Headlines

ಇರಾನ್‌ನೊಂದಿಗೆ ಯುದ್ಧಕ್ಕೆ ನಾವು ಅಮೆರಿಕವನ್ನ ಎಳೆದುತಂದಿಲ್ಲ, ಟ್ರಂಪ್ ನಮ್ಮ ಕೈಗೊಂಬೆಯಲ್ಲ, ನೆತನ್ಯಾಹು ತಿರುಗೇಟು! | Israel Iran War 2026 Trump Is Not Our Puppet Says Netanyahu Denying Us Involvement In Conflict

ಇರಾನ್‌ನೊಂದಿಗೆ ಯುದ್ಧಕ್ಕೆ ನಾವು ಅಮೆರಿಕವನ್ನ ಎಳೆದುತಂದಿಲ್ಲ, ಟ್ರಂಪ್ ನಮ್ಮ ಕೈಗೊಂಬೆಯಲ್ಲ, ನೆತನ್ಯಾಹು ತಿರುಗೇಟು! | Israel Iran War 2026 Trump Is Not Our Puppet Says Netanyahu Denying Us Involvement In Conflict



ಇರಾನ್‌ನೊಂದಿಗೆ ಯುದ್ಧಕ್ಕೆ ನಾವು ಅಮೆರಿಕವನ್ನ ಎಳೆದುತಂದಿಲ್ಲ, ಟ್ರಂಪ್ ನಮ್ಮ ಕೈಗೊಂಬೆಯಲ್ಲ, ನೆತನ್ಯಾಹು ತಿರುಗೇಟು! | Israel Iran War 2026 Trump Is Not Our Puppet Says Netanyahu Denying Us Involvement In Conflict

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಅಮೆರಿಕವನ್ನು ಇರಾನ್ ಜೊತೆ ಯುದ್ಧಕ್ಕೆ ಎಳೆದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಇಸ್ರೇಲ್‌ನ ದಾಳಿಯಿಂದ ಇರಾನ್‌ನ ಪರಮಾಣು ಮತ್ತು ಕ್ಷಿಪಣಿ ಸಾಮರ್ಥ್ಯ ನಾಶವಾಗಿದೆ ಎಂದು ಹೇಳಿದ್ದಾರೆ. ಹಾರ್ಮುಜ್ ಜಲಸಂಧಿಯ ಬೆದರಿಕೆ  ಎದುರಿಸಲು ಪರ್ಯಾಯ ಪೈಪ್‌ಲೈನ್ ಬಗ್ಗೆ ಪ್ರಸ್ತಾಪ

ನಾವು ಅಮೆರಿಕವನ್ನು ಇರಾನ್ ಜೊತೆ ಯುದ್ಧಕ್ಕೆ ಎಳೆದಿಲ್ಲ…’ ಎಂದು ಹೇಳುವ ಮೂಲಕ ಬೆಂಜಮಿನ್ ನೆತನ್ಯಾಹು ಜಾಗತಿಕ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಇಸ್ರೇಲ್ ತನ್ನ ಹಿತಾಸಕ್ತಿಗಾಗಿ ಡೊನಾಲ್ಡ್ ಟ್ರಂಪ್ ಅವರನ್ನು ಬಳಸಿಕೊಳ್ಳುತ್ತಿದೆ ಎಂಬ ವರದಿಗಳನ್ನು ‘ನಕಲಿ ಸುದ್ದಿ’ ಎಂದು ಕರೆದಿರುವ ನೆತನ್ಯಾಹು, ಟ್ರಂಪ್‌ಗೆ ಏನು ಮಾಡಬೇಕೆಂದು ಯಾರಾದರೂ ಹೇಳಿಕೊಡಲು ಸಾಧ್ಯವೇ?’ ಎಂಬ ಮಾರ್ಮಿಕ ಪ್ರಶ್ನಿಸಿದ್ದಾರೆ. ಆ ಮೂಲಕ ಟ್ರಂಪ್ ಸ್ವತಂತ್ರ ನಿರ್ಧಾರ ಕೈಗೊಳ್ಳುವ ನಾಯಕ ಎಂದಿದ್ದಾರೆ.

ಇಸ್ರೇಲ್ ದಾಳಿಗೆ ಇರಾನ್ ಕ್ಷಿಪಣಿ ಶಕ್ತಿ ಶೂನ್ಯ?

ಕಳೆದ 20 ದಿನಗಳಿಂದ ನಡೆಯುತ್ತಿರುವ ಭೀಕರ ಸಂಘರ್ಷದ ನಂತರ, ಇರಾನ್ ಈಗ ತಲೆ ಎತ್ತದ ಸ್ಥಿತಿಗೆ ತಲುಪಿದೆ ಎಂದು ನೆತನ್ಯಾಹು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇರಾನ್ ಬಳಿ ಇನ್ನು ಮುಂದೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಿರ್ಮಿಸುವ ಅಥವಾ ಯುರೇನಿಯಂ ಅನ್ನು ಉತ್ಕೃಷ್ಟಗೊಳಿಸುವ ಯಾವುದೇ ತಾಂತ್ರಿಕ ಸಾಮರ್ಥ್ಯ ಉಳಿದಿಲ್ಲ. ಇಸ್ರೇಲ್‌ನ ನಿಖರ ದಾಳಿಗಳು ಇರಾನ್‌ನ ಪರಮಾಣು ಮತ್ತು ಮಿಲಿಟರಿ ಮೂಲಸೌಕರ್ಯವನ್ನು ಹೈಜಾಕ್ ಮಾಡಿವೆ ಎಂಬುದು ಈ ವರದಿಯ ಸಾರಾಂಶ.

