ಕೊನೆಗೂ ಮದುವೆಗೆ ರೆಡಿಯಾದ್ರಾ ಅನುಷ್ಕಾ ಶೆಟ್ಟಿ? 44ನೇ ವಯಸ್ಸಲ್ಲಿ ಸಿಕ್ತು ಬಿಗ್ ಟ್ವಿಸ್ಟ್!

ಕೊನೆಗೂ ಮದುವೆಗೆ ರೆಡಿಯಾದ್ರಾ ಅನುಷ್ಕಾ ಶೆಟ್ಟಿ? 44ನೇ ವಯಸ್ಸಲ್ಲಿ ಸಿಕ್ತು ಬಿಗ್ ಟ್ವಿಸ್ಟ್!



ಕೊನೆಗೂ ಮದುವೆಗೆ ರೆಡಿಯಾದ್ರಾ ಅನುಷ್ಕಾ ಶೆಟ್ಟಿ? 44ನೇ ವಯಸ್ಸಲ್ಲಿ ಸಿಕ್ತು ಬಿಗ್ ಟ್ವಿಸ್ಟ್!
ನಟಿ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಆಗಾಗ ಗಾಸಿಪ್‌ಗಳು ಕೇಳಿಬರುತ್ತಲೇ ಇರುತ್ತವೆ. ಆದರೆ ಈ ಬಾರಿ ಅವರ ಮದುವೆ ಬಗ್ಗೆ ಬಲವಾದ ಸುದ್ದಿಯೊಂದು ಹರಿದಾಡುತ್ತಿದೆ. ಉದ್ಯಮಿಯೊಬ್ಬರ ಜೊತೆ ಅವರ ಮದುವೆ ನಿಶ್ಚಯವಾಗಿದೆ ಎಂದು ಹೇಳಲಾಗುತ್ತಿದೆ.<img>ಸೌತ್ ಸಿನಿಮಾರಂಗದ ಲೇಡಿ ಸೂಪರ್‌ಸ್ಟಾರ್ ಅಂತಾನೇ ಫೇಮಸ್ ಆದವರು ನಟಿ ಅನುಷ್ಕಾ ಶೆಟ್ಟಿ. ಗ್ಲಾಮರ್ ಹಾಗೂ ನಟನೆ ಎರಡರಲ್ಲೂ ಅಭಿಮಾನಿಗಳನ್ನು ಇವರು ಗೆದ್ದಿದ್ದಾರೆ. ನಾಗಾರ್ಜುನ ನಟನೆಯ ‘ಸೂಪರ್’ ಚಿತ್ರದ ಮೂಲಕ ಅನುಷ್ಕಾ ಹೀರೋಯಿನ್ ಆಗಿ ಎಂಟ್ರಿ ಕೊಟ್ಟರು. ನಂತರ ಹಿಂತಿರುಗಿ ನೋಡಲೇ ಇಲ್ಲ. ‘ಅರುಂಧತಿ’, ‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಚಿತ್ರಗಳು ಅನುಷ್ಕಾ ಖ್ಯಾತಿಯನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ದವು.<img>ಅನುಷ್ಕಾಗೆ 44 ವರ್ಷ ವಯಸ್ಸಾದರೂ ಮದುವೆ ವಿಚಾರದಲ್ಲಿ ಮೌನವಾಗಿದ್ದರು. ಆದರೆ ಕೊನೆಗೂ ಅವರು ಮದುವೆ ಬಗ್ಗೆ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಅಧಿಕೃತವಾಗಿ ಘೋಷಿಸಿಲ್ಲವಾದರೂ, ಅನುಷ್ಕಾ ಕುಟುಂಬದವರು ಮದುವೆ ಸಂಬಂಧವೊಂದನ್ನು ನಿಶ್ಚಯಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.<img>ಅನುಷ್ಕಾ ಕೂಡ ಇನ್ನು ಮದುವೆ ಬಂಧನಕ್ಕೆ ಒಳಗಾಗಲು ನಿರ್ಧರಿಸಿದ್ದಾರಂತೆ. ಬೆಂಗಳೂರು ಮೂಲದ ಉದ್ಯಮಿಯೊಬ್ಬರ ಜೊತೆ ಶೀಘ್ರದಲ್ಲೇ ಅನುಷ್ಕಾ ಮದುವೆ ನಡೆಯಲಿದೆ ಎಂದು ತಿಳಿದುಬಂದಿದೆ. ಅನುಷ್ಕಾ ಕುಟುಂಬಕ್ಕೆ ಮತ್ತು ವರನ ಕುಟುಂಬಕ್ಕೆ ಮೊದಲೇ ಪರಿಚಯವಿದೆಯಂತೆ. ಹಾಗಾಗಿಯೇ ಈ ಸಂಬಂಧ ಕುದುರಿದೆ ಎಂದು ಸುದ್ದಿಯಾಗುತ್ತಿದೆ.<img>ಶೀಘ್ರದಲ್ಲೇ ಈ ವಿಚಾರವನ್ನು ಅನುಷ್ಕಾ ಕುಟುಂಬದವರು ಅಧಿಕೃತವಾಗಿ ತಿಳಿಸಲಿದ್ದಾರೆ. ಹುಡುಗನ ಪೂರ್ತಿ ವಿವರಗಳು ಇನ್ನೂ ತಿಳಿದುಬಂದಿಲ್ಲ. ಒಂದು ವೇಳೆ ಈ ಸಂಬಂಧ ನಿಕ್ಕಿಯಾದರೆ, ಕೆಲವೇ ಕೆಲವು ಸಂಬಂಧಿಕರ ಸಮ್ಮುಖದಲ್ಲಿ ಮದುವೆ ನಡೆಯುವ ಸಾಧ್ಯತೆ ಇದೆ ಎಂದು ಅನುಷ್ಕಾ ಆಪ್ತರು ಹೇಳುತ್ತಿದ್ದಾರೆ.<img>ಹಿಂದೆ ಅನುಷ್ಕಾ ಮದುವೆ ಬಗ್ಗೆ ಹಲವು ಬಾರಿ ಗಾಸಿಪ್‌ಗಳು ಹಬ್ಬಿದ್ದವು. ಅದರಲ್ಲೂ ಪ್ರಭಾಸ್ ಮತ್ತು ಅನುಷ್ಕಾ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಜೋರಾಗಿತ್ತು. ಆದರೆ ಆ ವದಂತಿಗಳನ್ನು ಅನುಷ್ಕಾ ತಳ್ಳಿಹಾಕಿದ್ದರು. ಪ್ರಭಾಸ್ ತನಗೆ ಒಳ್ಳೆಯ ಸ್ನೇಹಿತ ಎಂದು ಹೇಳಿದ್ದರು. 40ರ ಹರೆಯದಲ್ಲೂ ಮದುವೆ ಬಗ್ಗೆ ಮಾತನಾಡದ ಕಾರಣ, ಅವರ ಬಗ್ಗೆ ಆಗಾಗ ವದಂತಿಗಳು ಬರುತ್ತಲೇ ಇವೆ. ಆದರೆ ಈ ಬಾರಿ ಅನುಷ್ಕಾ ಮದುವೆ ಆಗುವುದು ಖಚಿತ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ.



Source link

Leave a Reply

Your email address will not be published. Required fields are marked *