ಚಂದ್ರನ ಬಳಿ ಪ್ರಯಾಣ ನಡುವೆ ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ದೃಶ್ಯ ಸೆರೆ ಹಿಡಿದ ನಾಸಾ, ವಿಜ್ಞಾನಿಗಳ ತಂಡ ಆರ್ಟಮೆಸ್ 2 ಮೂಲಕ ಮಹತ್ತರ ಸಂಶೋಧನೆಯಲ್ಲಿ ತೊಡಗಿದ್ದಾರೆ. ಇದರ ನಡುವೆ ಭೂಮಿ ದೃಶ್ಯ ಕುತೂಹಲಕ್ಕೆ ಕಾರಣವಾಗಿದೆ.

ಬಾಹ್ಯಾಕಾಶದಿಂದ ಈಗಾಗಲೇ ನಾಸಾ, ಇಸ್ರೋ ಭೂಮಿಯ ಹಲವು ದೃಶ್ಯಗಳನ್ನು ಸೆರೆ ಹಿಡಿದಿದೆ. ಇದೀಗ ನಾಸಾದ ಆರ್ಟೆಮಿಸ್ 2 ನೌಕೆ ಮಹತ್ತರ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದೆ. ಚಂದಿರನ ಬಳಿಗೆ ತೆರಳಿರುವ ಈ ಗಗನಯಾತ್ರಿಗಳು ಬಾಹ್ಯಾಕಾಶದಿಂದ ಭೂಮಿ ದೃಶ್ಯ ಸೆರೆ ಹಿಡಿದು ಕಳುಹಿಸಿದ್ದಾರೆ. ಭೂಮಿಯ ಅದ್ಭುತ ಚಿತ್ರ ಕುತೂಹಲಕ್ಕೆ ಕಾರಣಾಗಿದೆ.

ಆರ್ಟೆಮಿಸ್ 2 ಮಿಷನ್ ಭಾಗವಾಗಿ ಗಗನಯಾತ್ರಿಗಳು ಒರಿಯನ್ ಕ್ಯಾಪ್ಸೂಲ್ ನೌಕೆಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ಎರಡು ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಮೊದಲ ಫೋಟೋದಲ್ಲಿ ಭೂಮಿಯ ಒಂದಷ್ಟು ಭಾಗ ಕಾಣಿಸುತ್ತಿರುವ ಫೋಟೋ ಇದಾಗಿದೆ. ಒರಿಯನ್ ನೌಕೆಯಿಂದ ಇಣುಕಿ ನೋಡಿದಾಗ ಭೂಮಿಯ ಒಂದು ಸಣ್ಣ ಭಾಗ ಕಾಣಿಸುವ ಫೋಟೋ ಇಧಾಗಿದೆ.

ಮತ್ತೊಂದು ಫೋಟೋದಲ್ಲಿ ಸಂಪೂರ್ಣ ಭೂಮಿಯ ಚಿತ್ರವಿದೆ. ನೀಲಿ ಬಣ್ಣದ ಭೂಮಿಯ ಮೇಲೆ ಬಿಳಿ ಮೋಡಗಳು ಆವೃತಗೊಂಡಿದೆ. ವಿಶಾಲದ ಪ್ರದೇಶವೂ ಗೋಚರಿಸುತ್ತಿದೆ. ಕೆಲೆವೆಡೆ ಹಸಿರು ಹಾಗೂ ಬಹುತೇಕ ಭಾಗ ನೀಲಿ ಬಣ್ಣದಿಂದ ಕೂಡಿದೆ. ಭೂಮಿಯ ಈ ದೃಶ್ಯ ಸಂಶೋಧಕರಿಗೂ ಅಧ್ಯಯನಕ್ಕೆ ಮಹತ್ವದ ದಾಖಲೆಯಾಗಿದೆ.

ಈ ಕುರಿತ ಅನುಭವವನ್ನು ನಾಸಾ ಗಗನಯಾತ್ರಿಗಳು ಹಂಚಿಕೊಂಡಿದ್ದಾರೆ. ಮಿಷನ್ ಕಮಾಂಡರ್ ರೀಡ್ ವೈಸ್‌ಮನ್ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಮನೆ ಭೂಮಿಯನ್ನು ಇಷ್ಟು ಎತ್ತರಿಂದ ನೋಡುತ್ತಿದ್ದೇವೆ. ಸೂರ್ಯನ ಬೆಳಕಿನಲ್ಲಿ ಭೂಮಿ ಮಿನುಗುತ್ತಿರುವುದು ಅತ್ಯಂತ ಸುಂದರವಾಗಿ ಕಾಣಿಸುತ್ತಿದೆ ಎಂದಿದ್ದಾರೆ.

ಆರ್ಟೆಮಿಸ್ 2 ಮಿಷನ್ ಗಗನಯಾನ ಸುಮಾರು 10 ದಿನಗಳ ಕಾಲ ನಡೆಯಲಿದೆ. ಏಪ್ರಿಲ್ 1 ರಂದು ನಾಲ್ಕು ಗಗನಯಾತ್ರಿಗಳ ನಾಸಾ ತಂಡ ಬಾಹ್ಯಾಕಾಶ ಪ್ರಯಾಣ ಬೆಳೆಸಿದೆ. ಚಂದ್ರನ ಹತ್ತಿರಕ್ಕೆ ತೆರಳಿ ಪ್ರದಕ್ಷಿಣೆ ಹಾಕಿ ಮರಳಲಿದ್ದಾರೆ. ಚಂದ್ರನ ಮೇಲೆ ಈ ತಂಡ ಇಳಿಯುತ್ತಿಲ್ಲ. ಶೀಘ್ರದಲ್ಲೇ ಚಂದ್ರನ ಹತ್ತಿರದ ಫೋಟೋಗಳನ್ನು ಈ ತಂಡ ಕಳುಹಿಸಲಿದೆ.

Source link
ಚಂದ್ರನ ಬಳಿ ಪ್ರಯಾಣ ನಡುವೆ ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ದೃಶ್ಯ ಸೆರೆ ಹಿಡಿದ ನಾಸಾ