ಫ್ಯಾಮಿಲಿ ಟ್ರಿಪ್‌ ನೆಪದಲ್ಲಿ ರಾಜಧಾನಿಗೆ 7.5 ಕೋಟಿ ಮೊತ್ತದ ಹೆರಾಯಿನ್ ಸಾಗಿಸುತ್ತಿದ್ದ ದಂಪತಿ ಅಂದರ್ | Couple Arrested For Transporting Heroin Worth Rs 7 5 Crore To The National Capital

ಫ್ಯಾಮಿಲಿ ಟ್ರಿಪ್‌ ನೆಪದಲ್ಲಿ ರಾಜಧಾನಿಗೆ 7.5 ಕೋಟಿ ಮೊತ್ತದ ಹೆರಾಯಿನ್ ಸಾಗಿಸುತ್ತಿದ್ದ ದಂಪತಿ ಅಂದರ್ | Couple Arrested For Transporting Heroin Worth Rs 7 5 Crore To The National Capital



ಫ್ಯಾಮಿಲಿ ಟ್ರಿಪ್‌ ನೆಪದಲ್ಲಿ ರಾಜಧಾನಿಗೆ 7.5 ಕೋಟಿ ಮೊತ್ತದ ಹೆರಾಯಿನ್ ಸಾಗಿಸುತ್ತಿದ್ದ ದಂಪತಿ ಅಂದರ್ | Couple Arrested For Transporting Heroin Worth Rs 7 5 Crore To The National Capital

couple arrested for smuggling heroin: ಕುಟುಂಬ ಪ್ರವಾಸದ ನೆಪದಲ್ಲಿ ದೆಹಲಿಗೆ 7.5 ಕೋಟಿ ಮೌಲ್ಯದ ಹೆರಾಯಿನ್ ಸಾಗಿಸುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಆರಿಫ್ ಖಾನ್, ಪತ್ನಿ ಶಿಖಾ ಅಲಿ, ರಿಸೀವರ್ ಜುಮ್ಮನ್‌ನಿಂದ ಒಟ್ಟು 1.504 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.

ಫ್ಯಾಮಿಲಿ ಟ್ರಿಪ್ ನೆಪದಲ್ಲಿ ಮಾದಕವಸ್ತು ಕಳ್ಳಸಾಗಣೆ:

ನವದೆಹಲಿ: ಕುಟುಂಬ ಪ್ರವಾಸದ ನೆಪದಲ್ಲಿ ದೆಹಲಿಗೆ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಗಂಡ ಹೆಂಡತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಫ್ಯಾಮಿಲಿ ಟ್ರಿಪ್ ನೆಪದಲ್ಲಿ ರಾಷ್ಟ್ರ ರಾಜಧಾನಿಗೆ 7.5 ಕೋಟಿ ಮೌಲ್ಯದ ಹೆರಾಯಿನ್ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಅವರನ್ನು ಬಂಧಿಸಲಾಗಿದೆ. ದೆಹಲಿ ಪೊಲೀಸರು ದಂಪತಿ ಮತ್ತು ರಿಸೀವರ್ ಸೇರಿದಂತೆ ಮೂವರನ್ನು ಬಂಧಿಸಿದ್ದು, ಅವರಿಂದ ಒಟ್ಟು 1.504 ಕೇಜಿಗಳಷ್ಟು ಹೆರಾಯಿನ್ ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ದೆಹಲಿಯ ನರೈನಾ ನಿವಾಸಿಗಳಾದ ಆರಿಫ್ ಖಾನ್ ಮತ್ತು ಅವರ ಪತ್ನಿ ಶಿಖಾ ಅಲಿ ಮತ್ತು ರಿಸೀವರ್ ಭಲ್ಸ್ವಾ ಡೈರಿ ಪ್ರದೇಶದ ಜುಮ್ಮನ್ ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲಿ ಆರಿಫ್ ಉತ್ತರ ಪ್ರದೇಶದ ಬರೇಲಿಯಿಂದ ಅಪಾರ ಪ್ರಮಾಣದ ಹೆರಾಯಿನ್ ಅನ್ನು ಸಾಗಿಸಿ ಗಾಜಿಯಾಬಾದ್‌ನ ಲೋನಿ ಮತ್ತು ದೆಹಲಿಯ ವಿವಿಧ ಭಾಗಗಳಿಗೆ ಸರಬರಾಜು ಮಾಡುತ್ತಿದ್ದ. ಈ ಬಗ್ಗೆ ನಿರ್ದಿಷ್ಟ ಮಾಹಿತಿಗಳು ಅಪರಾಧ ವಿಭಾಗಕ್ಕೆ ಬಂದ ಹಿನ್ನೆಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಆರೋಪಿಗಳು ರಾತ್ರಿಯಲ್ಲಿ ಈ ಮಾದಕ ವಸ್ತು ಕಳ್ಳಸಾಗಣೆ ಮಾಡಲು ಟ್ಯಾಕ್ಸಿ ಬಳಸುತ್ತಿದ್ದರು. ಕಾನೂನು ಜಾರಿ ಅಧಿಕಾರಿಗಳ ಗಮನ ಬೇರೆಡೆ ಸೆಳೆಯಲು ಅರಿಫ್‌ ಕುಟುಂಬ ಪ್ರವಾಸದ ನೆಪ ಮಾಡಿದ್ದು, ಇದಕ್ಕಾಗಿ ಪತ್ನಿಯನ್ನು ಕೂಡ ಜೊತೆಗೆ ಕರೆದೊಯ್ದಿದ್ದ ಎಂದು ಅಧಿಕಾರಿಗಳು ಹೇಳಿದರು.

ಇದನ್ನೂ ಓದಿ: ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿ 10 ತಿಂಗಳ ಮಗುವಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ

ಈ ಬಗ್ಗೆ ಮಾಹಿತಿ ಪಡೆದ ನಂತರ, ದೆಹಲಿ ಅಪರಾಧ ವಿಭಾಗದ ತಂಡವು ದೆಹಲಿ ಗಾಜಿಯಾಬಾದ್-ಭೋಪುರ ಗಡಿಯನ್ನು ಮರುಪರಿಶೀಲಿಸಿ ವಾಹನವು ದೆಹಲಿಗೆ ಪ್ರವೇಶಿಸುವ ಮಾರ್ಗ ಮತ್ತು ಸಮಯದ ಲೆಕ್ಕಾಚಾರ ಹಾಕಿದೆ. ನಂತರ ಫೆಬ್ರವರಿ 10 ರ ತಡರಾತ್ರಿ ಗಾಜಿಯಾಬಾದ್ ಕಡೆಯಿಂದ ದೆಹಲಿಗೆ ಪ್ರವೇಶಿಸುತ್ತಿದ್ದ ಕಾರನ್ನು ತಡೆದ ಪೊಲೀಸರು, ಅದರಲ್ಲಿದ್ದ ಆರಿಫ್ ಮತ್ತು ಶಿಖಾ ಅವರನ್ನು ಬಂಧಿಸಿದ್ದಾರೆ. ಕಾರಿನಲ್ಲಿ ಶೋಧ ನಡೆಸಿದಾಗ ದಂಪತಿಗಳ ಬಳಿ ಇದ್ದ 303 ಗ್ರಾಂ ಹೆರಾಯಿನ್ ಹಾಗೂ ಕಾರಿನ ಹಿಂದಿನ ಸೀಟಿನಲ್ಲಿದ್ದ ಇನ್ನೊಂದು ಚೀಲದಲ್ಲಿ 1007 ಗ್ರಾಂ ಹೆರಾಯಿನ್ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಆರಿಫ್ ತನಗೆ ಹೆರಾಯಿನ್ ಪೂರೈಸುತ್ತಿದ್ದವರು ಹಾಗೂ ತನ್ನಿಂದ ಸ್ವೀಕರಿಸುವವರ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾನೆ. ಉತ್ತರ ಪ್ರದೇಶದ ಬರೇಲಿ ಮೂಲದ ಕಿಂಗ್‌ಪಿನ್‌ನಿಂದ ಹೆರಾಯಿನ್ ಪಡೆದು ಗಾಜಿಯಾಬಾದ್ ಮತ್ತು ದೆಹಲಿಯಲ್ಲಿರುವವರಿಗೆ ಅದನ್ನು ತಲುಪಿಸಿದ್ದಾಗಿ ಆತ ಬಹಿರಂಗಪಡಿಸಿದ್ದಾನೆ. ಫೆಬ್ರವರಿ 7 ರಂದು ಭಲ್ಸ್ವಾ ಡೈರಿ ಪ್ರದೇಶದ ಜುಮ್ಮನ್‌ಗೆ 500 ಗ್ರಾಂ ಹೆರಾಯಿನ್ ಪೂರೈಸಿದ್ದಾಗಿಯೂ ಆತ ತನಿಖಾ ತಂಡಕ್ಕೆ ತಿಳಿಸಿದ್ದಾನೆ.

