ್‌ಗಳಲ್ಲಿ ಕಲಿಯಬಹುದು.

ಆಂಥ್ರೋಪಿಕ್ ಆಫರ್ ಮಾಡಿರುವ ಎಐ ಕೋರ್ಸ್‌ಗಳಿವು…

  • ಕ್ಲಾಡ್ ಕೋಡ್ ಇನ್ ಆಯಕ್ಷನ್
  • ಕ್ಲಾಡ್ 101
  • ಐ ಫ್ಲುಯೆನ್ಸಿ: ಫ್ರೇಮ್ ವರ್ಕ್ ಮತ್ತು ಫೌಂಡೇಶನ್ಸ್
  • ಬ್ಯೂಲ್ಡಿಂಗ್ ವಿತ್ ದಿ ಕ್ಲಾಡ್ ಎಪಿಐ
  • ಇಂಟ್ರೊಡಕ್ಷನ್ ಟು ಮಾಡಲ್ ಕಾಂಟೆಕ್ಸ್ಟ್ ಪ್ರೋಟೋಕಾಲ್
  • ಎಐ ಫ್ಲುಯೆನ್ಸಿ ಫಾರ್ ಎಜುಕೇಟರ್ಸ್
  • ಎಐ ಫ್ಲುಯೆನ್ಸಿ ಫಾರ್ ವಿದ್ಯಾರ್ಥಿಗಳು
  • ಮಾಡಲ್ ಕಾಂಟೆಕ್ಸ್ಟ್ ಪ್ರೋಟೋಕಾಲ್: ಅಡ್ವಾನ್ಸ್ಡ್ ಟಾಪಿಕ್ಸ್
  • ಕ್ಲಾಡ್ ವಿತ್ ಅಮೇಜಾನ್ ಬೆಡ್ರಾಕ್
  • ಕ್ಲಾಡ್ ವಿತ್ ಗೂಗಲ್ ಕ್ಲೌಡ್ಸ್ ವರ್ಟೆಕ್ಸ್ ಎಐ
  • ಟೀಚಿಂಗ್ ಎಐ ಫ್ಲುಯೆನ್ಸಿ
  • ಎಐ ಫ್ಲುಯೆನ್ಸಿ ಫಾರ್ ನಾನ್ ಪ್ರಾಫಿಟ್ಸ್
  • ಇನ್ ಟ್ರೊಡಕ್ಷನ್ ಟು ಏಜೆಂಟ್ ಸ್ಕಿಲ್ಸ್

ಇದನ್ನೂ ಓದಿ: 25,000 ರೂನಷ್ಟು ಕಡಿಮೆ ಸಂಬಳ ಇದ್ದರೆ ಹಣದ ನಿರ್ವಹಣೆ ಹೇಗಿರಬೇಕು? ಇಲ್ಲಿದೆ ಟಿಪ್ಸ್

ಕೋರ್ಸ್ ಆರಂಭಿಸುವುದು ಹೇಗೆ?

  • ಆಂಥ್ರೋಪಿಕ್ ಕೋರ್ಸ್‌ಗಳು ಈ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿವೆ: anthropic.skilljar.com/
  • ಇಲ್ಲಿ ನೊಂದಣಿ ಮಾಡಿಕೊಂಡು ಸೈನ್ ಇನ್ ಆಗಬೇಕು.
  • ಸೈನಪ್ ಆಗಲು ಇಮೇಲ್ ಇತ್ಯಾದಿಗಳನ್ನು ಕೇಳುವುದಿಲ್ಲ.
  • ಸೈನ್ ಆದ ಬಳಿಕ ನಿಮಗೆ ಬೇಕಾದ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡು ಕಲಿಯಲು ಪ್ರಾರಂಭಿಸಬಹುದು.

ಈ ಎಲ್ಲಾ ಕೋರ್ಸ್‌ಗಳು ಉಚಿತವಾಗಿ ಲಭ್ಯವಿರುತ್ತವೆ. ಪ್ರೀಮಿಯಂ ಸಬ್‌ಸ್ರಿಪ್ಷನ್‌ನ ಅಗತ್ಯ ಇರುವುದಿಲ್ಲ. ಕಲಿಕೆ ಮುಗಿದ ಬಳಿಕ ಡಿಜಿಟಲ್ ಸರ್ಟಿಫಿಕೇಟ್ ಸಿಗುತ್ತದೆ. ಇದನ್ನು ಲಿಂಕ್ ಇತ್ಯಾದಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಬಹುದು. ಈ ಮೂಲಕ ನಿಮಗೆ ಎಐ ಜ್ಞಾನವಿರುವುದನ್ನು ತೋರ್ಪಡಿಸಿಕೊಳ್ಳಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *