Headlines

ಪತಿ ಸಾವಿನ 6 ದಿನಕ್ಕೆ ಪತ್ನಿ ಆತ್ಮ*ಹತ್ಯೆ: ಮತ್ತೊಬ್ಬ ಪೇದೆಯ ಕರಾಳ ಮುಖ ಬಿಚ್ಚಿಟ್ಟ ಸಂದೇಶ | Housewife Loses Life To Police Constable S Harassment On Sixth Day After Husband S Death Bhadravarti Shivmogga Mrq

ಪತಿ ಸಾವಿನ 6 ದಿನಕ್ಕೆ ಪತ್ನಿ ಆತ್ಮ*ಹತ್ಯೆ: ಮತ್ತೊಬ್ಬ ಪೇದೆಯ ಕರಾಳ ಮುಖ ಬಿಚ್ಚಿಟ್ಟ ಸಂದೇಶ | Housewife Loses Life To Police Constable S Harassment On Sixth Day After Husband S Death Bhadravarti Shivmogga Mrq



ಪತಿ ಸಾವಿನ 6 ದಿನಕ್ಕೆ ಪತ್ನಿ ಆತ್ಮ*ಹತ್ಯೆ: ಮತ್ತೊಬ್ಬ ಪೇದೆಯ ಕರಾಳ ಮುಖ ಬಿಚ್ಚಿಟ್ಟ ಸಂದೇಶ | Housewife Loses Life To Police Constable S Harassment On Sixth Day After Husband S Death Bhadravarti Shivmogga Mrq

ಶಿವಮೊಗ್ಗದ ಭದ್ರಾವತಿಯಲ್ಲಿ ಕೆಎಸ್‌ಆರ್‌ಪಿ ಪೇದೆ ಆತ್ಮ*ಹತ್ಯೆ ಮಾಡಿಕೊಂಡ ಆರು ದಿನಗಳ ಬಳಿಕ, ಅವರ ಪತ್ನಿ ಕೂಡ ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ಮತ್ತೊಬ್ಬ ಪೊಲೀಸ್ ಪೇದೆಯ ಕಿರುಕುಳ ಮತ್ತು ಬ್ಲಾಕ್‌ಮೇಲ್‌ನಿಂದ ನೊಂದು ಈ ನಿರ್ಧಾರ ತೆಗೆದುಕೊಂಡಿದ್ದು, ದಂಪತಿಯ ಇಬ್ಬರು ಮಕ್ಕಳು ತಬ್ಬಲಿಯಾಗಿದ್ದಾರೆ.

ರಾಜೇಶ್, ಶಿವಮೊಗ್ಗ

ಶಿವಮೊಗ್ಗ: ಇದು ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿರುವ ಸ್ಟೋರಿ. ಪೊಲೀಸ್ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡ ಆರು ದಿನಕ್ಕೆ ಪತ್ನಿಯು ಮತ್ತೊಬ್ಬ ಪೊಲೀಸ್ ಪೇದೆಯ ಕಿರುಕುಳ ಮತ್ತು ಬ್ಲಾಕ್ ಮೇಲ್ ಗೆ ಒಳಗಾಗಿ ಆತ್ಮಹ*ತ್ಯೆ ಮಾಡಿಕೊಂಡ ಘಟನೆ ಭದ್ರಾವತಿ ತಾಲೂಕಿನ ಹೊಸ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ತಂದೆ ತಾಯಿಯ ಸರಣಿ ಆತ್ಮಹತ್ಯೆಯ ಹಿನ್ನೆಲೆ ಎರಡು ಪುಟ್ಟ ಕಂದಮ್ಮಗಳು ತಬ್ಬಲಿಯಾಗಿವೆ. ಭದ್ರಾವತಿ ತಾಲ್ಲೂಕಿನ ಹೊಸ ಸಿದ್ದಾಪುರದಲ್ಲಿ ಕೆಎಸ್‌ಆರ್‌ಪಿ ಪೇದೆಯ ಪತ್ನಿ ಸ್ವಾತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊಲೀಸ್ ಇಲಾಖೆಯಲ್ಲಿ ಬಾರಿ ಸಂಚಲನವನ್ನೇ ಮೂಡಿಸಿದೆ.

ಫೆಬ್ರವರಿ 14ರಂದು ಸ್ವಾತಿ ಅವರ ಪತಿ ಕೆಎಸ್‌ಆರ್‌ಪಿ ಪೊಲೀಸ್ ಪೇದೆಯಾಗಿದ್ದ ಜಗದೀಶ್ ಆತ್ಮ*ಹತ್ಯೆಗೆ ಶರಣಾಗಿದ್ದನು, ಸದಾ ಕುಡಿತದ ಚಟ ಅಂಟಿಸಿಕೊಂಡಿದ್ದ ಜಗದೀಶ್ ಕುಡಿತಕ್ಕ ಹೆಂಡತಿ ಮಕ್ಕಳು ಹಾಗೂ ತಾಯಿಯ ಜೊತೆ ಜಗಳವಾಡುತ್ತಿದ್ದ. ಕೆಲವೊಮ್ಮೆ ಈತನ ಜಗಳದ ಪ್ರಕರಣಗಳು ವಿಕೋಪಕ್ಕೆ ಹೋಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿ ನಂತರ ರಾಜಿ ಸಂಧಾನದ ಮೂಲಕ ಮುಕ್ತಾಯಗೊಳ್ಳುತ್ತಿತ್ತು. ಕುಡಿತದ ಅಮಲಿನಲ್ಲಿ ಮನೆಯವರನ್ನು ಹೆದರಿಸಲು ನಾನು ಸಾಯುತ್ತೇನೆ ಎಂದು ಹೇಳುತ್ತಿದ್ದ. ಹೀಗೆಯೇ ಹೆದರಿಸಲು ಹೋಗಿ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದನು.

ಫೇಸ್‌ಬುಕ್, ವಾಟ್ಸಪ್ ಮೂಲಕ ಅಶ್ಲೀಲ ಸಂದೇಶ

ಭದ್ರಾವತಿ ತಾಲೂಕಿನ ಹೊಸ ಸಿದ್ದಾಪುರ ಗ್ರಾಮದ ಅಕ್ಕಪಕ್ಕದ ಬೀದಿಗಳಲ್ಲಿ ಕೆಎಸ್‌ಆರ್‌ಪಿ ಪೇದೆ ಜಗದೀಶ್ ಮತ್ತು ಪೇದೆ ಮೋಹನ್ ವಾಸಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಎರಡು ಕುಟುಂಬಗಳಿಗೂ ಪರಸ್ಪರ ಪರಿಚಯ ಕೂಡ ಇತ್ತು. ಪತಿ ಜಗದೀಶ್ ಆತ್ಮ*ಹತ್ಯೆಯ ನಂತರ ಪತ್ನಿ ಸ್ವಾತಿ ಇಡೀ ಕುಟುಂಬದ ಸ್ಥಿತಿ ನೆನೆದು ಮನನೊಂದಿದ್ದರು. ಇಂತಹ ಸಂದರ್ಭದಲ್ಲಿ ಸ್ವಾತಿಗೆ ಪೊಲೀಸ್ ಪೇದೆ ಮೋಹನ್ ನಿರಂತರವಾಗಿ ಫೇಸ್‌ಬುಕ್‌ ಮತ್ತು ವಾಟ್ಸಪ್ ಗಳ ಮೂಲಕ ಅಶ್ಲೀಲ ಸಂದೇಶ ಕಳಿಸುತ್ತಿದ್ದ.‌ ಅಲ್ಲದೆ ಗಂಡನ ಸಾವಿಗೆ ಆಕೆಯ ಕಾರಣ ಎಂಬಂತೆ ಅಪಪ್ರಚಾರವನ್ನು ಕೂಡ ನಡೆಸಿದ್ದ. ಇದರಿಂದ ಮಾನಸಿಕವಾಗಿ ಕುಗ್ಗಿದ ಸ್ವಾತಿ ತನ್ನ ತಾಯಿಗೆ ಮೋಹನ್ ನೀಡುತ್ತಿದ್ದ ಕಿರುಕುಳದ ಬಗ್ಗೆ ತಿಳಿಸಿದ್ದರು. ಸ್ವಾತಿ ತಾಯಿ ಭಾಗ್ಯಮ್ಮ ನಿನ್ನ ಗಂಡನ ತಿಥಿ ಕಾರ್ಯ ಮುಗಿದ ಬಳಿಕ ಪೊಲೀಸ್ ಠಾಣೆಗೆ ದೂರು ನೀಡೋಣ ಸದ್ಯ ಧೈರ್ಯವಾಗಿ ಇರು ಎಂದೆಲ್ಲ ಸಾಂತ್ವಾನ ಹೇಳಿದ್ದರು.

