Mahesh Babu Remuneration: ಜಾಹೀರಾತಿಗೆ ಕೋಟಿ ಕೋಟಿ ಪಡೆಯುವ ಮಹೇಶ್ ಬಾಬು ಮೊದಲ ಸಂಭಾವನೆ ಕೇಳಿದ್ರೆ ಬೆರಗಾಗ್ತೀರಾ! | Mahesh Babu First Salary And Current Per Movie Remuneration Details Gvd

Mahesh Babu Remuneration: ಜಾಹೀರಾತಿಗೆ ಕೋಟಿ ಕೋಟಿ ಪಡೆಯುವ ಮಹೇಶ್ ಬಾಬು ಮೊದಲ ಸಂಭಾವನೆ ಕೇಳಿದ್ರೆ ಬೆರಗಾಗ್ತೀರಾ! | Mahesh Babu First Salary And Current Per Movie Remuneration Details Gvd



Mahesh Babu Remuneration: ಜಾಹೀರಾತಿಗೆ ಕೋಟಿ ಕೋಟಿ ಪಡೆಯುವ ಮಹೇಶ್ ಬಾಬು ಮೊದಲ ಸಂಭಾವನೆ ಕೇಳಿದ್ರೆ ಬೆರಗಾಗ್ತೀರಾ! | Mahesh Babu First Salary And Current Per Movie Remuneration Details Gvd

ಸೂಪರ್ ಸ್ಟಾರ್ ಮಹೇಶ್ ಬಾಬು ಸದ್ಯ ಒಂದು ಸಿನಿಮಾಗೆ 100 ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಜಾಹೀರಾತುಗಳಿಗೂ ಕೋಟಿ ಕೋಟಿ ಚಾರ್ಜ್ ಮಾಡುವ ಮಹೇಶ್ ಬಾಬು ಅವರ ಮೊದಲ ಸಂಬಳ ಎಷ್ಟಿತ್ತು ಗೊತ್ತಾ?

ಸೂಪರ್ ಸ್ಟಾರ್ ಕೃಷ್ಣ ಅವರ ನಟನಾ ಪರಂಪರೆಯನ್ನು ಅವರಿಗಿಂತ ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ದ ನಟ ಮಹೇಶ್ ಬಾಬು. ಸದ್ಯ ಟಾಲಿವುಡ್‌ನ ಟಾಪ್ ನಟರಲ್ಲಿ ಒಬ್ಬರಾಗಿರುವ ಮಹೇಶ್, ಬಾಲನಟನಾಗಿಯೂ ಮಿಂಚಿದ್ದರು. ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಬಾಲನಟನಾಗಿ ದ್ವಿಪಾತ್ರದಲ್ಲಿ ನಟಿಸಿದ ದಾಖಲೆಯೂ ಮಹೇಶ್ ಬಾಬು ಹೆಸರಿನಲ್ಲಿದೆ. ಈಗ ಒಂದು ಸಿನಿಮಾಗೆ ನೂರು ಕೋಟಿಗೂ ಹೆಚ್ಚು ಸಂಭಾವನೆ ಪಡೆಯುವ ಮಹೇಶ್ ಬಾಬು, ಬಾಲನಟನಾಗಿದ್ದಾಗ ಮೊದಲ ಸಿನಿಮಾಗೆ ಪಡೆದ ಹಣ ಎಷ್ಟು ಗೊತ್ತಾ?

ಚಿಕ್ಕ ವಯಸ್ಸಿನಿಂದಲೇ ಸಿನಿಮಾಗಳ ಬಗ್ಗೆ ಆಸಕ್ತಿ ಹೊಂದಿದ್ದ ಮಹೇಶ್ ಬಾಬು, ಬಾಲನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಬಾಲನಟನಾಗಿಯೇ ಆಕ್ಷನ್ ಸೀನ್‌ಗಳನ್ನೂ ಮಾಡಿದ್ದರು. ಅದರಲ್ಲೂ ‘ಕೊಡುಕು ದಿದ್ದಿನ ಕಾಪುರಂ’ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುವ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದರು. ಆ ಸಮಯದಲ್ಲಿ ಅವರ ತಂದೆ ಕೃಷ್ಣ, ನಿರ್ಮಾಪಕರಾಗಿ ಮಹೇಶ್‌ಗೆ ನೀಡಿದ ಸಂಭಾವನೆಯ ಬಗ್ಗೆ ಒಂದು ಸುದ್ದಿ ವೈರಲ್ ಆಗಿದೆ.

ಮಹೇಶ್ ಬಾಬು ಅವರ ಮೊದಲ ಸಂಪಾದನೆ 10,000 ರೂಪಾಯಿ ಆಗಿತ್ತು ಎಂದು ತಿಳಿದುಬಂದಿದೆ. ಈ ಹಿಂದೆ ಕೆಲವು ಸಂದರ್ಭಗಳಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದರು. ಪ್ರಸ್ತುತ, ಮಹೇಶ್ ಬಾಬು ಟಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಸದ್ಯ ಅವರು ಪ್ರತಿ ಚಿತ್ರಕ್ಕೆ ಸುಮಾರು 100 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಒಂದು ಜಾಹೀರಾತಿಗೆ ಮಹೇಶ್ 5 ರಿಂದ 10 ಕೋಟಿ ರೂಪಾಯಿವರೆಗೆ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.

ವಿಶ್ವಾದ್ಯಂತ ಪ್ರೇಕ್ಷಕರನ್ನು ಸೆಳೆಯುವ ಗುರಿ

ಮಹೇಶ್ ಬಾಬು ಪ್ರಸ್ತುತ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮೂಲಕ ಮಹೇಶ್ ಬಾಬು ಮೊದಲ ಬಾರಿಗೆ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ವಿಶ್ವಾದ್ಯಂತ ಪ್ರೇಕ್ಷಕರನ್ನು ಸೆಳೆಯುವ ಗುರಿ ಹೊಂದಿದ್ದಾರೆ. ಇಲ್ಲಿಯವರೆಗೂ ಅವರ ಸಿನಿಮಾಗಳು ಪ್ರಮುಖವಾಗಿ ತೆಲುಗು ಪ್ರೇಕ್ಷಕರಿಗೆ ಸೀಮಿತವಾಗಿದ್ದವು. ಆದರೆ ಈ ಹೊಸ ಪ್ರಾಜೆಕ್ಟ್ ಮೂಲಕ ಅವರು ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಯೋಚಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *