Propose ಮುಂಬೈ ಅಭಿಮಾನಿಯಿಂದ ಕೆಕೆಆರ್ ಗೆಳತಿಗೆ ಪ್ರಪೋಸ್ ಮುನ್ನ ಕಳೆದೊಯ್ತು ರಿಂಗ್, ಮುಂದೇನಾಯ್ತು? | Mi Fan Propose Kkr Fan During Match Gets Green Signal Despite Lose Ring At Stadium

Propose ಮುಂಬೈ ಅಭಿಮಾನಿಯಿಂದ ಕೆಕೆಆರ್ ಗೆಳತಿಗೆ ಪ್ರಪೋಸ್ ಮುನ್ನ ಕಳೆದೊಯ್ತು ರಿಂಗ್, ಮುಂದೇನಾಯ್ತು? | Mi Fan Propose Kkr Fan During Match Gets Green Signal Despite Lose Ring At Stadium



Propose ಮುಂಬೈ ಅಭಿಮಾನಿಯಿಂದ ಕೆಕೆಆರ್ ಗೆಳತಿಗೆ ಪ್ರಪೋಸ್ ಮುನ್ನ ಕಳೆದೊಯ್ತು ರಿಂಗ್, ಮುಂದೇನಾಯ್ತು? | Mi Fan Propose Kkr Fan During Match Gets Green Signal Despite Lose Ring At Stadium

ಮುಂಬೈ ಅಭಿಮಾನಿಯಿಂದ ಕೆಕೆಆರ್ ಗೆಳತಿಗೆ ಪ್ರಪೋಸ್ ಮುನ್ನ ಕಳೆದೊಯ್ತು ರಿಂಗ್, ಮುಂದೇನಾಯ್ತು? ಪಂದ್ಯ ನಡೆಯುತ್ತಿದ್ದಂತೆ ನಿವೇದನೆ ಮಾಡಲು ಮಂಡಿಯೂರಿದ್ದಾನೆ. ಆದರೆ ಆಯತಪ್ಪಿದ ಕಾರಣ ರಿಂಗ್ ಕಳೆದುಹೋಗಿದೆ. ಮುಂದಾಗಿದ್ದೆ ರೋಚಕ

ಮುಂಬೈ (ಮಾ.30) ಐಪಿಎಲ್ ಟೂರ್ನಿ ಕಾವು ಹಚ್ಚಾಗಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಕಂಡರೆ, 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದು ಬೀಗಿದೆ. ಮುಂಬೈ ಇಂಡಿಯನ್ಸ್ ಹಾಗೂ ಕೆಕೆಆರ್ ನಡುವಿನ ಪಂದ್ಯದಲ್ಲಿ ವಿಶೇಷ ಘಟನೆಯೊಂದು ನಡೆದಿದೆ. ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಮುಂಬೈ ಇಂಡಿಯನ್ಸ್ ಅಭಿಮಾನಿ ಹಾಗೂ ಕೆಕೆಆರ ಅಭಿಮಾನಿ ನಡುವಿನ ಪ್ರೀತಿಗೆ ಗ್ರೀನ್ ಸಿಗ್ನಲ್ ಸಿಕ್ಕ ಘಟನೆ ನಡೆದಿದೆ. ಆದರೆ ಮುಂಬೈ ಅಭಿಮಾನಿ ಮಂಡಿಯೂರಿ ಪ್ರಪೋಸ್ ಮಾಡಲು ಮುಂದಾದಾಗ ಆಯತಪ್ಪಿದ್ದಾನೆ. ಪರಿಮಾಮ ತಂದಿದ್ದ ರಿಂಗ್ ಕಳೆದುಹೋದ ಘಟನೆ ನಡೆದಿದೆ.

