ಈ ತಿಂಗಳಿನಲ್ಲಿ ಕುಂಭ ರಾಶಿಯವರ ಜಾತಕದಲ್ಲಿ ಗ್ರಹಗಳ ಸಂಚಾರವು ಅತ್ಯಂತ ರೋಚಕವಾಗಿದೆ, ಇದು ಸವಾಲು ಮತ್ತು ಅವಕಾಶಗಳ ಮಿಶ್ರಣವಾಗಿದೆ. ವಿಶೇಷವಾಗಿ ಈ ತಿಂಗಳಿನಲ್ಲಿ ಕುಂಭ ರಾಶಿಯ ಲಗ್ನದಲ್ಲಿ ಮಂಗಳ ಮತ್ತು ರಾಹುವಿನ ಸಂಯೋಗವಿಲ್ಲ, ಜೀವನದ ವೇಗ ಹೆಚ್ಚಾಗಲಿದೆ. ಪರಿವರ್ತನೆಯನ್ನು ಕಾಣುವ ಅವಕಾಶ ನಿಮ್ಮದು. ಯಾವ ಗ್ರಹರ ದಶೆ ಈ ತಿಂಗಳಿನಲ್ಲಿ ಉತ್ತಮ ಎಂದು ತಿಳಿದರೆ ಅದಕ್ಕೆ ಬೇಕಾದ ಪರಿಹಾರೋಪಾಯಗಳು ಲಭ್ಯ. ತೊಂದರೆಯನ್ನು ಆ ಮೂಲಕ ಕಡಿಮೆ ಮಾಡಿಕೊಳ್ಳಬಹುದು.
ಶುಭ ಫಲ
ಶುಕ್ರ:
ಮಾರ್ಚ್ ದ್ವಿತೀಯದಲ್ಲಿ ಶುಕ್ರನು ಮೀನ ರಾಶಿಯಲ್ಲಿ ಉಚ್ಚನಾಗುತ್ತಾನೆ. ಇದು ಧನ ಯೋಗವನ್ನು ಸೃಷ್ಟಿಸುತ್ತದೆ. ಆರ್ಥಿಕವಾಗಿ ಲಾಭ, ಕುಟುಂಬದಲ್ಲಿ ಸಂತೋಷ ಮತ್ತು ಸುಖ-ಭೋಗಗಳು ಹೆಚ್ಚಿನ ಸಮಯಕ್ಕೆ ಇದು ಅತ್ಯುತ್ತಮ ಸಮಯ.
ಗುರು:
ಗುರು ಗ್ರಹವು ನಿಮ್ಮ ರಾಶಿಯಿಂದ 5ನೇ ಮನೆಯಲ್ಲಿದ್ದು ನೇರ ಸಂಚಾರದಲ್ಲಿರುತ್ತಾನೆ. ಇದು, ಸಂತಾನ ಅಪೇಕ್ಷಿತರಿಗೆ ಮತ್ತು ಹೂಡಿಕೆದಾರರಿಗೆ ಉತ್ತಮ ಫಲವನ್ನು ನೀಡಿದೆ. ಬುದ್ಧಿಶಕ್ತಿ ತೀಕ್ಷ್ಣವಾಗಿರಲಿದೆ.
ಬುಧ:
ಮಾರ್ಚ್ ಮಧ್ಯಭಾಗದ ಅನಂತರ ಬುಧನು ನಿಮ್ಮ ರಾಶಿಯಲ್ಲಿ ನೇರವಾಗಿ ಸಂಚರಿಸುವುದರಿಂದ ಸಂವಹನ ಕಲೆ ಸುಧಾರಿಸುತ್ತದೆ ಮತ್ತು ವ್ಯಾಪಾರದಲ್ಲಿ ಲಾಭ ತರುತ್ತದೆ.
ಅಶುಭ
ಮಂಗಳ ಮತ್ತು ರಾಹು:
ನಿಮ್ಮ ರಾಶಿಯಲ್ಲಿ ಮಂಗಳ ಮತ್ತು ರಾಹುವಿನ ಯುತಿ ಅಂಗಾರಕ ಯೋಗಕ್ಕಾಗಿ. ಇದು ಅತಿಯಾದ ಆತುರ, ಕೋಪ ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ವಾಹನ ಚಾಲನೆಯಲ್ಲಿ ಜಾಗ್ರತೆ ಅಗತ್ಯ.
ಶನಿ:
ಸಾಡೇ ಸಾಥ್ ನ ಅಂತಿಮ ಹಂತದಲ್ಲಿ ಶನಿಯು ನಿಮ್ಮ ರಾಶಿಯಿಂದ 2ನೇ ಮನೆಯಲ್ಲಿ ಸಾಡೇ ಸಾತಿಯ ಅಂತಿಮ ಪ್ರಭಾವವಿರುತ್ತದೆ. ಇದು ಆರ್ಥಿಕ ಶಿಸ್ತನ್ನು ಮತ್ತು ಕಠಿಣ ಪರಿಶ್ರಮವನ್ನು ಬೇಡುತ್ತದೆ.
ಮಿಶ್ರ ಫಲಗಳು
ಸೂರ್ಯ:
ಮಾರ್ಚ್ 15 ರವರೆಗೆ ಸೂರ್ಯನು ನಿಮ್ಮ ರಾಶಿಯಲ್ಲಿರುತ್ತಾನೆ, ನಂತರ 2ನೇ ಮನೆಗೆ ಪ್ರವೇಶಿಸುತ್ತಾನೆ. ಇದು ಸರ್ಕಾರಿ ಕೆಲಸಗಳಲ್ಲಿ ಲಾಭವನ್ನು ನೀಡಿದರೂ, ಕಣ್ಣಿನ ಸಮಸ್ಯೆ ಅಥವಾ ತಲೆನೋವಿನಂತಹ ಆರೋಗ್ಯವನ್ನು ಕಿರಿಕಿರಿಗೊಳಿಸಬಹುದು.
ಚಂದ್ರಗ್ರಹಣ:
ತಿಂಗಳ ಆರಂಭದಲ್ಲೇ ಸಂಭವಿಸುವ ಚಂದ್ರಗ್ರಹಣವು ಮಾನಸಿಕವಾಗಿ ಸ್ವಲ್ಪ ಗೊಂದಲ ಉಂಟುಮಾಡಬಹುದು, ಆದರೆ ಆಧ್ಯಾತ್ಮಿಕ ಚಿಂತನೆಗೆ ಇದು ಪೂರಕವಾಗಿದೆ. ಮಂಗಳ ಮತ್ತು ರಾಹುವಿನ ಪ್ರಭಾವದಿಂದ ತಪ್ಪು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇರುತ್ತದೆ, ಆದ್ದರಿಂದ ಶಾಂತವಾಗಿರಿ. ಕೋಪಕ್ಕೆ ಆಸ್ಪದ ಬೇಡವೇ ಬೇಡ. ಮಂಗಳ ಮತ್ತು ಶನಿಯ ನಕಾರಾತ್ಮಕ ಪ್ರಭಾವವನ್ನು ತಗ್ಗಿಸಲು ಪ್ರತಿ ಶನಿವಾರ ಮತ್ತು ಮಂಗಳವಾರ ಹನುಮಂತನ ಆರಾಧನೆ ಮಾಡಿ. ಬಂದವರಿಗೆ ಕೆಂಪು ಬಣ್ಣದ ಹೊಸ ಬಟ್ಟೆಯನ್ನು ದಾನ ಮಾಡಿ. ಇದಂ ನ ಮಮ ಎಂಬ ಭಾವ ಇರಲಿ.
– ಲೋಹಿತ ಹೆಬ್ಬಾರ್