ಇದನ್ನೂ ಓದಿ: ಟಿವಿ ವಿಚಾರಕ್ಕೆ ಗಲಾಟೆ: ಆಶ್ರಯ ನೀಡಿದ್ದ ಅತ್ತೆಯನ್ನೇ ಹೊಡೆದು ಕೊಂದ 15 ವರ್ಷದ ಸೋದರಳಿಯ

ನಂತರ ತಾಂತ್ರಿಕ ವಿಶ್ಲೇಷಣೆ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ಪೊಲೀಸರು ಜುಮ್ಮನ್ ಅವರನ್ನು ಅವರ ನಿವಾಸದಲ್ಲಿಯೇ ಬಂಧಿಸಿದ್ದಾರೆ. ಆತನ ಮನೆಯಲ್ಲಿ ಶೋಧ ನಡೆಸಿದಾಗ ಅಲ್ಲೂ 194 ಗ್ರಾಂ ಹೆರಾಯಿನ್ ಸಿಕ್ಕಿದೆ. ಪದವಿ ವರೆಗೆ ಓದಿರುವ ಆರಿಫ್ ಈ ಹಿಂದೆ ಘಾಜಿಪುರದಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಕೋವಿಡ್ -19 ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದ. ನಂತರ ಟ್ಯಾಕ್ಸಿ ಖರೀದಿಸಿ ಬಾಡಿಗೆಗೆ ಓಡಿಸುತ್ತಿದ್ದ ಇದೇ ಅವಧಿಯಲ್ಲಿ ಆತನಿಗೆ ಬರೇಲಿ ಮೂಲದ ಡ್ರಗ್ ಪೂರೈಕೆದಾರನ ಪರಿಚಯ ಆಗಿದ್ದು, ಹಣಕ್ಕಾಗಿ ಹೆರಾಯಿನ್ ಸಾಗಿಸಲು ಆರಂಭಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈತನ ಪತ್ನಿ ಶಿಖಾಗೆ ಪತಿಯ ಅಕ್ರಮ ಚಟುವಟಿಕೆಯ ಬಗ್ಗೆ ತಿಳಿದಿತ್ತು ಆದರೂ ಆತನಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡದೇ ಆತನಿಗೆ ಬೆಂಬಲವಾಗಿ ನಿಂತಿದ್ದಾಳೆ. ಸಾಗಣೆ ವೇಳೆ ಅನುಮಾನ ಬರಬಾರದು ಎಂದು ಆತನ ಜೊತೆ ಹೋಗಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾಳೆ. .

ಇತ್ತ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ ಜುಮ್ಮನ್, ಆರಿಫ್ ಮೂಲಕ ಹೆರಾಯಿನ್ ಖರೀದಿಸಿ, ಭಲ್ಸ್ವಾ ಡೈರಿಯ ರೈಲ್ವೆ ಮಾರ್ಗಗಳ ಬಳಿ ಸಣ್ಣ ಪ್ಯಾಕೆಟ್‌ಗಳಲ್ಲಿ ಅದನ್ನು ಮಾರಾಟ ಮಾಡುತ್ತಿದ್ದನೆಂದು ಆರೋಪಿಸಲಾಗಿದೆ. ಈ ದಂಪತಿ ಜೊತೆ ಸಂಪರ್ಕ ಇರುವ ಇತರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.



Source link

Leave a Reply

Your email address will not be published. Required fields are marked *