ಲಕ್ಕುಂಡಿ ಚಿನ್ನದ ನಿಧಿ ಪ್ರಕರಣಕ್ಕೆ ಭಾರಿ ಟ್ವಿಸ್ಟ್​: ಇದು ಎಂಟು ಕೋಟಿಯ ರಹಸ್ಯ! 2 ತಿಂಗಳ ಬಳಿಕ ನಡೆದದ್ದೇನು? | Lakkundi Gold Case New Demand From Ritti Family For Giving One 5th Of Money In 8 Crores Suc

ಲಕ್ಕುಂಡಿ ಚಿನ್ನದ ನಿಧಿ ಪ್ರಕರಣಕ್ಕೆ ಭಾರಿ ಟ್ವಿಸ್ಟ್​: ಇದು ಎಂಟು ಕೋಟಿಯ ರಹಸ್ಯ! 2 ತಿಂಗಳ ಬಳಿಕ ನಡೆದದ್ದೇನು? | Lakkundi Gold Case New Demand From Ritti Family For Giving One 5th Of Money In 8 Crores Suc



ಲಕ್ಕುಂಡಿ ಚಿನ್ನದ ನಿಧಿ ಪ್ರಕರಣಕ್ಕೆ ಭಾರಿ ಟ್ವಿಸ್ಟ್​: ಇದು ಎಂಟು ಕೋಟಿಯ ರಹಸ್ಯ! 2 ತಿಂಗಳ ಬಳಿಕ ನಡೆದದ್ದೇನು? | Lakkundi Gold Case New Demand From Ritti Family For Giving One 5th Of Money In 8 Crores Suc

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕಿದ್ದ ಚಿನ್ನದ ನಿಧಿಯ ಮೌಲ್ಯ 8 ಕೋಟಿ ಎಂದು ತಜ್ಞರು ಅಂದಾಜಿಸಿದ್ದಾರೆ. ಪ್ರಾಮಾಣಿಕವಾಗಿ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದ ರಿತ್ತಿ ಕುಟುಂಬ, ಇದೀಗ ಕಾನೂನಿನ ಪ್ರಕಾರ ಹೊಸ ಬೇಡಿಕೆ ಇಟ್ಟಿದ್ದಾರೆ. ಏನದು?

ಎರಡು ತಿಂಗಳ ಹಿಂದೆ ಗದಗ ಜಿಲ್ಲೆಯ ಲಕ್ಕುಂಡಿ ಸಕತ್​ ಸದ್ದು ಮಾಡಿತ್ತು. ಇಲ್ಲಿ ಪ್ರಜ್ವಲ್ ರಿತ್ತಿ ಅವರ ಮನೆಯ ಕೆಲಸವನ್ನು ಮಾಡುವ ಸಂದರ್ಭದಲ್ಲಿ ಚಿನ್ನದ ನಿಧಿಯೇ ಸಿಕ್ಕಿತ್ತು. ಅಂದಿನಿಂದ ಲಕ್ಕುಂಡಿ ಕರ್ನಾಟಕ ಮಾತ್ರವಲ್ಲದೇ ಕರ್ನಾಟಕದ ಹೊರಗೂ ಸಕತ್​ ಸೌಂಡ್​ ಮಾಡುತ್ತಲೇ ಇದೆ. ಈಗಲೂ ಲಕ್ಕುಂಡಿಗೆ ಬೇರೆ ಬೇರೆ ಭಾಗಗಳಿಂದ ಜನರು ಬರುತ್ತಲೇ ಇದ್ದಾರೆ. ಎರಡು ತಿಂಗಳಿನಿಂದ ತುಂಬಾ ಸದ್ದು ಮಾಡಿದ್ದ ಲಕ್ಕುಂಡಿ ಸದ್ಯ ಮೌನವಾಗಿತ್ತು. ಆದರೆ ಇದೀಗ ಮತ್ತೆ ಪುಟಿದೆದ್ದಿದೆ. ಇದಕ್ಕೆ ಕಾರಣ, 8 ಕೋಟಿಯ ರಹಸ್ಯ! ಈ ನಿಧಿ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ಸಿಕ್ಕಿರುವುದೇ ಇದಕ್ಕೆ ಕಾರಣ.

ಸಿಕ್ಕಿದ್ದೆಷ್ಟು?

ಅಷ್ಟಕ್ಕೂ ಆಗಿದ್ದು ಏನೆಂದರೆ, ಇಲ್ಲಿ ಸಿಕ್ಕಿರುವ ಚಿನ್ನಾಭರಣಗಳು ಮತ್ತು ಇತರ ಸಾಮಗ್ರಿಗಳ ಬೆಲೆಯನ್ನು ಕಂಡುಹಿಡಿಯಲು ನೇಮಕ ಮಾಡಿರುವ ತಜ್ಞರು ಇದು ಸುಮಾರು 8 ಕೋಟಿ ಬೆಲೆ ಬಾಳುವಂಥದ್ದು ಎಂದು ವರದಿ ಕೊಟ್ಟಿದ್ದಾರೆ. ಇಲ್ಲಿಯವರೆಗೆ ಅದರ ನಿಖರ ಬೆಲೆ ತಿಳಿದಿರಲಿಲ್ಲ. ಅಷ್ಟಕ್ಕೂ ರಿತ್ತಿ ಕುಟುಂಬಕ್ಕೆ ಸಿಕ್ಕಿದ್ದು ಸುಮಾರು 466 ಗ್ರಾಂ ತೂಕದ ಪುರಾತನ ಚಿನ್ನದ ಆಭರಣಗಳು ಮತ್ತು ಇತರ 22 ವಸ್ತುಗಳು. ಅವುಗಳನ್ನು ಸಂಪೂರ್ಣವಾಗಿ ಸರ್ಕಾರದ ವಶಕ್ಕೆ ಕೊಟ್ಟಿತ್ತು ಕುಟುಂಬ. ಪ್ರಾಮಾಣಿಕವಾಗಿ ಮೆರೆದಿದ್ದರು ಅವರು. ಅದರ ಬಳಿಕ ಲಕ್ಕುಂಡಿ ಗ್ರಾಮದ ಇತಿಹಾಸದ ಬಗ್ಗೆ ಸಂಶೋಧನೆಗಳೇ ನಡೆದವು. ಆ ಚಿನ್ನಾಭರಣಗಳನ್ನು ಪರಿಶೀಲನೆ ಮಾಡಿದಾಗ, ಅವು ಸುಮಾರು 500-600 ವರ್ಷಗಳಷ್ಟು ಹಳೆಯದ್ದು ಎಂದು ಕಂಡು ಹಿಡಿಯಲಾಗಿದೆ. ಇದು ವಿಜಯನಗರ ಅಥವಾ ಚಾಲುಕ್ಯ ಕಾಲದ್ದು ಎನ್ನುವುದು ತಿಳಿದುಬಂದಿದೆ.

8 ಕೋಟಿಯ ಅಂದಾಜು

ಇದೀಗ ಅದರ ಮೌಲ್ಯಮಾಪನ ಮಾಡಿದಾಗ ಈ ಆ್ಯಂಟಿಕ್ ಆಭರಣಗಳು ಸುಮಾರು 8 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಆದ್ದರಿಂದ ಇದೀಗ ರಿತ್ತಿ ಕುಟುಂಬ ತಜ್ಞರು ವ್ಯಕ್ತಪಡಿಸಿದ ಬೆಲೆಯಲ್ಲಿ ನಮಗೆ ಒಂದು ಭಾಗ ಬೇಕು. 8 ಕೋಟಿ ಮೊತ್ತದಲ್ಲಿ ಐದರ ಒಂದು ಭಾಗ ತಮಗೆ ಬೇಕು ಎಂದು ಕೇಳುತ್ತಿದ್ದಾರೆ. ಅಷ್ಟಕ್ಕೂ ಕಾನೂನಿನ ಅಡಿಯಲ್ಲಿಯೂ ಕೆಲವೊಂದು ಅವಕಾಶಗಳು ಇವೆ. ನಿಧಿಯ ಬಗ್ಗೆ ಕೆಲವೊಂದು ನಿಯಮಗಳು ಇದ್ದು, ಕೆಲವು ಸಂದರ್ಭಗಳಲ್ಲಿ ಸಂಪೂರ್ಣ ಚಿನ್ನಾಭರಣ ಯಾರಿಗೆ ಸಿಕ್ಕಿದೆಯೋ ಅವರ ಪಾಲಾಗುತ್ತದೆ ಎಂದು ಇದ್ದರೆ, ಕೆಲವು ಸಂದರ್ಭಗಳಲ್ಲಿ ಇಷ್ಟು ಪಾಲನ್ನು ಅವರಿಗೆ ನೀಡಬೇಕು ಎಂದು ಇದೆ. ಈಗ ನಮಗೆ ಐದರ ಒಂದು ಭಾಗ ಬೇಕು ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.

ಪ್ರಾಮಾಣಿಕ ಕೆಲಸ ಮಾಡಿದ್ದೇವೆ

ನಾವು ಪ್ರಾಮಾಣಿಕವಾಗಿ ಭೂಮಿಯಲ್ಲಿ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದೇವೆ. ಈಗ ಸರ್ಕಾರ ಕೂಡ ಪ್ರಾಮಾಣಿಕವಾಗಿ ನಮಗೆ ಇಷ್ಟು ಹಣವನ್ನು ನೋಡಬೇಕು. ಐದರಲ್ಲಿ ಒಂದು ಭಾಗ ಎಂದರೆ ಸುಮಾರು 1.6 ಕೋಟಿ ರೂಪಾಯಿ ನೀಡಬೇಕು. ಈಗಿನ ಬೆಲೆಗೆ ನಾವು ಅದನ್ನು ಒಪ್ಪಲ್ಲ, ಆ್ಯಂಟಿಕ್ ಮೌಲ್ಯ ಎಷ್ಟಿದೆಯೋ ಅಷ್ಟೇ ಬೇಕು ಎಂದಿದ್ದಾರೆ. ಏಕೆಂದರೆ, ಇದು ಆ್ಯಂಟಿಕ್​ ಪೀಸ್ ಆಗಿರುವುದರಿಂದ ಇದರ ಮೌಲ್ಯ 8-10 ಪಟ್ಟು ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಸರ್ಕಾರ, ಈ ಹಿಂದೆ ನೀಡಿದ್ದ ಭರವಸೆಯಂತೆ ಮನೆ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನವನ್ನು ರಿಕ್ತಿ ಕುಟುಂಬಕ್ಕೆ ಮುಂಜೂರು ಮಾಡಿದೆ. ಈಗ ಈ ಹೊಸ ಬೇಡಿಕೆಯನ್ನು ಕುಟುಂಬ ಮುಂದಿಟ್ಟಿದೆ.



Source link

Leave a Reply

Your email address will not be published. Required fields are marked *