ರೋಚಕ ಪಂದ್ಯದ ನಡುವೆ ಪ್ರಪೋಸ್

ಮುಂಬೈ ಇಂಡಿಯನ್ಸ್ ಹಾಗೂ ಕೆಕೆಆರ್ ನಡುವಿನ ಪಂದ್ಯ ವೀಕ್ಷಿಸಲು ಇಬ್ಬರು ಆಗಮಿಸಿದ್ದಾರೆ. ಯುವಕ ಮುಂಬೈ ಇಂಡಿಯನ್ಸ್ ಅಭಿಮಾನಿಯಾಗಿದ್ದರೆ, ಯುವತಿ ಕೆಕೆಆರ್ ಅಭಿಮಾನಿ. ಇಬ್ಬರು ತಮ್ಮ ತಮ್ಮ ತಂಡದ ಜರ್ಸಿ ಧರಿಸಿ ಆಗಮಿಸಿದ್ದಾರೆ. ಪಂದ್ಯ ರೋಚಕ ಘಟ್ಟ ತಲುಪಿದೆ. ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಮೇಲುಗೈ ಸಾಧಿಸಿತ್ತು. ಇದೇ ವೇಳೆ ತಾನು ಸೀಕ್ರೆಟ್ ಆಗಿ ತಂದಿದ್ದ ರಿಂಗ್ ತೆಗೆದು ಗೆಳತಿಗೆ ಪ್ರಪೋಸ್ ಮಾಡಲು ಮುಂದಾಗಿದ್ದಾನೆ. ಈತನ ನಡೆ ನೋಡಿ ಗೆಳತಿಗೆ ಅಚ್ಚರಿಯಾಗಿದೆ. ಸುಂದರ ಕ್ಷಣಕ್ಕಾಗಿ ಆಕೆ ಕಾಯುತ್ತಿದ್ದಳು.

ಅಭಿಮಾನಿಗಳ ನಡುವೆ ಬಿದ್ದ ರಿಂಗ್

ಮಂಡಿಯೂರಿ ಗೆಳತಿಗೆ ಪ್ರಪೋಸ್ ಮಾಡಲು ಮುಂದಾಗಿದ್ದಾನೆ. ಆದರೆ ಆಯ ತಪ್ಪಿದ ಕಾರಣ ಈತನ ರಿಂಗ್ ಅಭಿಮಾನಿಗಳ ನಡುವೆ ಬಿದ್ದಿದೆ. ಒಂದೆಡೆ ಕ್ರೀಡಾಂಗಣದಲ್ಲಿ ಕ್ಕಿಕ್ಕಿರಿದು ಅಭಿಮಾನಿಗಳು ತುಂಬಿದ್ದಾರೆ. ಗ್ಯಾಲರಿಯಲ್ಲಿ ಪ್ರಪೋಸ್ ಪ್ರಯತ್ನ ನಡೆದಿದೆ. ಆದರೆ ರಿಂಗ್ ಕಾಣೆಯಾಗಿದೆ. ಇತ್ತ ಕೆಳಕ್ಕೆ ಬಿದ್ದ ಬೆನ್ನಲ್ಲೇ ಇತರ ಅಭಿಮಾನಿಗಳು ತಡಕಾಡಿ, ಹುಡುಕಾಡಿ ರಿಂಗ್ ಪತ್ತೆ ಹಚ್ಚಿದ್ದಾರೆ. ಬಳಿಕ ರಿಂಗ್‌ನ್ನು ಮತ್ತೆ ಮುಂಬೈ ಇಂಡಿಯನ್ಸ್ ಅಭಿಮಾನಿಗೆ ನೀಡಿದ್ದಾರೆ.

ಅಭಿಮಾನಿ ಮತ್ತೆ ರಿಂಗ್ ಹಿಡಿದು ಮಂಡಿಯೂರಿದ್ದಾನೆ. ಗೆಳತಿಗೆ ಪ್ರಪೋಸ್ ಮಾಡಿದ್ದಾನೆ. ಆಕೆ ಕೂಡ ಒಕೆ ಎಂದು ಗ್ರೀನ್ ಸಿಗ್ನಲ್ ನೀಡಿದ್ದಾಳೆ. ಇತ್ತ ರಿಂಗ್ ತೊಡಿಸಿ ಅಪ್ಪುಗೆ ನೀಡಿದ್ದಾನೆ. ಇವರ ಪ್ರೀತಿಗೆ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಚಪ್ಪಾಳೆ ಮೂಲಕ ಅಭಿನಂದಿಸಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

Scroll to load tweet…

ಹಲವರು ಇದು ವೈರಲ್ ವಿಡಿಯೋಗಾಗಿ ಮಾಡಿದ ಸ್ಟಂಟ್ ಎಂದಿದ್ದಾರೆ. ಪಂದ್ಯದ ನಡುವೆ ಪ್ರಪೋಸ್ ಪ್ಲಾನ್ ಮೊದಲೇ ಮಾಡಲಾಗಿತ್ತು. ಈ ರೀತಿಯ ನಾಟಕಗಳು ಪ್ರತಿ ದಿನ ಸೋಶಿಯಲ ಮೀಡಿಯಾದಲ್ಲಿ ರಾರಾಜಿಸುತ್ತಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *