Headlines

ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ನಟಿ ಅನುಷ್ಕಾ ಶೆಟ್ಟಿ

ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ನಟಿ ಅನುಷ್ಕಾ ಶೆಟ್ಟಿ


ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ನಟಿ ಅನುಷ್ಕಾ ಶೆಟ್ಟಿ

ಕಳೆದ ಕೆಲವು ದಿನಗಳಿಂದ ದಕ್ಷಿಣ ಭಾರತದ ಖ್ಯಾತ ನಟಿ, ‘ದೇವಸೇನಾ’ ಖ್ಯಾತಿಯ ಅನುಷ್ಕಾ ಶೆಟ್ಟಿ (ಅನುಷ್ಕಾ ಶೆಟ್ಟಿ) ಅವರ ಮದುವೆ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಅನುಷ್ಕಾ ಶೆಟ್ಟಿ ಮದುವೆಯ ಬಗ್ಗೆ ಹಲವಾರು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆಯಾದರೂ ಈ ಬಾರಿ ತುಸು ಗಟ್ಟಿಯಾಗಿಯೇ ಹರಿದಾಡುತ್ತಿದ್ದವು. ಅನುಷ್ಕಾ ಶೆಟ್ಟಿ ಅವರು ಮೂಲದ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇತ್ತು. ಆದರೆ ಇದೀಗ ಅನುಷ್ಕಾ ಶೆಟ್ಟಿ ಅವರ ತಂಡವು ಈ ಬಗ್ಗೆ ಸ್ಪಷ್ಟನೆ ನೀಡಿದೆ.

ಮದುವೆ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿರುವ ಅನುಷ್ಕಾ ಶೆಟ್ಟಿಯ ತಂಡ, ಈ ವದಂತಿ ಸುಳ್ಳೆಂದು ಸ್ಪಷ್ಟಪಡಿಸಿದೆ. ಮದುವೆಯ ಬಗ್ಗೆ ನಿರಂತರವಾಗಿ ಸುಳ್ಳು ಸುದ್ದಿಗಳು ಹರಡುತ್ತಿರುವ ಸಾಮಾಜಿಕ ಜಾಲತಾಣದ ಪುಟಗಳಿಗೆ ಎಚ್ಚರಿಕೆ ನೀಡಲಾಗಿದೆ. ‘ಯಾರದ್ದೋ ವೈಯಕ್ತಿಕ ಜೀವನವನ್ನು ದೈನಂದಿನ ಹೆಡ್‌ಲೈನ್ ಮಾಡುವ ಮೊದಲು ಅಧಿಕೃತ ದೃಢೀಕರಣಕ್ಕಾಗಿ ಕಾಯಿರಿ’ ಎಂದು ವಿನಂತಿಸಲಾಗಿದೆ. ವರದಿಗಳಲ್ಲಿ ಪದೇ ಪದೇ ಅನುಷ್ಕಾ ಅವರ ವಯಸ್ಸನ್ನು (44) ಹೈಲೈಟ್ ಮಾಡಲು ಸಹ ಅನುಷ್ಕಾ ಅವರ ತಂಡವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ‘ನಟರ ವಯಸ್ಸಿನ ಬಗ್ಗೆ ಚರ್ಚಿಸಿದ ಮಾಧ್ಯಮಗಳು, ನಟಿಯರ ವಿಷಯ ಬಂದಾಗ ಮಾತ್ರ ವಯಸ್ಸನ್ನು ವಿವಾದಾತ್ಮಕ ಎಂಬಂತೆ ಬಿಂಬಿಸುವುದು ಸರಿಯಲ್ಲ. ಇದು ಪರೋಕ್ಷವಾಗಿ ‘ಏಜ್ ಶೇಮಿಂಗ್’ ಮಾಡಿದಂತೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ವಿವಾಹ ವದಂತಿಗೆ ಸ್ಪಷ್ಟನೆ ಕೊಟ್ಟ ಅನುಷ್ಕಾ ಶೆಟ್ಟಿ

ಅನುಷ್ಕಾ ಅವರು ಯಾವಾಗಲೂ ತಮ್ಮ ಖಾಸಗಿ ಜೀವನವನ್ನು ಗೌಪ್ಯವಾಗಿಡಲು ಇಷ್ಟಪಡುತ್ತಾರೆ. ಮದುವೆ ಎಂಬುದು ಅತ್ಯಂತ ವೈಯಕ್ತಿಕ ವಿಷಯವಾಗಿದ್ದು, ಕೇವಲ ಲೈಕ್ಸ್ ಅಥವಾ ವ್ಯೂಸ್‌ಗಾಗಿ ಇಂತಹ ಸಂವೇದನಾಶೀಲ ಸುದ್ದಿಗಳು ಹರಡುವುದು ಸರಿಯಲ್ಲ ಎಂದು ಅನುಷ್ಕಾ ಅವರ ತಂಡ ಹೇಳಿದೆ. ಅನುಷ್ಕಾ ಅವರು ಸದ್ಯ ತಮ್ಮ ವೃತ್ತಿ ಜೀವನದ ಕಡೆಗೆ ಗಮನ ಹರಿಸುತ್ತಿದ್ದಾರೆ. ಅವರು ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ‘ಕಥನಾರ್: ದಿ ವೈಲ್ಡ್ ಸೋರ್ಸೆರರ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾರೆ.

ಬಹಳ ವರ್ಷಗಳಿಂದ ಅನುಷ್ಕಾ ಅವರ ಹೆಸರು ನಟ ಪ್ರಭಾಸ್ ಜೊತೆ ಕೇಳಿಬರುತ್ತಿತ್ತು. ಆದರೆ ಈ ಬಾರಿ ಬೆಂಗಳೂರಿನ ಉದ್ಯಮಿಯೊಬ್ಬರ ಜೊತೆ ಅವರ ಮದುವೆ ನಿಶ್ಚಯವಾಗಿದೆ ಎಂಬ ಹೊಸ ಸುದ್ದಿ ಹಬ್ಬಿತ್ತು. ಈ ಹಿಂದೆಯೂ 2020ರಲ್ಲಿ ಇಂತಹದೇ ವದಂತಿಗಳು ಕೇಳಿಬಂದಾಗ ಅನುಷ್ಕಾ ಅವರು, ‘ನನ್ನ ಮದುವೆಯನ್ನು ಯಾರು ಕೂಡ ಬಚ್ಚಿಡಲು ಸಾಧ್ಯವಿಲ್ಲ, ಸಮಯ ಬಂದಾಗ ನಾನೇ ತಿಳಿಸುತ್ತೇನೆ’ ಎಂದು ಹೇಳಿದ್ದರು. ಅನುಷ್ಕಾ ಶೆಟ್ಟಿ ನಟನೆಯ ‘ಘಾಟಿ’ ಸಿನಿಮಾ 2025 ರಲ್ಲಿ ಬಿಡುಗಡೆ ಆಗುತ್ತಿದೆ. ಆದರೆ ಆ ಸಿನಿಮಾ ಫ್ಲಾಪ್ ಆಯ್ತು. ಇದೀಗ ಅನುಷ್ಕಾ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *