Headlines

RSS ಟೀಕಿಸೋ ಭರದಲ್ಲಿ ಪ್ರಿಯಾಂಕ್‌ ಖರ್ಗೆ ಇದೆಂಥ ಎಡವಟ್ಟು? ಸಂವಿಧಾನದ ಬಗ್ಗೆ ಹೀಗೆ ಹೇಳೋದಾ? ಟ್ರೋಲಿಗರು ಬಿಡ್ತಾರಾ? | Priyank Kharges Tweet About Rss Being Trolled For Year Mismatch Suc

RSS ಟೀಕಿಸೋ ಭರದಲ್ಲಿ ಪ್ರಿಯಾಂಕ್‌ ಖರ್ಗೆ ಇದೆಂಥ ಎಡವಟ್ಟು? ಸಂವಿಧಾನದ ಬಗ್ಗೆ ಹೀಗೆ ಹೇಳೋದಾ? ಟ್ರೋಲಿಗರು ಬಿಡ್ತಾರಾ? | Priyank Kharges Tweet About Rss Being Trolled For Year Mismatch Suc



RSS ಟೀಕಿಸೋ ಭರದಲ್ಲಿ ಪ್ರಿಯಾಂಕ್‌ ಖರ್ಗೆ ಇದೆಂಥ ಎಡವಟ್ಟು? ಸಂವಿಧಾನದ ಬಗ್ಗೆ ಹೀಗೆ ಹೇಳೋದಾ? ಟ್ರೋಲಿಗರು ಬಿಡ್ತಾರಾ? | Priyank Kharges Tweet About Rss Being Trolled For Year Mismatch Suc

ಆರ್‌ಎಸ್‌ಎಸ್‌ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಸಚಿವ ಪ್ರಿಯಾಂಕ್‌ ಖರ್ಗೆಯವರು ಸಂವಿಧಾನಕ್ಕೆ ಅಗೌರವ ತೋರಿ 100 ವರ್ಷಗಳಾಗಿವೆ ಎಂದು ಟ್ವೀಟ್ ಮಾಡಿದ್ದಾರೆ. ಆದರೆ, ಸಂವಿಧಾನ ಜಾರಿಯಾಗಿ 75 ವರ್ಷಗಳಾಗಿರುವುದರಿಂದ, ಈ ವರ್ಷದ ವ್ಯತ್ಯಾಸದಿಂದಾಗಿ ಅವರು ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ.

ಅತ್ತ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಬಗ್ಗೆ ಕಾಂಗ್ರೆಸ್‌ ಪಕ್ಷದೊಳಗೇ ಭಾರಿ ಗುದ್ದಾಟಗಳು ನಡೆಯುತ್ತಿವೆ. ಇದರ ನಡುವೆಯೇ, ವಿಧಾನಸೌಧದಲ್ಲಿ ಡಿ.ಕೆ.ಶಿವಕುಮಾರ್‌ ಅವರು ಆರ್‌ಎಸ್‌ಎಸ್‌ನ ಗೀತೆ ಹಾಡಿಬಿಟ್ಟರು. ಇವರು ಹೀಗೆ ಹಾಡಿದ್ದರ ಬೆನ್ನಲ್ಲೇ, ಇನ್ನೋರ್ವ ಮುಖ್ಯಮಂತ್ರಿ ಆಕಾಂಕ್ಷಿಯೇ ಎಂದು ಬಿಂಬಿತವಾಗಿರು ಪ್ರಿಯಾಂಕ್‌ ಖರ್ಗೆ ಅವರು ಆರ್‌ಎಸ್‌ಎಸ್‌ ವಿರುದ್ಧ ಸಮರವನ್ನೇ ಸಾರಿಬಿಟ್ಟಿದ್ದಾರೆ. ಪಥಸಂಚಲನ ಕುರಿತಾಗಿ ಇದಾಗಲೇ ಕೋರ್ಟ್ ಮೆಟ್ಟಿಲೂ ಏರಿ, ಕಾಂಗ್ರೆಸ್‌ ವಿರುದ್ಧ ಆದೇಶ ಹೊರಟಿದ್ದರೂ ಪ್ರಿಯಾಂಕ್‌ ಖರ್ಗೆ ಅವರು ತಮ್ಮ ಹಟವನ್ನು ಬಿಟ್ಟಿಲ್ಲ.

ಟ್ವೀಟ್‌ನಲ್ಲಿ ಎಡವಟ್ಟು! 

