Headlines

Weekly Horoscope: ಏಪ್ರಿಲ್ ತಿಂಗಳ ಮೊದಲ ವಾರ ಯಾವ ರಾಶಿಗೆ ಶುಭ? ಯಾರಿಗೆ ಅಶುಭ?

Weekly Horoscope: ಏಪ್ರಿಲ್ ತಿಂಗಳ ಮೊದಲ ವಾರ ಯಾವ ರಾಶಿಗೆ ಶುಭ? ಯಾರಿಗೆ ಅಶುಭ?


ವಾರ ಭವಿಷ್ಯ: ಏಪ್ರಿಲ್ ತಿಂಗಳ ಮೊದಲ ವಾರ ಯಾವ ರಾಶಿಗೆ ಶುಭ? ಯಾರಿಗೆ ಅಶುಭ?

ಇದು 2026ರ ಏಪ್ರಿಲ್ ನ ಮೊದಲ ವಾರದಲ್ಲಿ ಸಾಲದ ಚಿಂತೆ, ನೆಂಟರ ಆಗಮನ, ಸಂಗಾತಿಯಿಂದ ಸಹಾಯಕತೆ, ಧಾರ್ಮಿಕ ನಂಬಿಕೆಗೆ ಹೆಚ್ಚು ಪ್ರಾಶಸ್ತ್ಯ ಸಿಗಲಿದೆ. ಸಿಗುವ ಗೌರವವನ್ನು ಕಾಳಜಿಯಿಂದ ಪಡೆಯುವ ಹೊಣೆಗಾರಿಕೆಯೂ ಈ ವಾರದ್ದು.

ಮೇಷ:

ಹೊಸ ಉದ್ಯೋಗ ಪ್ರಯತ್ನಕ್ಕೆ ಮನ್ನಣೆ ಸಿಗಲಿದೆ. ಕುಟುಂಬದಲ್ಲಿ ಶುಭ ಕಾರ್ಯದ ಚರ್ಚೆ ನಡೆಯಲಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಸೂಕ್ತ.

ವೃಷಭ:

ಭೂಮಿ ಅಥವಾ ವಾಹನ ಖರೀದಿ ಯೋಗವಿದೆ. ದೂರದ ಪ್ರಯಾಣದಿಂದ ಲಾಭದಾಯಕ. ಸಂಗಾತಿಯೊಂದಿಗೆ ಮಧುರ ಬಾಂಧವ್ಯ ವೃದ್ಧಿಸಲಿದೆ, ಹಿರಿಯರ ಆಶೀರ್ವಾದ ಬೆನ್ನಿಗಿರುತ್ತದೆ.

ಮಿಥುನ:

ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭವಿದೆ. ಹಳೆಯ ಸಾಲಗಳಿಂದ ಮುಕ್ತಿ ಪಡೆಯುವ ಕಾಲವಿದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಿಗಲಿದೆ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ.

ಕರ್ಕಾಟಕ:

ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಮನೆಯಲ್ಲಿ ಸಣ್ಣಪುಟ್ಟ ಕಲಹಗಳು ಉಂಟಾಗಬಹುದು, ತಾಳ್ಮೆಯಿಂದ ವರ್ತಿಸುವುದು ಉನ್ನತ ಫಲಿತಾಂಶವನ್ನು ನೀಡುತ್ತದೆ.

ಸಿಂಹ:

ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ಹೆಚ್ಚಾಗಲಿವೆ. ರಾಜಕೀಯ ವ್ಯಕ್ತಿಗಳಿಗೆ ಶುಭ ಕಾಲ. ಹೂಡಿಕೆಯಿಂದ ಲಾಭ ದೊರೆಯಲಿದೆ, ಆದರೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಕನ್ಯಾ:

ವೃತ್ತಿ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಸಂಗಾತಿಯ ಸಲಹೆಯು ಸಂಕಷ್ಟದಿಂದ ಪಾರು ಮಾಡಲಿದೆ. ಬೆನ್ನು ನೋವಿನಂತಹ ಸಣ್ಣ ಸಮಸ್ಯೆಗಳು ಕಾಡಬಹುದು, ವಿಶ್ರಾಂತಿ ಅಗತ್ಯ.

ತುಲಾ:

ಶತ್ರುಗಳ ಮೇಲೆ ಜಯ ಸಾಧಿಸುವಿರಿ. ದೇವತಾ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಸ್ಥಗಿತಗೊಂಡಿರುವ ಕಾಮಗಾರಿಗಳು ಪುನರಾರಂಭಗೊಳ್ಳಲಿವೆ. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕತೆಯಿರಲಿ.

ವೃಶ್ಚಿಕ:

ಮಾನಸಿಕ ನೆಮ್ಮದಿಗಾಗಿ ಪ್ರವಾಸ ಕೈಗೊಳ್ಳುವಿರಿ. ಆಪ್ತ ಸ್ನೇಹಿತರಿಂದ ನೆರವು ಸಿಗಲಿದೆ. ಕೃಷಿ ಚಟುವಟಿಕೆಯಲ್ಲಿ ನಿರತರಾದವರಿಗೆ ಉತ್ತಮ ಆದಾಯವಿದೆ. ಮೌನದಿಂದ ಕೆಟ್ಟ ಪರಿಸ್ಥಿತಿಗಳನ್ನು ನಿಭಾಯಿಸಿ.

ಧನು:

ಹೊಸ ವ್ಯವಹಾರ ಆರಂಭಿಸಲು ಸಕಾಲವಿದು. ವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಮನಸ್ಸಿಗೆ ಹರ್ಷ ತರಲಿದೆ.

ಮಕರ:

ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ವಿನಾಕಾರಣ ಬೇರೆಯವರ ಜಗಳದಲ್ಲಿ ಭಾಗವಹಿಸಬೇಡಿ. ಆಸ್ತಿ ವಿವಾದಗಳು ಸುಗಮವಾಗಿ ಬಗೆಹರಿಯುವ ಸಾಧ್ಯತೆಯಿದೆ. ತಾಯಿಯ ಆರೋಗ್ಯ ಸುಧಾರಿಸಲಿದೆ.

ಕುಂಭ:

ಮಾಡಿದ ಕೆಲಸಗಳಿಗೆ ಮನ್ನಣೆ ಸಿಗಲಿದೆ. ವಿದೇಶ ಪ್ರಯಾಣದ ಕನಸು ನನಸಾಗಬಹುದು. ಆರ್ಥಿಕ ಮುಗ್ಗಟ್ಟು ದೂರವಾಗಿ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ.

ಮೀನ:

ದೈಹಿಕ ವ್ಯಾಯಾಮದಿಂದ ಚೈತನ್ಯ ಸಿಗಲಿದೆ. ಕಳೆದುಹೋದ ವಸ್ತುಗಳು ಮರಳಿ ಪಡೆಯುವಿರಿ. ಪ್ರೇಮ ಜೀವನದಲ್ಲಿ ಯಶಸ್ಸು ಸಿಗಲಿದೆ. ಗುಪ್ತ ಶತ್ರುಗಳ ಬಗ್ಗೆ ಎಚ್ಚರವಿರಲಿ.

– ಲೋಹಿತ ಹೆಬ್ಬಾರ್ – 8762924271 (What’s app only)



Source link

Leave a Reply

Your email address will not be published. Required fields are marked *