ಅಮ್ಮನಿಗೆ ಮೆಸೇಜ್ ಕಳುಹಿಸಿ ಪ್ರಾಣಬಿಟ್ಟ ಮಗಳು

ಫೆಬ್ರವರಿ 20ರ ಬೆಳಗ್ಗೆ ತಾಯಿ ಭಾಗ್ಯಮರ ಮೊಬೈಲಿಗೆ ಸ್ವಾತಿ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ.‌ ಪೊಲೀಸ್ ಪೇದೆ ಮೋಹನ್ ನೀಡುತ್ತಿದ್ದ ಮಾನಸಿಕ ಕಿರುಕುಳದ ಕುರಿತು ವಾಟ್ಸಾಪ್ ಸಂದೇಶದಲ್ಲಿ ಉಲ್ಲೇಖಿಸಿದ್ದಾತೆ. ಇದರಿಂದ ಮನನೊಂದು ತಾನು ಆತ್ಮಹತ್ಯೆ ಮಾಡಿ ಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಹಾಗೆಯೇ ಯಾವುದೇ ಕಾರಣಕ್ಕೂ ಪೊಲೀಸ್ ಪೇದೆ ಮೋಹನ್‌ನನ್ನು ಬಿಡಬೇಡಿ ನನ್ನ ಇಬ್ಬರು ಪುಟ್ಟ ಕಂದಮ್ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಸಂದೇಶ ಕಳಿಸಿ ನೇಣಿಗೆ ಶರಣಾಗಿದ್ದಾರೆ.

ಪೊಲೀಸ್ ಪೇದೆ ಮೋಹನ್ ವಿರುದ್ಧ ಎಫ್‌ಐಆರ್

ಇದೀಗ ಸ್ವಾತಿ ಕುಟುಂಬಸ್ಥರು ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮೋಹನ್ ವಿರುದ್ಧ ದುಷ್ಟೇರಣೆ, ಅಪಪ್ರಚಾರ, ಬ್ಲಾಕ್‌ಮೇಲ್ ಹಾಗೂ ಲೈಂಗಿಕ ಕಿರುಕುಳದ ಗಂಭೀರ ಆರೋಪಗಳ ಹೊರೆಸಿ ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದೆ. ಪೊಲೀಸ್ ಪೇದೆ ಮೋಹನ್ ಈ ಮೊದಲು ಭದ್ರಾವತಿಯಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಡ್ಯೂಟಿ ಕರ್ಮದ ಡ್ಯೂಟಿ ಎಂದು ವಾಟ್ಸಪ್ ಸಂದೇಶ ಕಳಿಸಿದ ಹಿನ್ನೆಲೆ ಅಮಾನತ್ತಾಗಿದ್ದ. ನಂತರ ಆತನನ್ನು ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಪೇದೆ ಮೋಹನ್ ಗ್ರಾಮದಲ್ಲಿ ಬಡ್ಡಿ ವ್ಯವಹಾರ ಕೂಡ ಮಾಡುತ್ತಿದ್ದ ಬಡ್ಡಿ ಕೊಡದವರಿಗೆ ಕಿರುಕುಳ ನೀಡುತ್ತಿದ್ದ ಎಂದು ಕೂಡ ಆರೋಪಗಳನ್ನು ಮಾಡಲಾಗುತ್ತಿದೆ.

ಇದನ್ನೂ ಓದಿ: Groom Missing: ಬಾಡೂಟದ ಮರುದಿನವೇ ಮದುಮಗ ನಿಗೂಢ ನಾಪತ್ತೆ! ಮೊಮ್ಮಗನಿಗಾಗಿ ಅಜ್ಜಿಯ ಕಣ್ಣೀರು

ಇದೀಗ ದಂಪತಿಗಳ ಸರಣಿ ಆತ್ಮ*ಹತ್ಯೆಯ ಹಿನ್ನೆಲೆ ಎರಡು ಪುಟ್ಟ ಕಂದಮ್ಮಗಳು ತಬ್ಬಲಿಯಾಗಿವೆ. ಇನ್ನೊಂದೆಡೆ ಮಾನಸಿಕ ಕಿರುಕುಳ ಕೊಟ್ಟು ಬ್ಲಾಕ್ ಮೇಲ್ ಮಾಡಿದ ಪೊಲೀಸ್ ಪೇದೆ ಪರಾರಿಯಾಗಿದ್ದು ಆತನ ಬಂಧನಕ್ಕೆ ಭದ್ರಾವತಿಯ ನ್ಯೂ ಟೌನ್ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ವಾಡಿಕೆಗಿಂತ ಶೇ. 32 ಹೆಚ್ಚು ಮಳೆ, ಆದರೂ ಜಲಕ್ಷಾಮದ ಭೀತಿ; ಬರಿದಾಗುತ್ತಿರುವ ಗಂಗಾವಳಿ



Source link

Leave a Reply

Your email address will not be published. Required fields are marked *