ಇದರ ನಡುವೆಯೇ, ಅವರು ಒಂದು ಟ್ವೀಟ್‌ ಮಾಡಿ ಅದರಲ್ಲಿ ಎಡವಟ್ಟು ಮಾಡಿಬಿಟ್ಟಿದ್ದಾರೆ. ಇಂಥ ಸಂದರ್ಭಗಳಲ್ಲಿ ಮೈಯೆಲ್ಲಾ ಕಣ್ಣಾಗಿ ಇರಬೇಕು. ಆದರೆ ಪ್ರಿಯಾಂಕ್‌ ಖರ್ಗೆ ಅವರು ಏನೋ ಬರೆಯಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. RSS ನೂರು ವರ್ಷ ಆಗಿರುವ ಹಿನ್ನೆಲೆಯಲ್ಲಿ, ಅದಕ್ಕೆ ಟಾಂಟ್‌ ಕೊಟ್ಟು ಪ್ರಿಯಾಂಕ್‌ ಖರ್ಗೆ (Priyank Kharge) ನಮ್ಮ ರಾಷ್ಟ್ರಧ್ವಜಕ್ಕೆ ಅಗೌರವ ತೋರಿ ನೂರು ವರ್ಷ, ಸ್ವಾತಂತ್ರ ಚಳವಳಿಗೆ ಅಗೌರವ ತೋರಿ 100 ವರ್ಷ ಎಂದು ಬರೆದಿದ್ದಾರೆ. ಇವೆಲ್ಲಾ ಏನೋ ಬರೆದುಬಿಟ್ಟರು. ಆದರೆ ಮುಂದೆ ಬರೆದಿದ್ದು ಮಾತ್ರ ಇನ್ನಿಲ್ಲದಂತೆ ಟ್ರೋಲ್‌ಗೆ ಒಳಗಾಗಿದೆ.

ಅಗೌರವ ತೋರಿ 100 ವರ್ಷ 

ಅಷ್ಟಕ್ಕೂ ಮೂರನೆಯ ವಾಕ್ಯ ಅವರು, ಭಾರತದ ಸಂವಿಧಾನಕ್ಕೆ ಅಗೌರವ ತೋರಿ ನೂರು ವರ್ಷ ಎಂದು ಬರೆದುಬಿಟ್ಟಿದ್ದಾರೆ. ಇದೇ ಎಡವಟ್ಟು ಆಗಿಬಿಟ್ಟಿದೆ. ಏಕೆಂದರೆ ನಮ್ಮ ಭಾರತದ ಸಂವಿಧಾನ ಜಾರಿಗೆ ಬಂದು ನೂರು ವರ್ಷ ಆಗಲೇ ಇಲ್ಲ! ಇದು ಜಾರಿಗೆ ಬಂದಿರುವುದು 26 ಜನವರಿ 1950ರಲ್ಲಿ. ಅಂದ್ರೆ ಈಗ 75 ವರ್ಷ. ಹಾಗಿದ್ರೆ ಸಂವಿಧಾನ ಬರುವ ಮೊದಲೇ RSS ಅದಕ್ಕೆ ಅವಮಾನ ಮಾಡಿಬಿಟ್ಟಿತ್ತಾ ಅಥವಾ ಸಂವಿಧಾನ ಬರುವುದು 25 ವರ್ಷ ಮೊದಲೇ ಆರ್‌ಎಸ್‌ಎಸ್‌ಗೆ ಗೊತ್ತಾಗಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ.

ಮೊದಲು ತಿಳಿದುಕೊಂಡು ಮಾತನಾಡಿ ಒಟ್ಟಿನಲ್ಲಿ, ಆರ್‌ಎಸ್‌ಎಸ್‌ ಬ್ಯಾನ್‌ ಮಾಡುವ ವಿಷಯ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಇದೇ ಟ್ವೀಟ್‌ನಲ್ಲಿ ಪ್ರಿಯಾಂಕ್‌ ಖಗೇ ಅವರು, ಇಡೀ ಬಿಜೆಪಿ ಪರಿಸರ ವ್ಯವಸ್ಥೆ ಎಷ್ಟೇ ಪ್ರಯತ್ನಿಸಿದರೂ, ಅವರು ಆರ್‌ಎಸ್‌ಎಸ್‌ನ ಸಂವಿಧಾನ ವಿರೋಧಿ ಇತಿಹಾಸವನ್ನು ಅಳಿಸಲು ಎಂದಿಗೂ ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಸಂವಿಧಾನ ಜಾರಿಗೆ ಬಂದಿರುವುದು ಯಾವಾಗ ಎಂದು ತಿಳಿದುಕೊಳ್ಳಿ ಮೊದಲು, ಆಮೇಲೆ ಮಾತನಾಡಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಮಾಡಲಾಗುತ್ತಿದೆ. ಸಂವಿಧಾನವನ್ನು ಕೈಯಲ್ಲಿ ಹಿಡಿದು ಓಡಾಡುವ ಕಾಂಗ್ರೆಸ್‌ ನಾಯಕರಿಗೆ ಅದು ಜಾರಿಗೆ ಬಂದಿರುವ ವರ್ಷವೇ ಗೊತ್ತಿಲ್ಲವೇ, ಎಂಥ ವಿಪರ್ಯಾಸ ಎಂದು ಕೆಲವರು ಹೇಳುತ್ತಿದ್ದರೆ, ಸಂವಿಧಾನದ ಪುಸ್ತಕದ ಒಂದೇ ಒಂದು ಪುಟದ ಮಾಹಿತಿಯನ್ನಾದೂ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

Scroll to load tweet…



Source link

Leave a Reply

Your email address will not be published. Required fields are marked *