ಕನ್ನಡತಿ, ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಬೆಂಗಳೂರಿನ ಉದ್ಯಮಿಯೊಬ್ಬರ ಜತೆ ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ. ಯಾರು ಆ ಲಕ್ಕಿ ಬಾಯ್?

ಟಾಲಿವುಡ್‌ನ ಸ್ವೀಟಿ, ಕನ್ನಡಿಗರ ಪ್ರೀತಿಯ ನಟಿ ಅನುಷ್ಕಾ ಶೆಟ್ಟಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಬಿಸಿಬಿಸಿ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. 44ನೇ ವಯಸ್ಸಿನಲ್ಲಿ ಅನುಷ್ಕಾ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಯಾರು ಆ ಲಕ್ಕಿ ಬಾಯ್?

ಇಷ್ಟು ದಿನ ಪ್ರಭಾಸ್ ಹೆಸರು ಕೇಳಿಬರುತ್ತಿತ್ತು, ಆದರೆ ಈಗ ಟ್ವಿಸ್ಟ್ ಸಿಕ್ಕಿದೆ! ಅನುಷ್ಕಾ ಅವರು ಬೆಂಗಳೂರಿನ ಖ್ಯಾತ ಉದ್ಯಮಿಯೊಬ್ಬರ ಜೊತೆ ವಿವಾಹವಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಮೂಲಕ ಬೆಂಗಳೂರಿನ ಸೊಸೆಯಾಗಲು ಅನುಷ್ಕಾ ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ.

ಕುಟುಂಬದವರ ಗ್ರೀನ್ ಸಿಗ್ನಲ್!

ಕೇವಲ ಪ್ರೀತಿಯಲ್ಲ, ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಮಾದರಿಯಂತೆ! ಉದ್ಯಮಿ ಮತ್ತು ಅನುಷ್ಕಾ ಮದುವೆಗೆ ಎರಡೂ ಕುಟುಂಬದವರು ಈಗಾಗಲೇ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದ್ದು, ಈ ವರ್ಷದ ಅಂತ್ಯದೊಳಗೆ ಶುಭ ಕಾರ್ಯ ನಡೆಯುವ ಸಾಧ್ಯತೆ ಇದೆ.

’ಬಾಹುಬಲಿ’ ಜೋಡಿ ಪ್ರಭಾಸ್ ಮತ್ತು ಅನುಷ್ಕಾ ಮದುವೆಯಾಗುತ್ತಾರೆ ಎಂಬ ವದಂತಿ ದಶಕದಿಂದ ಕೇಳಿಬರುತ್ತಿತ್ತು. ಆದರೆ, "ನಾವಿಬ್ಬರೂ ಕೇವಲ ಆತ್ಮೀಯ ಸ್ನೇಹಿತರು" ಎಂದು ಹೇಳುವ ಮೂಲಕ ಅನುಷ್ಕಾ ಆ ಎಲ್ಲಾ ಗಾಸಿಪ್‌ಗಳಿಗೆ ಬ್ರೇಕ್ ಹಾಕಿದ್ದರು.

ಸದ್ಯಕ್ಕಂತೂ ಮದುವೆ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಆದರೆ ನಟಿ ಅನುಷ್ಕಾ ಶೆಟ್ಟಿ ಅವರ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ. ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟಿಯ ಮದುವೆಯ ಅಧಿಕೃತ ಸುದ್ದಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.

44 ವರ್ಷದ ಅನುಷ್ಕಾ ಇದೇ ವರ್ಷದಲ್ಲಿ ಮದುವೆಯಾಗಲಿದ್ದಾರೆ. ಎರಡೂ ಕುಟುಂಬದವರು ಇದಕ್ಕೆ ಸಮ್ಮತಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಇದಕ್ಕೆ ನಟಿ ಯಾವುದೇ ಸ್ಪಷ್ಟನೆ ನೀಡಿಲ್ಲ.

Source link
Anushka Shetty: ಬೆಂಗಳೂರು ಉದ್ಯಮಿ ಕೈಹಿಡಿಯಲಿದ್ದಾರಾ ದೇವಸೇನಾ? ಅನುಷ್ಕಾ ಶೆಟ್ಟಿ ಮದುವೆ ಫಿಕ್ಸ್? ಯಾರು ಆ ಲಕ್ಕಿ ಬಾಯ್?