ಗ್ಯಾಸ್ ಫೀಲ್ಡ್ ದಾಳಿಗೆ ಟ್ರಂಪ್ ಬ್ರೇಕ್

ಇರಾನ್‌ನ ದಕ್ಷಿಣ ಪಾರ್ಸ್ ಅನಿಲ ಕ್ಷೇತ್ರದ ಮೇಲೆ ಇಸ್ರೇಲ್ ಏಕಾಂಗಿಯಾಗಿ ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಟ್ರಂಪ್ ಮಧ್ಯಪ್ರವೇಶಿಸಿದ್ದಾರೆ. ಅನಿಲ ಕ್ಷೇತ್ರಗಳ ಮೇಲಿನ ದಾಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಟ್ರಂಪ್ ವಿನಂತಿಸಿದ್ದು, ಇದಕ್ಕೆ ಇಸ್ರೇಲ್ ಸಮ್ಮತಿಸಿದೆ. ಈ ಬೆಳವಣಿಗೆಯು ಯುದ್ಧವು ನಿರೀಕ್ಷೆಗಿಂತ ಮೊದಲೇ ಕೊನೆಗೊಳ್ಳಬಹುದು ಎಂಬ ಸುಳಿವನ್ನು ನೀಡಿದೆ.

ಹಾರ್ಮುಜ್ ಜಲಸಂಧಿ ಮೇಲೆ ಕಣ್ಣು, ಪರ್ಯಾಯ ಪ್ಲಾನ್ ಸಿದ್ಧ!

ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಮೂಲಕ ಜಾಗತಿಕ ತೈಲ ಮಾರುಕಟ್ಟೆಯನ್ನು ಅಲುಗಾಡಿಸಬಹುದು ಎಂಬ ಇರಾನ್‌ನ ‘ಬ್ಲ್ಯಾಕ್‌ಮೇಲ್’ ತಂತ್ರ ಇನ್ನು ಮುಂದೆ ನಡೆಯುವುದಿಲ್ಲ ಎಂದು ನೆತನ್ಯಾಹು ಗುಡುಗಿದ್ದಾರೆ. ಅರೇಬಿಯನ್ ಪರ್ಯಾಯ ದ್ವೀಪದ ಮೂಲಕ ಇಸ್ರೇಲ್ ಮತ್ತು ಮೆಡಿಟರೇನಿಯನ್‌ಗೆ ಇಂಧನ ಸಾಗಿಸಲು ಪೈಪ್‌ಲೈನ್ ನಿರ್ಮಿಸುವ ಹೊಸ ಯೋಜನೆಯನ್ನು ಅವರು ಪ್ರಸ್ತಾಪಿಸಿದ್ದು, ಇರಾನ್ ಅವಲಂಬನೆಯನ್ನು ಮುಕ್ತಾಯಗೊಳಿಸುವ ಹಾದಿ ಹುಡುಕಿದ್ದಾರೆ.

ಕುಸಿಯುತ್ತಿದೆ ಇರಾನ್ ಸಾಮ್ರಾಜ್ಯ?

ಯುದ್ಧದ ಹೊಡೆತ ಕೇವಲ ಮಿಲಿಟರಿಗೆ ಮಾತ್ರವಲ್ಲ, ಇರಾನ್‌ನ ನಾಯಕತ್ವಕ್ಕೂ ತಟ್ಟಿದೆ. ಇರಾನ್ ಆಡಳಿತದ ಒಳಗೆ ಅಧಿಕಾರಕ್ಕಾಗಿ ಆಂತರಿಕ ಕಚ್ಚಾಟ ಶುರುವಾಗಿದ್ದು, ಪ್ರಸ್ತುತ ನಾಯಕತ್ವ ದುರ್ಬಲಗೊಳ್ಳುತ್ತಿದೆ ಎಂದು ನೆತನ್ಯಾಹು ಹೇಳಿದ್ದಾರೆ. ಟ್ರಂಪ್ ಮತ್ತು ಇಸ್ರೇಲ್ ನಡುವಿನ ಸಮನ್ವಯವು ಇರಾನ್‌ನ ಪರಮಾಣು ಬೆದರಿಕೆಯನ್ನು ಸಂಪೂರ್ಣವಾಗಿ ಹತ್ತಿಕ್ಕುವಲ್ಲಿ ಯಶಸ್ವಿಯಾಗಿದೆ ಎಂಬುದು ಇಸ್ರೇಲ್ ಪ್ರಧಾನಿಯ ವಾದ.



Source link

Leave a Reply

Your email address will not be published. Required fields are marked *