ನಟಿ ಅನುಪಮಾ ಪರಮೇಶ್ವರನ್ ನಟನೆಯ ‘ಲಾಕ್‌ಡೌನ್’ ಸಿನಿಮಾ ಥಿಯೇಟರ್‌ಗೆ ಬಂದ ಎರಡು ತಿಂಗಳ ನಂತರ ಈಗ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಪ್ರೈಮ್ ವಿಡಿಯೋದಲ್ಲಿ ಈ ಚಿತ್ರ ಸ್ಟ್ರೀಮ್ ಆಗುತ್ತಿದೆ.
ನಟಿ ಅನುಪಮಾ ಪರಮೇಶ್ವರನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಲಾಕ್‌ಡೌನ್’ ಸಿನಿಮಾ ಈಗ ಓಟಿಟಿಗೆ ಬಂದಿದೆ. ಹೊಸ ನಿರ್ದೇಶಕ ಎ.ಆರ್. ಜೀವ ಈ ಚಿತ್ರವನ್ನು ನಿರ್ದೇಶಿಸಿದ್ದು, ಇದೊಂದು ಭಾವನಾತ್ಮಕ ಕಥೆಯಾಗಿದೆ. ಜನವರಿ 30 ರಂದು ಈ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುಭಾಸ್ಕರನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಭಯ, ಶಕ್ತಿ ಮತ್ತು ಬದುಕುಳಿಯುವಿಕೆಯ ಬಗ್ಗೆ ಈ ಸಿನಿಮಾ ಮಾತನಾಡಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಈಗ ‘ಲಾಕ್‌ಡೌನ್’ ಸಿನಿಮಾ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
ಈ ಚಿತ್ರಕ್ಕೆ ಕೆ.ಎ. ಶಕ್ತಿವೇಲ್ ಕ್ಯಾಮರಾ ವರ್ಕ್ ಮಾಡಿದ್ದು, ಎನ್.ಆರ್. ರಘುನಾಥನ್ ಮತ್ತು ಸಿದ್ಧಾರ್ಥ್ ವಿಪಿನ್ ಸಂಗೀತ ಸಂಯೋಜಿಸಿದ್ದಾರೆ. ಅನುಪಮಾ ಜೊತೆಗೆ ಚಾರ್ಲಿ, ನಿರೋಷಾ, ಪ್ರಿಯಾ ವೆಂಕಟ್, ಲಿವಿಂಗ್‌ಸ್ಟನ್, ಇಂದುಮತಿ, ರಾಜ್‌ಕುಮಾರ್, ಶಾಂಜಿ, ಲೊಲ್ಲು ಸಭಾ ಮಾರನ್, ವಿನಾಯಕ್ ರಾಜ್, ವಿಧು, ಅಭಿರಾಮಿ, ರೇವತಿ, ಸಂಜೀವ್, ಪ್ರಿಯಾ ಗಣೇಶ್ ಮತ್ತು ಆಶಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

ಚಿತ್ರದ ಇತರ ತಾಂತ್ರಿಕ ವರ್ಗದ ಬಗ್ಗೆ ಹೇಳುವುದಾದರೆ, ವಿ.ಜೆ. ಸಾಜು ಜೋಸೆಫ್ ಎಡಿಟಿಂಗ್, ಎ. ಜಯಕುಮಾರ್ ಕಲಾ ನಿರ್ದೇಶನ, ಶರೀಫ್ ಮತ್ತು ಶ್ರೀ ಗಿರೀಶ್ ನೃತ್ಯ ನಿರ್ದೇಶನ, ಓಂ ಶಿವಪ್ರಕಾಶ್ ಸಾಹಸ ನಿರ್ದೇಶನ ಮಾಡಿದ್ದಾರೆ. ಮೀನಾಕ್ಷಿ ಶ್ರೀಧರನ್ ಕಾಸ್ಟ್ಯೂಮ್ ಡಿಸೈನರ್ ಆಗಿ, ಎಂ. ರಾಮಕೃಷ್ಣನ್ ವಸ್ತ್ರ ವಿನ್ಯಾಸ, ಪಿ.ಎಸ್. ಚಂದ್ರು ಮೇಕಪ್ ಮತ್ತು ಅರುಣ್ ಎಂ. ಎಸ್‌ಎಫ್‌ಎಕ್ಸ್ ನೋಡಿಕೊಂಡಿದ್ದಾರೆ. ಟಿ. ಉದಯ ಕುಮಾರ್ ಸೌಂಡ್ ಮಿಕ್ಸ್ ಮಾಡಿದ್ದು, ಪಿಕ್ಸೆಲ್ ಲೈಟ್ ಸ್ಟುಡಿಯೋದಲ್ಲಿ ಡಿಐ ಕೆಲಸ ನಡೆದಿದೆ. ಲೈಕಾ ಮ್ಯೂಸಿಕ್ ಮೂಲಕ ಆಡಿಯೋ ಬಿಡುಗಡೆಯಾಗಿದೆ.
ಬೇರೆ ಭಾಷೆಗಳಲ್ಲೇ ಹೆಚ್ಚು ಸಕ್ರಿಯ
ಅಂದಹಾಗೆ, ಅನುಪಮಾ ಪರಮೇಶ್ವರನ್ ಅವರು ಮಲಯಾಳಂನ ಸೂಪರ್‌ಹಿಟ್ ‘ಪ್ರೇಮಂ’ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು. ಅದರಲ್ಲಿ ಅವರು ‘ಮೇರಿ’ ಪಾತ್ರಕ್ಕೆ ಜೀವ ತುಂಬಿದ್ದರು. ನಂತರ ಮಲಯಾಳಂಗಿಂತ ಹೆಚ್ಚಾಗಿ ಬೇರೆ ಭಾಷೆಗಳಲ್ಲೇ ಅವರು ಹೆಚ್ಚು ಸಕ್ರಿಯರಾದರು. ‘ಡ್ರ್ಯಾಗನ್’, ‘ಬೈಸನ್ ಕಾಲಮಾಡನ್’ ನಂತಹ ತಮಿಳು ಚಿತ್ರಗಳಲ್ಲಿನ ಅವರ ನಟನೆಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು.