Virosh Reception ರಶ್ಮಿಕಾ ಮಂದಣ್ಣ ವಿಜಯ್ ಅದ್ಧೂರಿ ರೆಸೆಪ್ಶನ್, ಮೈಸೂರು ರೇಷ್ಮೆ ಸೀರೆಯಲ್ಲಿ ಮಿಂಚಿದ ಶ್ರೀವಲ್ಲಿ | Virosh Celebration Rashmika Mandanna Mysore Silk Saree Steals The Spotlight At Hyderabad Reception

ರಶ್ಮಿಕಾ ಮಂದಣ್ಣ ವಿಜಯ್ ಅದ್ಧೂರಿ ರೆಸೆಪ್ಶನ್, ಮೈಸೂರು ರೇಷ್ಮೆ ಸೀರೆಯಲ್ಲಿ ಮಿಂಚಿದ ಶ್ರೀವಲ್ಲಿ, ಹೈದರಾಬಾದ್‌ನಲ್ಲಿ ಸದ್ಯ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದೆ. ಸೆಲೆಬ್ರೆಟಿಗಳ ದಂಡೆ ಆಗಮಿಸಿದ್ದು, ಪ್ರಧಾನಿ ಮೋದಿ ಪಾಲ್ಗೊಳುವ ಸಾಧ್ಯತೆ ಕೇಳಿಬರುತ್ತಿದೆ. 

ಹೈದರಾಬಾದ್ (ಮಾ.04) ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮದುವೆ ರೆಸೆಪ್ಶನ್ ಅದ್ಧೂರಿಯಾಗಿ ಆರಂಭಗೊಂಡಿದೆ. ಹೈದರಾಬಾದ್‌ನ ಖಾಸಗಿ ಹೊಟೆಲ್‌ನಲ್ಲಿ ಆಯೋಜನೆಗೊಂಡಿರುವ ಈ ಸಮಾರಂಭದಲ್ಲಿ ಹಲವು ಸೆಲೆಬ್ರೆಟಿಗಳು, ಗಣ್ಯರು ಪಾಲ್ಗೊಂಡಿದ್ದಾರೆ. ವಿಶೇಷ ಅಂದರೆ ಈ ರಿಸೆಪ್ಶನ್‌ನಲ್ಲಿ ಸೆಲೆಬ್ರೆಟಿ ಜೋಡಿಗಳ ಡ್ರೆಸ್ ದೇಶದ ಗಮನ ಸೆಳೆದಿದೆ. ದೇಸಿ ಲುಕ್‌ನಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದಾರೆ. ಇದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಮೈಸೂರು ರೇಷ್ಮೆ ಸೀರೆಯಲ್ಲಿ ರಶ್ಮಿಕಾ ಮಂದಣ್ಣ

ಅದ್ಧೂರಿ ರೆಸೆಪ್ಶನ್ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಸೀರೆ ಎಲ್ಲರ ಗಮನ ಸೆಳೆದಿದೆ. ಮೈಸೂರು ರೇಷ್ಮೆ ಸೀರೆಯಲ್ಲಿ ರಶ್ಮಿಕಾ ಮಂಚಿದ್ದಾರೆ. ಕೆಂಪು ಬಣ್ಣದ ಮೈಸೂರು ಸಿಲ್ಕ್ ಸ್ಯಾರಿ ಜೊತೆ ಒಪ್ಪುವಂತ ಆಭರಣ ಧರಿಸಿದ್ದಾರೆ. ಮೈಸೂರಿನ ರೇಷ್ಮೆ ಸೀರೆಯಲ್ಲಿ ರಶ್ಮಿಕಾ ಸೌಂದರ್ಯ ಡಬಲ್ ಆಗಿದೆ. ರಿಸೆಪ್ಶನ್‌ನಲ್ಲಿ ಕರ್ನಾಟಕದ ಶ್ರೇಷ್ಠ ಪರಂಪರೆಯ ಮೈಸೂರು ಸೀರೆಯುಟ್ಟ ರಶ್ಮಿಕಾಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತೆಲುಗು ಸೇರಿದಂತೆ ಹಲವು ಸಿನಿಮಾ ಕ್ಷೇತ್ರದ ಸೂಪರ್ ಸ್ಟಾರ್‌ಗಳು ರಶ್ಮಿಕಾ-ವಿಜಯ್ ಮದುವೆ ರಿಸೆಪ್ಶನ್‌ನಲ್ಲಿ ಪಾಲ್ಗೊಂಡಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಹಾಗೂ ಕುಟುಂಬ, ನಟ ರವಿತೇಜ, ತೆಲುಗು ಸ್ಟಾರ್ ನಾನಿ, ನವೀನ್ ಪೊಲಿಶೆಟ್ಟಿ, ಟಾಲಿವುಡ್ ನಿರ್ಮಾಪಕ ದಿಲ್ ರಾಜು, ಪುಷ್ಪಾ ಸಿನಿಮಾ ನಿರ್ದೇಶಖ ಸುಕುಮಾರ್, ಮೆಘಾಸ್ಟಾರ್ ಚಿರಂಜೀವಿ, ಮಹೇಶ್ ಬಾಬು ಪತ್ನಿ ನಮ್ರತಾ ಹಾಗೂ ಕುಟುಂಬ ಸೇರಿದಂತೆ ಹಲವು ಸೆಲೆಬ್ರೆಟಿಗಳು ಪಾಲ್ಗೊಂಡಿದ್ದಾರೆ.

ಉದಯಪುರದಲ್ಲಿ ಮದುವೆ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ರಾಜಸ್ಥಾನದ ಉದಯಪುರದಲ್ಲಿ ನಡೆದಿತ್ತು. ಕುಟುಂಬಸ್ಥರು ಹಾಗೂ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಸಂಪ್ರದಾಯದ ಬದ್ಧ ಮದುವೆ ಕಾರ್ಯಕ್ರಮ ದೇಶದ ಗಮನ ಸೆಳೆದಿತ್ತು. ಮದುವೆ ಮಹೋತ್ಸವದಲ್ಲೂ ರಶ್ಮಿಕಾ ಹಾಗೂ ವಿಜಯ್ ಡ್ರೆಸ್ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು.

Scroll to load tweet…

Source link

Leave a Reply

Your email address will not be published. Required fields are marked *