ಸುವರ್ಣ ಗೃಹಮಂತ್ರಿ ಸೀಸನ್ 3 ಶುರು: ಗೃಹಿಣಿಯರು ಮಾತ್ರವಲ್ಲ, ವಾಹಿನಿ ತಾರೆಯರೂ ಸೇರಿ ಮಸ್ತ್ ಮಜಾ ಜಮಾಯಿಸಲಿದ್ದಾರೆ! | Star Suvarna Famous Show Suvarna Gruhamantri Season 3 To Start Soon With Special Look

ಸುವರ್ಣ ಗೃಹಮಂತ್ರಿ ಸೀಸನ್ 3 ಶುರು: ಗೃಹಿಣಿಯರು ಮಾತ್ರವಲ್ಲ, ವಾಹಿನಿ ತಾರೆಯರೂ ಸೇರಿ ಮಸ್ತ್ ಮಜಾ ಜಮಾಯಿಸಲಿದ್ದಾರೆ! | Star Suvarna Famous Show Suvarna Gruhamantri Season 3 To Start Soon With Special Look



ಸುವರ್ಣ ಗೃಹಮಂತ್ರಿ ಸೀಸನ್ 3 ಶುರು: ಗೃಹಿಣಿಯರು ಮಾತ್ರವಲ್ಲ, ವಾಹಿನಿ ತಾರೆಯರೂ ಸೇರಿ ಮಸ್ತ್ ಮಜಾ ಜಮಾಯಿಸಲಿದ್ದಾರೆ! | Star Suvarna Famous Show Suvarna Gruhamantri Season 3 To Start Soon With Special Look

ನಿಮ್ಮ ಮನೆಯ ನೆಚ್ಚಿನ ಸೊಸೆಯಂದಿರು ಅಥವಾ ಮಗಳಂತಿರುವ ಧಾರಾವಾಹಿ ಕಲಾವಿದರು ಮತ್ತು ಗೃಹಿಣಿಯರ ನಡುವೆ ಭರ್ಜರಿ ಜಟಾಪಟಿ ಮತ್ತು ಆಟ-ತುಂಟಾಟಗಳು ನಡೆಯಲಿವೆ. ಮೊದಲ ಸಂಚಿಕೆಯಲ್ಲೇ ‘ಆಸೆ’ ಧಾರಾವಾಹಿಯ ಖ್ಯಾತ ನಟಿ ಮೀನಾ ಅವರು ಭಾಗವಹಿಸಿ, ಗೃಹಿಣಿಯರ ಜೊತೆ ಮೋಜು-ಮಸ್ತಿ ಮಾಡಲಿದ್ದಾರೆ.

ಸುವರ್ಣ ಗೃಹಮಂತ್ರಿ ಸೀಸನ್ 3: ಗೃಹಿಣಿಯರ ಜೊತೆ ಮಸ್ತ್ ಮಜಾ ಮಾಡಲು ಬರ್ತಿದ್ದಾರೆ ವಾಹಿನಿಯ ತಾರೆಯರು!

ಕರ್ನಾಟಕದ ಪ್ರತಿ ಮನೆಯ ಮನಗೆದ್ದಿರುವ, ಗೃಹಿಣಿಯರ ನೆಚ್ಚಿನ ರಿಯಾಲಿಟಿ ಶೋ ‘ಸುವರ್ಣ ಗೃಹಮಂತ್ರಿ’ ಈಗ ಹೊಸ ಮೆರುಗಿನೊಂದಿಗೆ ಮರಳಿ ಬರುತ್ತಿದೆ. ಸ್ಟಾರ್ ಸುವರ್ಣ ವಾಹಿನಿಯ ಈ ಜನಪ್ರಿಯ ಕಾರ್ಯಕ್ರಮವು ಈಗಾಗಲೇ ನಟ ರವಿಶಂಕರ್ ಗೌಡ ನಿರೂಪಣೆಯಲ್ಲಿ ಎರಡು ಯಶಸ್ವಿ ಸೀಸನ್‌ಗಳನ್ನು ಪೂರೈಸಿ, ಬರೋಬ್ಬರಿ 700 ಸಂಚಿಕೆಗಳ ಹೊಸ್ತಿಲಲ್ಲಿದೆ. ಈಗ ಸೀಸನ್ 3ರಲ್ಲಿ ವೀಕ್ಷಕರಿಗೆ ಡಬಲ್ ಮನರಂಜನೆ ನೀಡಲು ಚಿತ್ರತಂಡ ಸಜ್ಜಾಗಿದೆ.

ಈ ಬಾರಿ ಶೋನಲ್ಲಿ ಬಿಗ್ ಟ್ವಿಸ್ಟ್!

ಈ ಬಾರಿಯ ‘ಸುವರ್ಣ ಗೃಹಮಂತ್ರಿ’ ಕೇವಲ ಗೃಹಿಣಿಯರ ಆಟಕ್ಕೆ ಸೀಮಿತವಾಗಿಲ್ಲ. ಇದರಲ್ಲಿ ಒಂದು ರೋಚಕ ಬದಲಾವಣೆ ಮಾಡಲಾಗಿದೆ. ಹೌದು, ಈ ಹೊಸ ಸೀಸನ್‌ನಲ್ಲಿ ಸಾಮಾನ್ಯ ಗೃಹಿಣಿಯರ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯ ನೆಚ್ಚಿನ ತಾರೆಯರೂ ಭಾಗವಹಿಸಲಿದ್ದಾರೆ. ಅಂದರೆ, ನಿಮ್ಮ ಮನೆಯ ನೆಚ್ಚಿನ ಸೊಸೆಯಂದಿರು ಅಥವಾ ಮಗಳಂತಿರುವ ಧಾರಾವಾಹಿ ಕಲಾವಿದರು ಮತ್ತು ಗೃಹಿಣಿಯರ ನಡುವೆ ಭರ್ಜರಿ ಜಟಾಪಟಿ ಮತ್ತು ಆಟ-ತುಂಟಾಟಗಳು ನಡೆಯಲಿವೆ. ಮೊದಲ ಸಂಚಿಕೆಯಲ್ಲೇ ‘ಆಸೆ’ ಧಾರಾವಾಹಿಯ ಖ್ಯಾತ ನಟಿ ಮೀನಾ ಅವರು ಭಾಗವಹಿಸಿ, ಗೃಹಿಣಿಯರ ಜೊತೆ ಮೋಜು-ಮಸ್ತಿ ಮಾಡಲಿದ್ದಾರೆ.

ಗೃಹಿಣಿಯರಿಗೆ ಸಿಗಲಿದೆ ರಾಜಮರ್ಯಾದೆ:

ಈ ಕಾರ್ಯಕ್ರಮವು ಕೇವಲ ಆಟವಲ್ಲ, ಇದು ಕುಟುಂಬದ ಜೀವಾಳವಾಗಿರುವ ಗೃಹಿಣಿಯರಿಗೆ ನೀಡುವ ಗೌರವ. ಬೆಳ್ಳಂಬೆಳಿಗ್ಗೆಯಿಂದ ರಾತ್ರಿಯವರೆಗೆ ತನ್ನವರಿಗಾಗಿ ಶ್ರಮಿಸುವ, ತನ್ನ ಆಸೆ-ಆಕಾಂಕ್ಷೆಗಳನ್ನು ಬದಿಗಿಟ್ಟು ಮನೆ ಬೆಳಗುವ ದೀಪದಂತಿರುವ ಗೃಹಿಣಿಯರನ್ನು ‘ರಾಣಿ ಸೀಟ್’ ಮೇಲೆ ಕುಳ್ಳಿರಿಸಿ, ಅವರಿಗೆ ಗೌರವ ಸಮರ್ಪಿಸುವ ಸುಂದರ ವೇದಿಕೆ ಇದು. ಈ ಶೋ ಮೂಲಕ ಕರ್ನಾಟಕದ ಮೂಲೆ ಮೂಲೆಗೂ ಭೇಟಿ ನೀಡುವ ತಂಡ, ಅಲ್ಲಿನ ಪ್ರತಿಭಾನ್ವಿತ ಗೃಹಿಣಿಯರ ಪರಿಚಯ ಮಾಡಿಕೊಡುತ್ತಿದೆ.

ಅಣ್ಣನ ಸ್ಥಾನದಲ್ಲಿ ರವಿಶಂಕರ್ ಗೌಡ:

ಈ ಕಾರ್ಯಕ್ರಮದ ಯಶಸ್ಸಿನ ಹಿಂದಿರುವ ಪ್ರಮುಖ ಶಕ್ತಿ ಎಂದರೆ ಅದು ನಟ ರವಿಶಂಕರ್ ಗೌಡ. ಅವರ ಹಾಸ್ಯಭರಿತ ನಿರೂಪಣೆ, ಪ್ರೀತಿಯ ಮಾತುಗಳು ಮತ್ತು ಗೃಹಿಣಿಯರ ಜೊತೆಗಿನ ಒಡನಾಟ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ. ಅಣ್ಣನ ಸ್ಥಾನದಲ್ಲಿ ನಿಂತು ಪ್ರತಿ ಮನೆಗೆ ಭೇಟಿ ನೀಡಿ, ಕುಟುಂಬದವರನ್ನು ಒಗ್ಗೂಡಿಸಿ, ತವರು ಮನೆಯ ಉಡುಗೊರೆಯಾಗಿ ಬಾಗಿನ ನೀಡಿ ಸಂಭ್ರಮಿಸುವುದು ಈ ಶೋನ ಹೈಲೈಟ್.

ಎಂದಿನಿಂದ ಆರಂಭ?

ನಗುವಿನ ಹಬ್ಬ, ಉಡುಗೊರೆಗಳ ಸುರಿಮಳೆ ಮತ್ತು ತಾರೆಯರ ಸಾಂಗತ್ಯದೊಂದಿಗೆ ಸುವರ್ಣ ಗೃಹಮಂತ್ರಿ ಸೀಸನ್ 3 ಇದೇ ಮಾರ್ಚ್ 25ರಿಂದ (ಬುಧವಾರ) ಪ್ರತಿದಿನ ಸಂಜೆ 5 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಗೃಹಿಣಿಯರ ಮನೆ ಮನ ಬೆಳಗುವ ಈ ಕಾರ್ಯಕ್ರಮವನ್ನು ಮಿಸ್ ಮಾಡದೆ ನೋಡಿ!



Source link

Leave a Reply

Your email address will not be published. Required fields are marked *