Headlines

Anushka Shetty: ಕೊನೆಗೂ ಮದುವೆಗೆ ರೆಡಿಯಾದ ಸ್ವೀಟಿ: 44ನೇ ವಯಸ್ಸಲ್ಲಿ ಬಿಗ್ ಟ್ವಿಸ್ಟ್, ಹುಡುಗ ಯಾರು ಗೊತ್ತಾ?

Anushka Shetty: ಕೊನೆಗೂ ಮದುವೆಗೆ ರೆಡಿಯಾದ ಸ್ವೀಟಿ: 44ನೇ ವಯಸ್ಸಲ್ಲಿ ಬಿಗ್ ಟ್ವಿಸ್ಟ್, ಹುಡುಗ ಯಾರು ಗೊತ್ತಾ?

Anushka Shetty: ಕೊನೆಗೂ ಮದುವೆಗೆ ರೆಡಿಯಾದ ಸ್ವೀಟಿ: 44ನೇ ವಯಸ್ಸಲ್ಲಿ ಬಿಗ್ ಟ್ವಿಸ್ಟ್, ಹುಡುಗ ಯಾರು ಗೊತ್ತಾ?

ನಟಿ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಆಗಾಗ ಗಾಸಿಪ್‌ಗಳು ಕೇಳಿಬರುತ್ತಲೇ ಇರುತ್ತವೆ. ಆದರೆ, ಈ ಬಾರಿ ಅವರ ಮದುವೆ ಬಗ್ಗೆ ಬಲವಾದ ಸುದ್ದಿಯೊಂದು ಹರಿದಾಡುತ್ತಿದೆ. ಉದ್ಯಮಿಯೊಬ್ಬರ ಜೊತೆ ಅನುಷ್ಕಾ ಮದುವೆ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ.

ಸೌತ್ ಸಿನಿಮಾರಂಗದ ಲೇಡಿ ಸೂಪರ್ ಸ್ಟಾರ್ ಅಂತಾನೇ ಫೇಮಸ್ ಆಗಿರುವ ನಟಿ ಅನುಷ್ಕಾ ಶೆಟ್ಟಿ. ಗ್ಲಾಮರ್ ಹಾಗೂ ನಟನೆ ಎರಡರಲ್ಲೂ ಅಭಿಮಾನಿಗಳನ್ನು ಇವರು ಗೆದ್ದಿದ್ದಾರೆ. ನಾಗಾರ್ಜುನ ನಟನೆಯ ‘ಸೂಪರ್’ ಚಿತ್ರದ ಮೂಲಕ ಹೀರೋಯಿನ್ ಆಗಿ ಎಂಟ್ರಿ ಕೊಟ್ಟರು. ಅರುಂಧತಿ, ಬಾಹುಬಲಿ 1 ಮತ್ತು ಬಾಹುಬಲಿ 2 ಚಿತ್ರಗಳು ಅನುಷ್ಕಾರನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಾಡಿದವು.

ಅನುಷ್ಕಾಗೆ 44 ವರ್ಷ ವಯಸ್ಸಾಗಿದ್ದರೂ ಮದುವೆ ಬಗ್ಗೆ ಮೌನವಾಗಿದ್ದರು. ಆದರೆ ಕೊನೆಗೂ ಅವರು ಮದುವೆ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ ಎನ್ನಲಾಗ್ತಿದೆ. ಅಧಿಕೃತವಾಗಿ ಇನ್ನೂ ಘೋಷಿಸಿಲ್ಲವಾದರೂ, ಅನುಷ್ಕಾ ಕುಟುಂಬದವರು ಮದುವೆ ಸಂಬಂಧವೊಂದನ್ನು ನಿಶ್ಚಯಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ವರ ಯಾರು ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಬೆಂಗಳೂರು ಮೂಲದ ಉದ್ಯಮಿಯೊಬ್ಬರ ಜೊತೆ ಅನುಷ್ಕಾ ಮದುವೆ ಶೀಘ್ರದಲ್ಲೇ ನಡೆಯಲಿದೆ ಎಂದು ತಿಳಿದುಬಂದಿದೆ. ಅನುಷ್ಕಾ ಕುಟುಂಬಕ್ಕೆ ಮತ್ತು ವರನ ಕುಟುಂಬಕ್ಕೆ ಮೊದಲೇ ಪರಿಚಯವಿದ್ದು, ಇದೇ ಕಾರಣಕ್ಕೆ ಈ ಸಂಬಂಧ ಕುದುರಿದೆ ಎಂದು ವರದಿಗಳು ಹೇಳುತ್ತಿವೆ.

ಈ ವಿಚಾರವನ್ನು ಅನುಷ್ಕಾ ಕುಟುಂಬದವರು ಶೀಘ್ರದಲ್ಲೇ ಅಧಿಕೃತವಾಗಿ ತಿಳಿಸಲಿದ್ದಾರೆ ಎನ್ನಲಾಗಿದೆ. ಹುಡುಗನ ಪೂರ್ಣ ವಿವರಗಳು ಇನ್ನೂ ತಿಳಿದುಬಂದಿಲ್ಲ. ಒಂದು ವೇಳೆ ಈ ಸಂಬಂಧ ಫಿಕ್ಸ್ ಆದರೆ, ಕೆಲವೇ ಕೆಲವು ಸಂಬಂಧಿಕರ ಸಮ್ಮುಖದಲ್ಲಿ ಮದುವೆ ನಡೆಯುವ ಸಾಧ್ಯತೆ ಇದೆ ಎಂದು ಅನುಷ್ಕಾ ಆಪ್ತರು ಹೇಳುತ್ತಿದ್ದಾರೆ.

ಅನುಷ್ಕಾ ಮದುವೆ ಬಗ್ಗೆ ಈ ಹಿಂದೆಯೂ ಹಲವು ಬಾರಿ ವದಂತಿಗಳು ಹಬ್ಬಿದ್ದವು. ಅದರಲ್ಲೂ ಪ್ರಭಾಸ್ ಮತ್ತು ಅನುಷ್ಕಾ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಹಬ್ಬಿತ್ತು. ಆದರೆ ಆ ವದಂತಿಗಳನ್ನು ಅನುಷ್ಕಾ ತಳ್ಳಿಹಾಕಿದ್ದರು. ಪ್ರಭಾಸ್ ತನ್ನ ಒಳ್ಳೆಯ ಸ್ನೇಹಿತ ಎಂದು ಹೇಳಿದ್ದರು. 40ರ ವಯಸ್ಸಿನಲ್ಲೂ ಅನುಷ್ಕಾ ಮದುವೆಯಾಗದ ಕಾರಣ, ಅವರ ಬಗ್ಗೆ ಆಗಾಗ ಗಾಸಿಪ್‌ಗಳು ಬರುತ್ತಲೇ ಇವೆ. ಆದರೆ ಈ ಬಾರಿ ಅನುಷ್ಕಾ ಮದುವೆ ಮಂಟಪ ಏರುವುದು ಖಚಿತ ಎನ್ನಲಾಗುತ್ತಿದೆ.

Source link

Leave a Reply

Your email address will not be published. Required fields are marked *